ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಗೀತ ಗಾಯನ ಕಾರ್ಯಕ್ರಮ
Singing program as part of Karnataka Rajyotsava
ಮುದ್ದೇಬಿಹಾಳ 04: ಪಟ್ಟಣದ ಮುಖ್ಯರಸ್ತೆ ಮಾರ್ಗದಲ್ಲಿರುವ ಬೆಂಗಳೂರು ಬೇಕರಿ ಸಭಾಭವನದಲ್ಲಿ ಸೋಮವಾರ ಸಾಯಂಕಾಲ 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಆಯ್ದ ಕವಿಗಳಿಂದ ಕವನ ವಾಚನ ಹಾಗೂ ಗೀತ ಗಾಯನ ಕಾರ್ಯಕ್ರಮವನ್ನು ಪಟ್ಟಣದ ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಶರಣು ಪಾಟೀಲ ತಬಲಾ ನುಡಿಸುವ ಮೂಲಕ ಉದ್ಘಾಟಿಸಿದರು.
ಕನ್ನಡ ಭಾಷೆ ಕೇವಲ ಒಂದು ದಿನದ ರಾಜ್ಯೋತ್ಸವ ಆಚರಣೆಗೆ ಸೀಮೀತಿವಾಗದೆ ಕನ್ನಡವನ್ನು ಉಸಿರಾಗಿಸಿ, ಪ್ರೀತಿಸಿ, ಗೌರವಿಸಿ, ಉಳಿಸಿ ಬೆಳೆಸಲು ಅನ್ಯಭಾಷೆಯನ್ನು ಬಳಕೆ ಕೈಬಿಟ್ಟು ಕನ್ನಡ ಪ್ರಮುಖ ಭಾಷೆಯನ್ನಾಗಿ ಬಳಸುವಂತಾಗಬೇಕು ಅಂದಾಗ ಮಾತ್ರಕನ್ನಡ ಹಿರಿಮೆ ಸಾರಲು ಸಾಧ್ಯಎಂದು ಪಟ್ಟಣದ ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಶರಣು ಪಾಟೀಲ ಹೇಳಿದರು.
ಪಟ್ಟಣದ ಮುಖ್ಯರಸ್ತೆ ಮಾರ್ಗದಲ್ಲಿರುವ ಬೆಂಗಳೂರು ಬೇಕರಿ ಸಭಾಭವನದಲ್ಲಿ ಸೋಮವಾರ ಸಾಯಂಕಾಲ 70ನೇ ಕರ್ನಾಟಕರಾಜ್ಯೋತ್ಸವದ ಅಂಗವಾಗಿ ತಾಲೂಕಾಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದಆಯ್ದ ಕವಿಗಳಿಂದ ಕವನ ವಾಚನ ಹಾಗೂ ಗೀತ ಗಾಯನ ಕಾರ್ಯಕ್ರಮವನ್ನು ತಬಲಾ ನೂಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ರಾಜ್ಯೋತ್ಸವವು ನಮ್ಮ ನಾಡಿನಗೌರವದ ದಿನ. ಈ ದಿನವು ಕನ್ನಡ ನಾಡಿನಐಕ್ಯತೆ, ಭಾಷೆಯವೈಭವ ಮತ್ತು ಸಾಹಿತ್ಯ-ಸಂಸ್ಕೃತಿಯ ಶಾಶ್ವತ ಪರಂಪರೆಯ ಪ್ರತೀಕವಾಗಿದೆ
ಕನ್ನಡ ಭಾಷೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಪಂಪ, ರನ್ನ, ಪೊನ್ನಮುಂತಾದ ಆದಿಕವಿಗಳಿಂದ ಆರಂಭವಾದ ಸಾಹಿತ್ಯ ಪರಂಪರೆಯು ಬಸವಣ್ಣ, ಅಕ್ಕಮಹಾದೇವಿ, ದ.ರಾ. ಬೇಂದ್ರೆ, ಕುವೆಂಪು, ಮುಂತಾದ ಅನೇಕ ಸೃಜನಶೀಲ ಕವಿಗಳಿಂದ ಬೆಳೆಯುತ್ತಾ ಬಂದಿರುವುದನ್ನು ನಾವು ಕಂಡಿದ್ದು, ಇಂತಹ ಪುಣ್ಯ ನಾಡಲ್ಲಿ ಹುಟ್ಟಿ ಕನ್ನಡಿಗರಾಗಿ ಬಾಳುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೆ ಸರಿ
