ಸಿದ್ದಾರ್ಥ ಹಬೀಬ ಅವರಿಗೆ ಜೈಂಟ್ಸ ಗ್ರುಪ್ ಆಫ್ ಸಹೇಲಿ ವತಿಯಿಂದ ಮಾಲಾರೆ್ಣ
Siddharth Habib receives malaria treatment from Giants Group of Saheli
ಸಿದ್ದಾರ್ಥ ಹಬೀಬ ಅವರಿಗೆ ಜೈಂಟ್ಸ ಗ್ರುಪ್ ಆಫ್ ಸಹೇಲಿ ವತಿಯಿಂದ ಮಾಲಾರೆ್ಣ
ಹುಬ್ಬಳ್ಳಿ 25: ವಿಶ್ವ ಸಂಗೀತ ದಿನ ಅಂಗವಾಗಿ ಕೋಳಲು ವಾದನದಲ್ಲಿ ಸಾಧನೆ ಮಾಡುತ್ತಿರುವ ಬಾಲಕ ಸಿದ್ದಾರ್ಥ ಹಬೀಬ ಅವರಿಗೆ ಜೈಂಟ್ಸ ಗ್ರುಪ್ ಆಫ್ ಹುಬ್ಬಳ್ಳಿ ಸಹೇಲಿ ವತಿಯಿಂದ ಪುಷ್ಪ ನೀಡಿ, ಮಾಲಾರೆ್ಣ ಮಾಡಿ ಹೃದಯ ಸ್ಪರ್ಶಿಯಾಗಿ, ಅತ್ಯಂತ ಗೌರವದಿಂದ ಸನ್ಮಾನಿಸಲಾಯಿತು. ಅಭಿನಂದನೆಗಳನ್ನು ಸಲ್ಲಿಸಿ, ಕೋಳಲು ನುಡಿಸುವುದರಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶುಭ ಕೋರಿದರು. ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿ, ಶುಭ ಕೋರಿದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಜೈಂಟ್ಸ ಗ್ರುಪ್ ಆಫ್ ಹುಬ್ಬಳ್ಳಿ ಸಹೇಲಿ ಅಧ್ಯಕ್ಷ ರೇಖಾ ಚಿನಿವಾಲ, ಹಿಂದಿನ ಅಧ್ಯಕ್ಷ ಭಾರತಿ ವಾಲಿ, ಸುರೇಖಾ ಪಾರಗಾಂವಕರ, ಹೇಮಾ ದೇಶಪಾಂಡೆ, ವೇಂಕಟೇಶ ಭಂಡಾರಿ, ದೀಪಿಕಾ ಹಬೀಬ, ಓಂಕಾರ ಹಬೀಬ, ಮುಂತಾದವರು ಭಾಗವಹಿಸಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 