ದದೇಗಲ್ ಗ್ರಾಮದಲ್ಲಿ 14 ರಂದು ಸಿದ್ಧಾರೂಢರ ಜಾತ್ರೆ
Siddharudha fair to be held on the 14th in Dadegal village
ಕೊಪ್ಪಳ 11: ತಾಲೂಕಿನ ದದೇಗಲ್ ಗ್ರಾಮದಲ್ಲಿ ಸದ್ಗುರು ಸಿದ್ಧಾರೂಢರ ಮಹಾಸ್ವಾಮಿಗಳ 36 ನೇ ಜಾತ್ರಾ ಮಹೋತ್ಸವ, ಹಾಗೂ ಸೋಮಲಿಂಗಾರೂಢರ 22 ನೇ ವರ್ಷದ ಪುಣ್ಯಾರಾಧನೆ, ಸಾಮೂಹಿಕ ವಿವಾಹ ನವೆಂಬರ್ 13,14 ರಂದು ಎರಡು ದಿನಗಳ ಕಾಲ ನಡೆಯಲಿದೆ. 14 ರಂದು ಸಂಜೆ 05 : 30 ಕ್ಕೆ ಮಹಾರಥೋತ್ಸವ ಜರುಗಲಿದೆ.
ಕೊಪ್ಪಳ ಗವಿಮಠದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು. ಹಂಪಿ- ಹೇಮಕೂಟ ಶಿವರಾಮ ಅವಧೂತ ಆಶ್ರಮದ ವಿದ್ಯಾನಂದ ಭಾರತಿ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು.ಕೊಪ್ಪಳದ ರಾಮಕೃಷ್ಣ ಆಶ್ರಮದ ಚೈತನ್ಯಾನಂದ ಸ್ವಾಮಿಗಳು,ಚಿಕೇನಕೊಪ್ಪದ ಶಂಭುಲಿಂಗಾರೂಢ ಮಠದ ಅನ್ನದಾನಿ ಭಾರತಿ ಮಹಾಸ್ವಾಮಿಗಳು, ಮೈನಳ್ಳಿಯ 108 ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಅನ್ನದಾನೇಶ್ವರ ಶಾಖಾಮಠ ಕುಕನೂರಿನ ಡಾ.ಮಹಾದೇವ ದೇವರು, ಭಾಗ್ಯನಗರ ಶಂಕರಾಚಾರ್ಯ ಮಠದ ಶಿವಪ್ರಕಾಶನಂದ ಸ್ವಾಮಿಗಳು,ಮುಖಣೇಶ್ವರಮಠ ಗದಗ-ಬೆಟಗೇರಿಯ ಶಂಕರಾನಂದ ಸ್ವಾಮಿಗಳು, ಸಿದ್ಧಾರೂಢ ಮಠ ಬಸಾಪುರದ ಪ್ರಣವಾನಂದ ಸ್ವಾಮಿಗಳು. ಭಾಗ್ಯನಗರದ ಅಭಿನವ ಅಜ್ಜಪ್ಪ ಹುರಕಡ್ಲಿ, ಈರಣ್ಣ ಹುರಕಡ್ಲಿ, ಗುನ್ನಾಳದ ಶರಣಪ್ಪ ಗುದಗಿ, ಮುದುಕಪ್ಪಜ್ಜ ಮೂಗಿನ, ಕುಮ್ಮಾರ್ಪಜ್ಜ ಬಂಡಿ ವೇದಾಂತ ಉಪನ್ಯಾಸಗಳನ್ನು ನೀಡಲಿದ್ದಾರೆ. ಮಹಾರಥೋತ್ಸವಕ್ಕೆ ತೇರಿನ ಹಗ್ಗವನ್ನು ತಳಕಲ್ ಗ್ರಾಮಸ್ಥರು ತರಲಿದ್ದಾರೆ.