ಆದರೇ ಇಂದು ಅನ್ಯ ಭಾಷೆಯ ವೈಭವಿಕರಿಸುವ ಮೂಲಕ ನಮ್ಮ ಮಾತೃಭಾಷೆಯನ್ನೇ ಮರೆತುಬಿಟ್ಟಿದ್ದೇವೆ, ಎಲ್ಲರಂಗದಲ್ಲೂ ಕನ್ನಡ ಭಾಷೆ ಕಡ್ಡಾಯಗೊಳಿಸಿದ ಸರಕಾರದ ವಿರುದ್ಧ ಕಾನೂನು ಸಮರಕ್ಕೆ ಇಳಿಯುವ ಪ್ರಸಂಗಳನ್ನು ನಾವಿಂದುಕಾಣುತ್ತಿದ್ದೇವೆ, ಆಂಗ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ತಮ್ಮ ಭಾಷೆಯ್ನು ಬಿಟ್ಟು ಬೇರೆಯಾವ ಬಾಷೆಗೂ ಮಾನ್ಯತೆ ನೀಡುವುದಿಲ್ಲ ವ್ಯವಹಾರಿಕವಾಗಿಯೂ ಅವರು ತಮ್ಮ ಭಾಷೆಯನ್ನೇ ಬಳಸಿ ಗೌರವಿಸುತ್ತಾರೆ.
ಕರ್ನಾಟಕದಲ್ಲಿ ಮಾತ್ರಕನ್ನಡ ಮಾತನಾಡುವುದು ವ್ಯವಹರಿಸುವುದನ್ನು ಬಿಟ್ಟುಅವರ ಭಾಷೆಯನ್ನೇ ವೈಭವಿಕರಿಸಿ ಮಾತನಾಡುತ್ತಿರುವುದರಿಂದಕನ್ನಡ ಭಾಷೆ ಬೇಳೆಸು ಹೇಗೆ ಸಾಧ್ಯವಾಗುತ್ತದೆ ಮೊದಲು ಈ ಪದ್ದತಿ ನಮ್ಮರಾಜ್ಯದಲ್ಲಿಎಲ್ಲರೂಕೈಬಿಡುವಂತಾಗಬೇಕು, ನಿತ್ಯ ನಮ್ಮದೈನಂದಿನ ವ್ಯವಹಾರಗಳಲ್ಲಿ ಕನ್ನಡ ಕಡ್ಡಾಯವಾಗಬೇಕು ಅನ್ಯ ಭಾಷೆಯ ವ್ಯಾಮೋದಿಂದ ಹೊರಬಂದು ಪ್ರತಿಯೊಬ್ಬರುಕನ್ನಡ ಉಳಿಸಿ ಬೆಳೆಸಲು ಮುಂದಾಗಬೇಕುಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಬಿ ಎಂ ಹಿರೇಮಠ ಅವರು ಮಾತನಾಡಿ, ಈ ದಿನ ಕನ್ನಡ ಸಾಹಿತ್ಯ, ನಾಡು-ನುಡಿ, ಕಥೆ-ಕಾವ್ಯ, ನೃತ್ಯ-ಸಂಗೀತ ಮತ್ತುಜನಪದ ಪರಂಪರೆಯ ಕೃಷಿ ಬದುಕಿನ ಎಲ್ಲಾರೂಪಗಳನ್ನು ಸ್ಮರಿಸುವ ದಿನವಾಗಿದೆ. ಇದು ನಮ್ಮ ನಾಡಿನಗೌರವ, ಸ್ವಾಭಿಮಾನ ಮತ್ತು ಸಾಂಸ್ಕೃತಿಕಏಕತೆಯೊಂದಿಗೆ ಪ್ರತಿಯೊಬ್ಬ ಪ್ರಜೆಯು ಸೇರಿದಂತೆ ಕರ್ನಾಟಕದಲ್ಲಿ ಕನ್ನಡವೇ ಸಾಮ್ರಾಟ ಭಾಷೆಯಾಗಿದೆ ನಾಡಿನಾದ್ಯಂತ ಪ್ರತಿಯೊಬ್ಬರು ವ್ಯವಹಾರಿಕ ಭಾಷೆಯಾಗಿ ಕನ್ನಡವನ್ನೇ ಜೀವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮಜನರ ನಡತೆ, ಮಾತು, ಸಂಸ್ಕಾರ - ಇವೆಲ್ಲವೂ ಕನ್ನಡದ ನಿಜವಾದ ಆತ್ಮವನ್ನು ಪ್ರತಿಬಿಂಬಿಸುತ್ತವೆ.
