ಸಿದ್ದಾರೂಢರು ಸಕಲ ಮಾತೋದ್ಧಾರಕರಾಗಿದ್ದರು : ಚಿನ್ಮಯಾನಂದ ಸ್ವಾಮೀಜಿ

Siddarudhar was a great advocate: Chinmayananda Swamiji

ಸಿದ್ದಾರೂಢರು ಸಕಲ ಮಾತೋದ್ಧಾರಕರಾಗಿದ್ದರು : ಚಿನ್ಮಯಾನಂದ ಸ್ವಾಮೀಜಿ  

ಮಹಾಲಿಂಗಪುರ 04: ಅಧ್ಯಾತ್ಮ ಕ್ಷೇತ್ರದ ಪುಣ್ಯಭೂಮಿ ಭಾರತ ಜಗತ್ತಿನ ಮೇಲ್ಚಾವಣಿಯಂತಿದೆ. ಸನಾತನ ಧರ್ಮ ನಾಡು ನಮ್ಮ ಭಾರತ ಸಾಹಿತ್ಯ ಸಂಸ್ಕೃತಿಗಳ ಸಂಗಮತಾನ, ಈ ಭೂಮಿಯಲ್ಲಿ ಅನೇಕ ಶಿವಯೋಗಿಗಳು, ಶಿವಶರಣರು, ಶಿವಶರಣೆಯರು, ಆರೂಢರು, ಅವದೂತರು, ದಾಸವರೆಣ್ಯರು, ಶಂಕರ, ಮಧ್ವ, ರಾಮಾನುಜ, ಬುದ್ಧ, ಬಸವ,ಅನೇಕ ಪುಣ್ಯ ಪುರುಷರಲ್ಲಿ ಅದ್ವೈತ ಸಾರ್ವಭೌಮ ಸಿದ್ದಾರೂಢರು ಒಬ್ಬರು ಎಲ್ಲ ಮಹಾಪುರುಷರ ದೆಯ ಒಂದೇ ಭಕ್ತರ ಉದ್ದಾರವೇ ಆಗಿದೆ, ಭಾರತದ  ದೇಶದ್ಯಾದಂತ ಮಠಗಳನ್ನು ಹೊಂದಿರುವ ಸಕಲ ಮನುಕುಲದ ಮಾತೋದ್ಧಾರಕರಾಗಿದ್ದರು ಎಂದು ಗಣಿ ಸಿದ್ದಾರೂಢ ಮಠದ ಚಿನ್ಮಯಾನಂದ ಮಹಾಸ್ವಾಮಿಗಳು ಹೇಳಿದರು. 

ಅವರು ರಬಕವಿ ಬನಹಟ್ಟಿ ತಾಲೂಕಿನ ಮದಭಾವಿ ಗ್ರಾಮದ  ಸಿದ್ಧಾರೂಢರ ಜಾತ್ರೆಯಲ್ಲಿ ನಡೆದ ಸರ್ವಧರ್ಮ ಸಭೆಯ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ "ಸಿದ್ದಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ, ಸಿದ್ದಾರೂಢರ ಜೋಳಿಗೆ ಲೋಕಕ್ಕೆಲ್ಲ ಹೋಳಿಗೆ "ಎಂಬ ಭಕ್ತರ ಜಯಘೋಷಗಳೇ ಅಜ್ಜನ ಮಹತ್ವವನ್ನು ಸಾರುತ್ತವೆ. ಶಿವರಾತ್ರಿ ಮರು ದಿನ ಪೆಬ್ರುವರಿ 27 ನಡೆದ ಅಜ್ಜನ ಜಾತ್ರೆ ಅದ್ದೂರಿಯಾಗಿ ನಡೆದು ಸೇರಿದ ಭಕ್ತರೆಲ್ಲರಿಗೂ ಅಜ್ಜನ ಆಶೀರ್ವಾದ ಇರಲಿ ಎಂದು ಹರಿಸಿದರು. 

