ಸಿಧ್ಧಸಿರಿ ಬಹುರಾಜ್ಯ ಬಹು ಉದ್ದೇಶ ಸಹಕಾರ ಸಂಸ್ಥೆ:ಜಗದೇಶ ಕ್ಷೇತ್ರಿ
Siddhasiri Multi-State Multi-Purpose Cooperative Organization: Jagadesh Kshetri
ಲೋಕದರ್ಶನ ವರದಿ
ಇಂಡಿ 06: ತಾಲೂಕಿನ ನಾದ ಹಾಗೂ ತಾಂಬಾ ಗ್ರಾಮಗಳಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ 11 ಶನಿವಾರರಂದು ನಡೆಯಲಿವೆ ಎಂದು ಸಂಸ್ಥೆಯ ನಿರ್ದೇಶಕ ಜಗದೀಶ ಕ್ಷತ್ರಿ ತಿಳಿಸಿದರು.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂಡಿ ತಾಲೂಕಿನಲ್ಲಿ ನಮ್ಮ ಸಂಸ್ಥೆಯ 15 ಶಾಖೆಗಳನ್ನು ಹೊಂದಿದ್ದು, ಈಗಾಗಲೆ 8 ಶಾಖೆಗಳಿಗೆ ಸ್ವಂತ ಕಟ್ಟಡಗಳಿವೆ. ಇಂಡಿ ತಾಲೂನಿನಲ್ಲಿನ ಶಾಖೆಗಳಲ್ಲಿ 484ಕೋಟಿ 88 ಲಕ್ಷ ಠೇವಣಿ ಹೊಂದಿವೆ. ಅಲ್ಲದೆ ಸಿಧ್ಧಸಿರಿಯ ಎಲ್ಲ ಶಾಖೆಗಳನ್ನು ಒಳಗೊಂಡು 5220 ಕೋಟಿ 25 ಲಕ್ಷ ರೂಪಾಯಿ ಠೇವಣಿ ಇದೆ. ರಾಜ್ಯಾದ್ಯಂತ 212 ಶಾಖೆಗಳನ್ನು ಹೊಂದಿದ್ದು, ಸಿದ್ದಸಿರಿ ಸಂಸ್ಥೆಯು ಅಂಗ ಸಂಸ್ಥೆಗಳನ್ನು ಸಹ ನಿರ್ಮಾಣ ಮಾಡಿದೆ.
ಸಿಧ್ಧಸಿರಿ ಕೋಲ್ಡ ಸ್ಟೋರೆಜ್, ಸಿದ್ದಸಿರಿ ಪವರ್ ್ಘ ಎಥೆನಾಲ್ ಘಟಕ, ಸಿಧ್ಧಸಿರಿ ಇಂಧನ ಕೇಂದ್ರ (3 ಕಡೆಗಳಲ್ಲಿ), ಸಿಧ್ಧಸಿರಿ ಕೃಷಿ ಕೇಂದ್ರಗಳು ಒಟ್ಟು ಐದು ಸಿಧ್ಧಸಿರಿ ಸಂಸ್ಥೆ ಹಾಗೂ ಸಿಧ್ಧೇಶ್ವರ ಸಂಸ್ಥೆಯ ನಿರ್ದೇಶಕರು ಕೂಡಿಕೊಂಡು ವಿಜಯಪುರ ನಗರದಲ್ಲಿ ಸಿದ್ದೇಶ್ವರ ಚಾರಿಟೇಬಲ್ ಟ್ರಸ್ಟ ವತಿಯಿಂದ ಸಿದ್ದೇಶ್ವರ ಶ್ರೀಗಳ ಹೆಸರಿನಲ್ಲಿ 108 ಹಾಸಿಗೆಯ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ ಎಂದರು.20 ವರ್ಷಗಳಿಂದ ಈ ಸಂಸ್ಥೆಯು ಹೆಮ್ಮರವಾಗಿ ಬೆಳೆಯುವುದಕ್ಕೆ ಮಾಜಿ ಕೇಂದ್ರ ಸಚಿವರು ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ದೂರದೃಷ್ಠಿ ಇಟ್ಟುಕೊಂಡು ಸಂಸ್ಥೆ ಬೆಳವಣಿಗೆಗೆ ಸಹಕರಿಸಿದ್ದಾರೆ.ಅಲ್ಲದೆ ಈಗಾಗಲೆ ಐದು ಸಾವಿರ ಯುವಕರಿಗೆ ಉದ್ಯೋಗ ನೀಡಲಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 