ಸಧ್ಯಕಸಾಪದ ವತಿಯಿಂದ ಇಂತಹ ಅದ್ಭೂತ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡದಯುವ ಕವಿಗಳಿಗೆ ಮತ್ತುಕನ್ನಡ ಮನಸುಗಳ ಚೈತನ್ಯ ತುಂಬುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನಿಯ ಎಂದರು.ಕಸಾಪ ತಾಲೂಕಾ ಅಧ್ಯಕ್ಷ ಕಾಮರಾಜ ಬಿರಾದಾರ ಹಾಗೂ ಗೌರವ ಕಾರ್ಯದರ್ಶಿಗಳಾದ ವಾಯ್‌ಎಚ್ ವಿಜಯಕರ ಅವರು ಪ್ರಾಸ್ತಾವಿಕ ಮಾತನಾಡಿದರು, ಕಾಳಮ್ಮ ಪತ್ತಾರಗಾಯನ ಹಾಗೂ ಕುಂಟೋಜಿಯ ಮರೇಪ್ಪ ವಾಳದವರ ಹಂತಿಪದ, ದೇವರ ಹುಲಗಬಾಳದ ಮಮತಾಜ ಬಿ. ತಂಡದವರು ಸಂಪ್ರಾಯ ಪದಗಳನ್ನು ಹಾಡಿ ರಂಜಿಸಿದರು. 20ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು. ಕಾರ್ಯದರ್ಶಿ ಸಿದ್ದನಗೌಡ ಬಿಜ್ಜೂರ ಕಾರ್ಯಕ್ರಮ ನಿರೂಪಿಸಿದರು.ಸಿಆರ್ ಪಿ ಗುಂಡುಚವ್ಹಾಣ ಸ್ವಾಗತಿಸಿದರು.
ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಸಾಹಿತಿಗಳಾದ ಸಿ ಬಿ ಇಟಗಿ,ಅಶೋಕ ಮಣಿ, ಬಸವರಾಜಕೋರಿ, ಬಸವರಾಜ ನಾಲತವಾಡ, ಬಿ ಪಿ ಪಾಟೀಲ, ಎಂಎಸ್ ಬಿರಾದಾರ, ಮಹಾದೇವಿ ನಾಲತವಾಡ, ಶಾಂತಲಾ ಪಾಟೀಲ, ಬಸಲಿಂಗಪ್ಪರಕ್ಕಸಗಿ, ಅಮರೇಶ ಗೂಳಿ, ಸಂಗಪ್ಪ ಮೇಲಿನಮನಿ, ಶ್ರೀ ಶೈಲ ಪೂಜಾರಿ, ಎ ಆರ್ ಮುಲ್ಲಾ, ಎಂ ಎಂ ಬೆಳಗಲ್ಲ, ಸೇರಿದಂತೆ ಹಲವರುಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 