ನಂತರ ಮಾತನಾಡಿದ ಜೋಡಕುರುಳಿಯ ಸಿದ್ದಾರೂಢ ಮಠದ ಚಿದ್ಘಾನಾನಂದ ಮಹಾಸ್ವಾಮಿಗಳು ಸಿದ್ದಾರೂಢರು ಲೋಕ ಕಲ್ಯಾಣಾರ್ಥವಾಗಿ ಕಾಲ ನಡಿಗೆಯಲ್ಲಿ ದೇಶವನ್ನು ಸಂಚರಿಸಿದರು, ನೇಪಾಳ, ಟಿಬೇಟ್, ಪಾಕಿಸ್ತಾನದ ಕೆಲ ಭಾಗಗಳನ್ನೊಳಗೊಡಂತೆ ಅಖಂಡ ಭಾರತವನ್ನು ಸುತ್ತಾಡಿ ಎಲ್ಲ ಜನರ ಮನಸುರೆಗೊಂಡವು ಕಲಿಯುಗದ ನಿಜವಾದ ಜಗದ್ಗುರು ಸಿದ್ದಾರೂಢರು ಸರ್ವರ ಭಾವನೆಗಳಿಗೆ ಸ್ಪಂದಿಸಿ ನೊಂದ ಹೃದಯಗಳಿಗೆ ಸಾಂತ್ವನ ನೀಡಿದರು. ಗುಪ್ತವಾಗಿದ್ದ ಶಿವ ಪಂಚಾಕ್ಷರಿ ಮಹಾಮಂತ್ರವನ್ನು ಸಾರ್ವತ್ರಿಕವಾಗಿ ಉಪದೇಶಿಸಿದ ಮನುಕುಲ ಉದ್ಧರಿಸಿದ ಯುಗ ಪುರುಷ. 

ನಡೆ ಮತ್ತು ನುಡಿ ಯಲ್ಲಿ ಅದ್ವೈತವನ್ನು ಸಾಧಿಸಿದ ಮೇರು ಸಿದ್ದಾರೂಢರು. ಬದುಕಿದಂತೆ ಬೋಧಿಸಿದರು, ಭೋಧಿಸಿದಂತೆ ನಡೆದೂ ತೋರಿದರು. ಅಂತಹ ಹಠಯೋಗಿ. ಅಸಾಮಾನ್ಯ ತಪಸ್ವಿ. ತ್ರಿಕಾಲ, ತ್ರಿಕರಣ,ಶಿವಯೋಗಿ ನೆಡೆದಾಡುವ ದೇವರು. ನಂಬಿದವರಿಗೆ ಕಾಮಧೇನುವೂ, ಕಲ್ಪವೃಕ್ಷವೂ.ಆಗಿದ್ದರು  

"ಜೀವನೇ ಯಾವದಾದಾನಂ ಸ್ಯಾತ್ ಪ್ರದಾನಂ ಚ ತತೊಧಿಕಮ್ "ಬದುಕಿನಲ್ಲಿ ನಾವು ಪಡೆದಿರುವುದಕ್ಕಿಂತ ಅಧಿಕವಾಗಿ ಕೊಡುವುದಾಗಬೇಕು ಎಂಬುದನ್ನು ತನ್ನ ನಂಬಿಬಂದವರಿಗೆ ಚರ್ಮವಾಗಿಸಿದ,ಅಂತಶ್ಚಕ್ಷುಗಳಿಂದ ಅರಿವು ಬೆಳಗಿಸಿದ ದೇವರೇ ಸಿದ್ದಾರೂಢರು. 

ಇವರನ್ನು ಕಾಣಲು 1918 ರಲ್ಲಿ ಬಾಲಗಂಗಾಧರ ತಿಲಕ್ 1924 ರಲ್ಲಿ ಮಹಾತ್ಮ ಗಾಂಧಿ ಹುಬ್ಬಳ್ಳಿಗೆ ಬಂದಾಗ ಸಿದ್ದಾರೂಢರನ್ನು ಭೇಟಿಯಾಗಿದ್ದರು. ಆ ಸಂಧರ್ಭದಲ್ಲಿ ಅಸ್ಪೃಶ್ಯರೊಂದಿಗೆ ಊಟಕ್ಕೆ ಕುಳಿತಿದ್ದ ಸಿದ್ದಾರೂಢರನ್ನು ಕಂಡು ಗಾಂಧೀಜಿ ಮೂಕವಿಸ್ಮಿತರಾಗಿದ್ದರು. ಎಂದರು. 

