ಸಿಂದಗಿ: ಸರ್ಕಾರಿ ನೌಕರಿ ಎಂದರೆ ವೇತನಕ್ಕಾಗಿ, ಸಮಯಕ್ಕಾಗಿ ಎನ್ನುವ ಜನರಿದ್ದಾರೆ

ವಿಜಯಕುಮಾರ ಪತ್ತಾರ

ಸಿಂದಗಿ 26: ಸರ್ಕಾರಿ ಕಚೇರಿಗಳೆಂದರೆ ಮೂಗು ಮೂರಿಯುವ ಇಂದಿನ ದಿನಮಾನದಲ್ಲಿ ಜಿಲ್ಲೆಯ ಇತರ ತಾಲೂಕುಗಳಿಗೆ ಮಾದರಿಯಾಗುವಂತೆ ಮಾಡಲಾಗಿದೆ. ಕಚೇರಿಯ ಆವರಣದಲ್ಲಿ ಗೋಡೆಗಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಹಾಕಿಕೊಂಡ ಕಾರ್ಯಕ್ರಮಗಳನ್ನು ಚಿತ್ರ ಬಿಡಿಸುವ ಮೂಲಕ ಕಚೇರಿಯ ಚಿತ್ರಣವನ್ನೆ ಬದಲಾಯಿಸಿದ್ದಾರೆ. ಅಧಿಕಾರಿಗಳು ಮನಸ್ಸು ಮಾಡಿದರೆ ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿ ಮಾಡಲು ಸಾಧ್ಯ ಎನ್ನುವುದಕ್ಕೆ ಇಲ್ಲಿನ ಕ್ಷೇತ್ರಶಿಕ್ಷಣಾಧಿಕಾರಿಗಳ ಆವರಣದಲ್ಲಿನ ಕ್ಷೇತ್ರಸಂಪನ್ಮೂಲ ಕೇಂದ್ರ ಸಾಕ್ಷಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಸಕರ್ಾರಿ ನೌಕರಿ ಎಂದರೆ ಕೇವಲ ವೇತನಕ್ಕಾಗಿ ಮತ್ತು ಸಮಯಕ್ಕಾಗಿ ಮಾಡುವವರು ಬಹಳಷ್ಟು ಜನರಿದ್ದಾರೆ. ಇಲ್ಲಿನ ಕ್ಷೇತ್ರಸಂಪನ್ಮೂಲ ಕೇಂದ್ರ ಈ ಮೊದಲು ಸಾಮಾನ್ಯ ಕಚೇರಿತರವಿತ್ತು. ಈ ಕೇಂದ್ರಕ್ಕೆ ಕ್ಷೇತ್ರ ಸಮನ್ವಯಾಧಿಕಾರಿಗಳಾಗಿ ಸಂತೋಷಕುಮಾರ ಬಿಳಗಿ ಅವರು ಅಧಿಕಾರ ವಹಿಸಿಕೊಂಡನಂತರ ಒಂದಿಲ್ಲ ಒಂದು ರೀತಿಯಾಗಿ ವಿಶೇಷ ತರಬೇತಿ, ಸಾಧನೆಗಳು ಮತ್ತು ಕಾರ್ಯಕ್ರಮಗಳು ನಡೆಯುತ್ತ ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದೆ.

ಇಲ್ಲಿ ಸರಕಾರಿ, ಅನುದಾನಿತ ಶಾಲೆಯ ಶಿಕ್ಷಕರಿಗೆ ಗುಣಾತ್ಮಕ ಶಿಕ್ಷಣ ನೀಡುವ ತರಬೇತಿ ನಡೆಯುತ್ತಿದೆ. ಮಕ್ಕಳು ತಮ್ಮ ಹಕ್ಕುಳಲ್ಲೊಂದಾದ ಶೈಕ್ಷಣಿಕ ಹಕ್ಕನ್ನು ಅನುಭವಿಸಲು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಮರಳಿ ಶಾಲೆಗೆ ತರುವ ಕಾರ್ಯ ನಡೆಯುತ್ತಿದೆ. ಅವರ ಶೈಕ್ಷಣಿಕ ಕಾಳಜಿಯ ಕಾರ್ಯಗಳು ಜನಮೆಚ್ಚುಗೆ ಪಡೆದಿವೆ.

