ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ಅಂಜಲಿ ಭರತನಾಟ್ಯ ಕಲಾ ಕೇಂದ್ರದ ವತಿಯಿಂದ ಬೆಳ್ಳಿ ಮಹೋತ್ಸವ ಕಾರ್ಯಕ್ರಮ
Silver Jubilee celebration program by Anjali Bharatanatyam Art Center at Independent PU College
ವಿಜಯನಗರ 21: ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ಅಂಜಲಿ ಭರತನಾಟ್ಯ ಕಲಾ ಕೇಂದ್ರದ ವತಿಯಿಂದ ಬೆಳ್ಳಿ ಮಹೋತ್ಸವ ಹಾಗೂ ನೃತ್ಯೋತ್ಸವ 2025ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಹೆಚ್ ಏನ್ ಮೊಹಮ್ಮದ್ ಇಮಾಮ ನಿಯಾಜಿ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ವಿಶ್ವದಲ್ಲೇ ಅತ್ಯಂತ ವೈಭವಯುತವಾಗಿ ಸಂಗೀತ ಕಲೆ, ಸಾಹಿತ್ಯ, ಸಂಸ್ಕೃತಿ, ನೃತ್ಯ ಪರಂಪರೆಗಳು ಮುಂತಾದವುಗಳು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದವು. ಇಂತಹ ಪುಣ್ಯ ಭೂಮಿಯಲ್ಲಿ ಹುಟ್ಟಿರುವ ನಾವೇ ಧನ್ಯರೆಂದರು. ತದನಂತರ ಈಗ ಶ್ರೀಮತಿಯ ಅಂಜಲಿಯವರು ಆ ಒಂದು ಭರತನಾಟ್ಯ ಕಲೆ ಮತ್ತು ಸಂಸ್ಕೃತಿಗೆ ಜೀವಕಳೆಯನ್ನು ತಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಅವರು ಇನ್ನು ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜಯನಗರದ ಕೀರ್ತಿ ಪತಾಕೆ ಹಾರಿಸಲಿ ಎಂದು ಹಾರೈಸಿದರು.
ಈ ನಿಟ್ಟಿನಲ್ಲಿ ವಿಜಯನಗರ ಕ್ಷೇತ್ರದ ಜನತೆಯ ಪರವಾಗಿ ಹಾಗೂ ನನ್ನ ವೈಯಕ್ತಿಕವಾಗಿ ಅಂಜಲಿಯವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು. ಸುಮಾರ್ 25 ವರ್ಷಗಳಿಂದ ಯಾವುದೇ ರೀತಿಯ ಪ್ರತಿಫಲ ಅಪೇಕ್ಷೆ ಮಾಡದೆ ಹಗಲು ರಾತ್ರಿ ಎನ್ನದೆ ತನ್ನ ಸ್ವಂತ ಮಕ್ಕಳಂತೆ ಭರತನಾಟ್ಯದ ವಿದ್ಯೆಯನ್ನು ಕಲಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾಲಕರ ಪೋಷಕರ ಹಾಗೂ ನನ್ನ ಸಹಕಾರ ಅಂಜಲಿ ಅವರಿಗೆ ಬೆಂಬಲ ಸದಾ ಇರುತ್ತದೆ ಎಂದರು. ಹಾಗೂ ಸಮಾಜದಲ್ಲಿ ಯಾವುದೇ ರೀತಿಯ ಸಾಧನೆ ಯ ಹಾದಿಯಲ್ಲಿ ನಡೆಯುವಾಗ ಕಲ್ಲು, ಮುಳ್ಳು, ಮಾನ, ಅವಮಾನ, ತಿರಸ್ಕಾರ, ಪರಿಶ್ರಮ, ಗೊಂದಲ, ಮುಂತಾದವುಗಳು ಸರ್ವೇಸಾಮಾನ್ಯ. ಇವೆಲ್ಲವುಗಳನ್ನು ಮೀರಿ ಮುಂದೆ ನಡೆದಾಗ ಮುಂದೊಂದು ದಿನ ಖಂಡಿತವಾಗಿ ಸನ್ಮಾನಗಳ ಸುರಿಮಳಯೇ ಹರಿಯುತ್ತದೆ ಎನ್ನುವುದಕ್ಕೆ ಅಂಜಲಿಯವರೇ ಸಾಕ್ಷಿ ಎಂದರು.
