ಇಂದು ಸುವರ್ಣಸೌಧವರೆಗೆ ಪಂಚಮಸಾಲಿಗರ ಮೌನ ಪ್ರತಿಭಟನಾ ಮೆರವಣಿಗೆ
Silent protest march of Panchamasali till Suvarna Soudha today
ರಬಕವಿ-ಬನಹಟ್ಟಿ 09: ಕಳೆದ ವರ್ಷ ಲಿಂಗಾಯತ ಪಂಚಮಸಾಲಿ ಶ್ರೀಗಳ ಮೇಲೆ ಮತ್ತು ಸಮಾಜ ಬಾಂಧವರ ಮೇಲೆ ನಡೆಸಿದ ದೌರ್ಜನ್ಯ ಖಂಡಿಸಿ ಇದೇ ಡಿ.10 ರಂದು ಬೆಳಗಾವಿ ಗಾಂಧಿ ಭವನದಿಂದ ಸುವರ್ಣಸೌಧವರೆಗೆ ರಾಜ್ಯಾದ್ಯಂತ ಪಂಚಮಸಾಲಿ ಸಮಾಜ ಬಾಂಧವರು ಮೌನ ಪ್ರತಿಭಟನೆ ನಡೆಸಲಿದ್ದಾರೆಂದು ಪಂಚಮಸಾಲಿ ಸಮಾಜದ ರಬಕವಿ-ಬನಹಟ್ಟಿ ನಗರ ಘಟಕದ ಅಧ್ಯಕ್ಷ ಮಹಾದೇವ ದೂಪದಾಳ ಹೇಳಿದರು. ರಬಕವಿಯ ದಲಾಲ ಫಾರ್ಮಹೌಸ್‌ದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನ್ಯಾಯಯುತವಾಗಿ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿ ಬಗ್ಗೆ ಶ್ರೀಗಳ ನೇತೃತ್ವದಲ್ಲಿ ಸಮಾಜದ ಎಲ್ಲ ಸ್ತರದ ಬಾಂಧವರು ಸರ್ಕಾರಕ್ಕೆ ಆಗ್ರಹಿಸಲು ನಡೆಸಿದ ಪ್ರತಿಭಟನೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೇ ಶ್ರೀಗಳಾದಿಯಾಗಿ ಪ್ರತಿಭಟನಾನಿರತರ ಮೇಲೆ ಲಾಠಿಛಾರ್ಜ ನಡೆಸಿ ದೌರ್ಜನ್ಯ ಮೆರೆದಿತ್ತು. ಅದರ ಕರಾಳತೆಯ ನೆನಪಿಸಲು ಡಿ.10ರಂದು ರಾಜ್ಯದ ಸಮಾಜ ಬಾಂಧವರು ಸರ್ಕಾರದ ಗಮನ ಸೆಳೆಯಲು ಪ್ರತಿಭಟನಾ ಮೆರವಣಿಗೆ ನಡೆಸಲುದ್ದೇಸಿದ್ದೇವೆಂದು ತಾಲೂಕು ಅಧ್ಯಕ್ಷ ಶ್ರೀಶೈಲ ದಲಾಲ ಸ್ಪಷ್ಟನೆ ನೀಡಿ, ರಾಜ್ಯದ ಎಲ್ಲಾ ಪಂಚಮಸಾಲಿ ಬಾಂಧವರು ಸಮಾಜದ ಜಗದ್ಗುರುಗಳ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಶಾಸಕ ವಿಯಾನಂದ ಕಾಶಪ್ಪನವರಗೆ ಎಚ್ಚರಿಕೆ : ದಿನಬೆಳಗಾದರೆ ನಮ್ಮ ಸಮಾಜದ ಜಗದ್ಗುರು ಶ್ರೀ ಬಸವ ಮೃತ್ಯುಂಜಯ ಮಹಾಸ್ವಾಮಿಗಳಿಗೆ ಕೀಳುಮಟ್ಟದ ಶಬ್ದ ಬಳಸಿ ತೇಜೋವಧೆ ಮಾಡುತ್ತಿರುವ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ತಾವೊಬ್ಬ ಸಮಾಜದ ಭಾಗವಾಗಿದ್ದು, ಒಳ್ಳೆ ಮನೆತನದ ಮತ್ತು ವಿದ್ಯಾವಂತ ವ್ಯಕ್ತಿಯಾಗಿ ಹೊಣೆಗಾರಿಕೆ ಅರಿತು ಮಾತಾಡಬೇಕು. ಅವರ ನಡತೆ ಮತ್ತು ಅಸಂಗತ, ಅನುಚಿತ ಭಾಷೆಯ ಬಳಕೆಗೆ ರಾಜ್ಯದ ಪಂಚಮಸಾಲಿ ವರಿಷ್ಠರು ಲಗಾಮು ಹಾಕಬೇಕು ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಶಾಸಕ ಕಾಶಪ್ಪನವರ ಸಂಚರಿಸುವುದು ಕಷ್ಟವಾಗುತ್ತದೆ ಎಂದು ಧುರೀಣ ಸಂಗಮೇಶಗೌಡ ಬಿ. ಪಾಟೀಲ ಎಚ್ಚರಿಕೆ ನೀಡಿದರು. ಪ್ರಕಾಶ ಮೂಡಲಗಿ, ಮಹಾದೇವ ಕೋಟ್ಯಾಳ, ಬಿಮುಲ ನಿರ್ದೇಶಕ ಲಕ್ಕಪ್ಪ ಪಾಟೀಲ, ಈಶ್ವರ ಪಾಟೀಲ, ನ್ಯಾಯವಾದಿ ಆರ್.ಕೆ.ಪಾಟೀಲ, ಪರ್ಪ ಫಾಲಬಾಂವಿ, ರಾಮಪ್ಪ ಹಿಡಕಲ್ಲ, ಶೇಖರ ನೀಲಕಂಠ, ಹುಲ್ಲೆಪ್ಪ ಹುಕ್ಕೇರಿ, ಮಹಾದೇವ ಮಂಗಳವೇಟೆ ಸೇರಿದಂತೆ ಮುಂತಾದವರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 