ದದೇಗಲ್ ಸಿದ್ಧಾರೂಢ ಮಠದ ಇತಿಹಾಸ
ದದೇಗಲ್ ಗ್ರಾಮದಲ್ಲಿ ಸಿದ್ಧಾರೂಢರ ಮಠದ ಇತಿಹಾಸ ಪುಟವನ್ನು ತಿರುವಿದಾಗ 1988 ರಲ್ಲಿ ಹಲಗೇರಿಯ ಕೆರೆಯ ದಂಡೆಯ ಮೇಲೆ ಸಿದ್ಧಾರೂಢರ ಆಶ್ರಮ ಸ್ಥಾಪಿಸಬೇಕು. ಇಲ್ಲಿಯೂ ಪ್ರವಚನ ಕಾರ್ಯಕ್ರಮ ನೆಡಯಬೇಕೆಂದು ಹಡಪದ ಸಮಾಜ ಕನಸು ಕಾಣುತ್ತಿರುವಾಗಲೇ ಅಂದಿನ ಬೇರೆ ಬೇರೆ ಸಮಾಜ, ಸಿದ್ಧಾರೂಢರ ಭಕ್ತ ಸಮೂಹ ಹಾಗೂ ಬಸವಾನಂದ ಶ್ರೀಗಳ, ಚಿಕ್ಕೇನಕೊಪ್ಪದ ಬಳಗಾನೂರ ಶರಣರ ಮಾರ್ಗದರ್ಶನದಲ್ಲಿ ದದೇಗಲ್ ಗ್ರಾಮದಲ್ಲಿ ಪ್ರವಚನ ನಡೆದ ಸ್ಥಳದಲ್ಲೇ ದಿನಾಂಕ : 15.08.1989 ರಂದು ಸಿದ್ಧಾರೂಢ ಆಶ್ರಮ ಉದ್ಘಾಟನೆಗೊಂಡು. ಅಲ್ಲಿಂದ ಇಲ್ಲಿಯವರೆಗೂ ಪ್ರತಿವರ್ಷ ಜಾತ್ರೆ ನೆಡೆಯುತ್ತ ಬಂದಿದೆ. ಸೋಮಲಿಂಗ ಸ್ವಾಮಿಗಳು ಆಶ್ರಮ ನಿರ್ಮಾಣದಲ್ಲಿ ತೋರಿದ ಪ್ರೀತಿ ಕಾಳಜಿಯನ್ನು ಮಠದ ಸದ್ಬಕ್ತರು ಮತ್ತು ದದೇಗಲ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಸೋಮಲಿಂಗ ಸ್ವಾಮಿಗಳು 2003 ರಲ್ಲಿ ಲಿಂಗೈಕ್ಯರಾಗುವವರೆಗೂ ಮಠದ ಕೆಲಸ ನಿರ್ವಹಿಸಿ ಈ ಗ್ರಾಮ, ಭಕ್ತ ಸಮೂಹದಲ್ಲಿ ಶಾಶ್ವತವಾಗಿ ನೆಲಸಿದ್ದಾರೆ. ಸೋಮಲಿಂಗ ಸ್ವಾಮಿಗಳ ನಂತರ ಹಂಪಿಯ ಶಿವರಾಮ ಅವಧೂತ ಆಶ್ರಮದ ವಿದ್ಯಾನಂದ ಅವಧೂತರ ಮಾರ್ಗದರ್ಶನದಲ್ಲಿ ಎರಡು ವರ್ಷಗಳ ಕಾಲ ಇದ್ದ ಮಠ 21.11.2005 ರಲ್ಲಿ ಈಗಿನ ಗುರುಗಳಾದ ಆತ್ಮಾನಂದ ಭಾರತಿ ಶ್ರೀಗಳು ಮುನ್ನೆಡೆಸುತ್ತಾ ಬಂದಿದ್ದಾರೆ. ಸಿದ್ಧಾರೂಢರ ಮಠದಲ್ಲಿ ಅಂದಿನಿಂದ ಇಂದಿನವರೆಗೂ ಗ್ರಾಮಸ್ಥರು ಕಂಡ ಕನಸಿನಂತೆ ಅನೇಕ ಮಹನೀಯ ಸ್ವಾಮಿಗಳು, ಶರಣರು ಮಾರ್ಗದರ್ಶನದಲ್ಲಿ ಪ್ರವಚನ ನೀಡುತ್ತಾ ಸಮಾಜಿಕ ಕಾರ್ಯಗಳನ್ನು ಮಾಡುತ್ತಾ ದದೇಗಲ್ ಸಿದ್ಧಾರೂಢರ ಮಠ ಸಾಗುತ್ತಾ ಬಂದಿದೆ. 1989 ರಿಂದ ಉಚ್ಛಾಯ ಪ್ರತಿವರ್ಷ ನಡೆಯುತ್ತಾ ಬಂದಿದ್ದು, 2009 ರಲ್ಲಿ ಸದ್ಗುರು ಸಿದ್ಧಾರೂಢರ ಮೂರ್ತಿ ಪ್ರತಿಷ್ಠಾಪನೆ, 2011 ರಲ್ಲಿ ಸೋಮಲಿಂಗ ಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆ, 2016 ರಲ್ಲಿ ಮಹಾರಥೋತ್ಸವ ಪ್ರಾರಂಭವಾಯಿತು.
ಕೊಪ್ಪಳ, ಹಣವಾಳ, ಕುಕನೂರು, ಗುನ್ನಾಳ, ಡಂಬ್ರಳ್ಳಿ, ಇಟಗಿ-ನಿಂಗಾಪುರ,ಬೇಳೂರು, ಕೋಳೂರು, ಹೊಸಪೇಟೆ, ಚೆಕ್ಕಸಿಂದೋಗಿ, ಹಿರೇಸಿಂದೋಗಿ, ಗುನ್ನಳ್ಳಿ, ಹೊರತಟ್ನಾಳ, ಕಾಟ್ರಳ್ಳಿ, ಹ್ಯಾಟಿ, ಬಸಾಪೂರ, ಬಾಳಾಪೂರ, ಕಿನ್ನಾಳ, ಮಂಗಳಾಪೂರ, ಮಾರನಬಸರಿ, ಚಿಕೇನಕೊಪ್ಪ, ಬೇವೂರ, ಹಲಗೇರಿ, ಹಂದ್ರಾಳ, ಕೊಳಗಲ್,ದದೇಗಲ್ ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಆರೂಢ ಪರಂಪರೆಯ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 