ಮಕ್ಕಳ ಭವಿಷ್ಯದ ಪ್ರತಿಭೆಯನ್ನು ಗುರುತಿಸುವುದು ಕೂಡ ಪ್ರತಿಯೊಬ್ಬ ತಂದೆ ತಾಯಿಗಳ ಜವಾಬ್ದಾರಿ ಹಾಗಾಗಿ ಮಕ್ಕಳನ್ನು ಅಂಕಪಟ್ಟಿಗೆ ಸೀಮಿತಗೊಳಿಸದೆ ಇತರೆ ಕಲೆಗಳಲ್ಲಿ ತೊಡಗಿಸಬೇಕೆಂದು ಪಾಲಕ ಪೋಷಕರಲ್ಲಿ ಮನವಿ ಮಾಡಿಕೊಂಡರು. ಪುರಾತನ ಕಾಲದಲ್ಲಿ ಕಲೆ ಸಂಸ್ಕೃತಿ ನೃತ್ಯ ಮುಂತಾದವುಗಳಿಗೆ ರಾಜಶ್ರಯ ವಿತ್ತು ಆದರೆ ಇಂದಿನ ದಿನಗಳಲ್ಲಿ ಯಾವುದೇ ರೀತಿಯ ರಾಜಾಶ್ರಯವೂ ಇರುವುದಿಲ್ಲ, ಪ್ರೋತ್ಸಾಹವು ಇರುವುದಿಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಘನ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಂದೇ ಆಸರೆಯಾಗಿರುತ್ತದೆ. ಹಂಪಿ ಉತ್ಸವದಂತಹ ಬೃಹತ್ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಾನ್ಯ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು. ಹಾಗೂ
ಈ ಒಂದು ಅಂಜಲಿ ಭರತನಾಟ್ಯ ಕಲಾ ತಂಡದ ನಿರ್ವಹಣೆಗೆ ವಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ನೀಡುತ್ತೇನೆಂದರು. ಹಾಗೂ ಈ ಒಂದು ಅಂಜಲಿ ಭರತನಾಟ್ಯ ಕಲಾ ಕೇಂದ್ರದ ಕಟ್ಟಡದ ನಿರ್ಮಾಣಕ್ಕೆ ಹೊಸಪೇಟೆ ನಗರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಾಗರೀಕರ ಸೌಲಭ್ಯಗಳ ನಿವೇಶನಕ್ಕೆ ಸಂಬಂಧಿಸಿದಂತೆ ಹಾಗೂ ಅದನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ರೂಪೇಶ ಕುಮಾರ, ಉಪಾಧ್ಯಕ್ಷರಾದ ಜೀವರತ್ನಂ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಸಿದ್ಧಲಿಂಗೇಶ ರಂಗಣ್ಣನವರ್, ವಿಜಯನಗರ ಮಹಾವಿದ್ಯಾಲಯದ ಅಡಳಿತ ಮಂಡಳಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಮೆಟ್ರಿ, ಹಾಗೂ ಈಶ್ವರ ನಾಯಕ ಮಧುರಚೆನ್ನ ಶಾಸ್ತ್ರಿ, ಹಾಗೂ ಅಂಜಲಿ ಭರತನಾಟ್ಯ ಕಲಾ ಕೇಂದ್ರ ಅಧ್ಯಕ್ಷರಾದ ಅಂಜಲಿ ಅವರು ಹಾಗೂ ಭರತನಾಟ್ಯ ಕಲಾ ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 