ಕ್ಷೇತ್ರಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಅವರು ಕಳೆದ ಮೂರು ವರ್ಷದಲ್ಲಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಕಚೇರಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ. ಸರ್ಕಾರಿ ಶಾಲೆಗಳನ್ನು ಕ್ರಿಯಾಶೀಲ, ಆಕರ್ಷಕ ಮತ್ತು ಗುಣಮಟ್ಟದ ಶಿಕ್ಷಣ ಕೇಂದ್ರಗಳಾಗಿ ಮಾಡುವ ನಿಟ್ಟಿನಲ್ಲಿ ತಮ್ಮ ಕಚೇರಿಯಿಂದಲೇ ಕೆಲಸವನ್ನು ಆರಂಭಿಸಿದ್ದಾರೆ. 

ಸಮನ್ವಯ ಶಿಕ್ಷಣ, ಶಾಲೆಯಲ್ಲಿ ಹೊರಗುಳಿದ ಮಕ್ಕಳನ್ನು ಶಾಲೆಗೆ ಆಮಂತ್ರಿಸುವ ಚಿತ್ರ, ಪಠ್ಯ ಪುಸ್ತಕ ಹಂಚುವ ಚಿತ್ರ, ಬಾಲ ಕಾರ್ಮಿಕರ ನಿಷೇಧ, ಮಕ್ಕಳ ಸಹಾಯವಾಣಿ, ಸೈಕಲ್ ವಿತರಿಸುವ ಕಾರ್ಯಕ್ರಮ, ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವಂತಹ ಚಿತ್ರ,  ಮಕ್ಕಳು ಕಲಿಲಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಚಿತ್ರ, ಶಿಕ್ಷಕರು ಮಾರ್ಗದರ್ಶನ ನೀಡುವಂಥ ಚಿತ್ರ, ಭೇಟಿ ಬಚಾವೋ ಭೇಟಿ ಪಡಾವೋ ಮುಂತಾದ ಹಲವಾರು ಚಿತ್ರಗಳನ್ನು ತಮ್ಮ ಕಚೇರಿಯ ಗೋಡೆಗಳಲ್ಲಿ ಬರೆಸಿರುತ್ತಾರೆ.


ಶಾಲೆಯಿಂದ ದೂರುಳಿದ ಮಕ್ಕಳನ್ನು ಗುರುತಿಸಿ ಮರುಳಿ ಶಾಲೆಗೆ ಮರುಳಿ ಕಳುಹಿಸುವ ಕಾರ್ಯದಲ್ಲಿ ಸ್ವತಃ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಅವರ ಕಾರ್ಯ ಶ್ಲಾಘನೀಯ. 

  -ಸುರೇಶಬಾಬು ಕೊಟೆಖಾನಿ, ಗಬಸಾವಳಗಿ.

ಶಿಕ್ಷಕರ, ವಿದ್ಯಾಥರ್ಿಗಳ ಹಾಗೂ ಪಾಳಕರ ಸಮಸ್ಯೆಗಳನ್ನು ಪರಿಹರಿಸುವ ಜೊತೆಗೆ ಶಿಕ್ಷಕರಿಗೆ ಉತ್ತಮ ತರಬೇತಿ ನೀಡುವ ಮೂಲಕ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಜಿಲ್ಲೆಯಲ್ಲಿ ಅತ್ಯುತ್ತಮವಾದ ಕ್ಷೇತ್ರ ಸಂಪನ್ಮೂಲ ಕೇಂದ್ರವಾಗಿದೆ.

- ಎಂ.ಎಸ್.ಚೌಧರಿ

ಅಧ್ಯಕ್ಷ, ಕನರ್ಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಶಾಖೆ.