ಆರೋಹಿ ಐಹೊಳಿಗೆ ಬೆಳ್ಳಿ ಪದಕ
Silver medal for climber Aiholi
ಧಾರವಾಡ, ನ.04: ಯುನೆಸ್ಕೋ ಅಧಿಕೃತ ಪಾಲುದಾರ ಸಂಸ್ಥೆ, ಎ.ಬಿ.ಎಸ್.ಎಸ್. ಗ್ಲೋಬಲ್ ಕೌನ್ಸಿಲ್ ಆಫ್ ಆರ್ಟ್ ಆಂಡ್ ಕಲ್ಚರ್, ಥೈಲ್ಯಾಂಡ್‌ನ ಪಟ್ಟಾಯಾದಲ್ಲಿ, ಬುರಾಫಾ ವಿಶ್ವವಿದ್ಯಾಲಯ ಇತ್ತೀಚೆಗೆ (ಅಕ್ಟೋಬರ್ 26-27), ಆಯೋಜಿಸಿದ್ದ, ಪ್ರದರ್ಶಕ ಕಲೆಗಳ, 15ನೇ ಸಾಂಸ್ಕೃತಿಕ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿದ್ದ, ಕು.ಆರೋಹಿ ಸದಾಶಿವ ಐಹೊಳಿ, ಕಥಕ್ ನೃತ್ಯ ಪ್ರದರ್ಶನದಲ್ಲಿ, ಬೆಳ್ಳಿ ಪದಕದೊಂದಿಗೆ, ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕರ್ನಾಟಕದಿಂದ, ಭಾರತವನ್ನು ಪ್ರತಿನಿಧಿಸಿದ ಏಕೈಕ ಸಾಂಸ್ಕೃತಿಕ ಪ್ರತಿನಿಧಿ ಆರೋಹಿ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ, ಕಥಕ್ ನೃತ್ಯ ಪ್ರದರ್ಶಿಸಿ, ಪ್ರತಿಷ್ಟಿತ ಪುರಸ್ಕಾರಕ್ಕೆ ಭಾಜನವಾಗಿದ್ದಾರೆ. ಇಲ್ಲಿನ ಶ್ರೀ ಸತ್ಯಸಾಯಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ, ಪಿ.ಯೂ.ಸಿ. ದ್ವಿತೀಯ ವರ್ಷದ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ನಿರತರಾಗಿದ್ದಾರೆ. ಶಾಂತಲಾ ನೃತ್ಯಾಲಯದ, ವಿದುಷಿ ವಿಜೇತಾ ವೇರ್ಣೇಕರ ಅವರಲ್ಲಿ, ಭರತನಾಟ್ಯ ಹಾಗೂ ಕಥಕ್ ನೃತ್ಯಾಭ್ಯಾಸದಲ್ಲಿ ತೊಡಗಿದ್ದಾರೆ.
ಧಾರವಾಡ ಆಕಾಶವಾಣಿಯ, ಉನ್ನತ ಶ್ರೇಣಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಹಾಗೂ ನಿಲಯದ ಕಲಾವಿದ, ಪಂಡಿತ ಸದಾಶಿವ ಐಹೊಳಿ ಅವರ ಕಿರಿಯ ಪುತ್ರಿ. ಶ್ರೀ ಸತ್ಯಸಾಯಿ ಪದವಿಪೂರ್ವ ಮಹಾವಿದ್ಯಾಲಯದ, ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ವರ್ಗ ಹಾಗೂ ಆಕಾಶವಾಣಿಯ ಅಧಿಕಾರಿ ವರ್ಗ, ಆರೋಹಿ ಅವರನ್ನು ಅಭಿನಂದಿಸಿದೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 