ನಂತರ ಮಾತನಾಡಿದ ಮಾತೋಶ್ರೀ ದಾನಮ್ಮಾ ಹಿರೇಮಠ್ ಅಧ್ಯಾತ್ಮದ ಶಿಖರಸದೃಶ ಉತ್ತುಂಗ. ಶ್ರೀಸಾಮಾನ್ಯನಿಗೂ ಅಧ್ಯಾತ್ಮದ ಬಗ್ಗೆ ರುಚಿ ಹುಟ್ಟಬೇಕು ಎಂದು ಸರಳ ಆಚರಣೆ ಜಾರಿಗೆ ತಂದ ಜನರ ಗುರು. ಶಿವ ಪಂಚಾಕ್ಷರ ಮಂತ್ರ  ಓಂ ನಮಃ ಶಿವಾಯ ಬಹಿರಂಗವಾಗಿ ಪಠಿಸಲು ಜನಸಾಮಾನ್ಯರಿಗೆ ಪ್ರೇರಣೆ ನೀಡಿ ಕಾಯುವವ ದೊಡ್ಡವ, ಕಾಯಕವೇ ಮುಕ್ತಿಯ ಹಾದಿ ಎನ್ನುವ ವಿನಿತ, ನೈತಿಕ ಸನ್ಮಾರ್ಗ ತೋರಿದ ಪ್ರಾತಃಸ್ಮರಣಿಯರು ಎಂದರು. 

ಡಾ ಶಿವಪುತ್ರ ಸ್ವಾಮೀಗಳು ಮಾತನಾಡಿ ಸಾಧು ಸಂತರ ದರ್ಶನದಿಂದ ಜನ್ಮ ಪಾವನವಾಗುತ್ತದೆ. ರಾಮಾಯಣ ಮಹಾಭಾರತ ಮಹಾ ಗ್ರಂಥಗಳು ಪಾರಾಯಣದಿಂದ ಜಗತ್ತಿಗೆ ಬೆಳಕನ್ನು ಚೆಲ್ಲಿವೆ, ಅದರಂತೆ ಸಿದ್ದಾರೂಢರ ಕಥಾ ಅಮೃತ ಗ್ರಂಥ ಅರೂಢ ಪರಂಪರೆಯ ಸಕಲ ಭಕ್ತರಿಗೆ ಸುಖ,ಶಾಂತಿ, ನೆಮ್ಮದಿ,ಸಕಲ ಭಾಗ್ಯಗಳನ್ನು ಕರುಣಿಸುತ್ತಿದೆ. ಈ ಗ್ರಂಥ ನಿರ್ಮಲ ಭಕ್ತಿಯಿಂದ ಪಾರಾಯಣ ಮಾಡುವವರಿಗೆ ಸಕಲವನ್ನೂ ಸಾಕ್ಷಾತ್ ಸಿದ್ದಾರೂಢರು ಕರುಣಿಸುತ್ತಿದ್ದಾರೆ,ಅವರ ಜಾತ್ರೆಯಲ್ಲಿ  ಭಾಗಿಯಾಗುವುದರಿಂದ ಮಾನವ ಜನ್ಮ ಪಾವನವಾಗುತ್ತದೆ ಎಂದರು. 

ನಂತರ ಮಾತನಾಡಿದ ರೂಗಿ ಮಠದ ನಿತ್ಯಾನಂದ ಮಹಾಸ್ವಾಮಿಗಳು ಅನ್ಯಕೇಂದ್ರೀತ ವಿಶ್ವದಲ್ಲಿ ಆತ್ಮಕೇಂದ್ರೀತ ಮನುಷ್ಯನ ಬಾಳು ಪಾಡಿಗೆ ಜೀವದೃಷ್ಟಿ, ಆತ್ಮ ಸೃಸ್ಟಿಯ ಅರಿವು ಜಾಗೃತಗೋಳಿಸಿ, ವಿಧಿ ಮತ್ತು ವ್ಯಕ್ತಿತ್ವದ ನಡುವಿನ ಸಂಕಟ ದ್ವಂದ್ವಗಳಿಗೆ ಮಾನವತೆಯ ಸ್ಪರ್ಶ ನೀಡಿದವರು, ಆಚಾರ ವಿಚಾರಗಳಲ್ಲಿ ಭಕ್ತರಿಗೆ ಅವರು ಸಾಕ್ಷಾತ್ ಶಿವನ ಸ್ವರೂಪವೇ ಆಗಿದ್ದರು. ಆತ್ಮ ಪರಮಾತ್ಮ ಎರಡೂ ಒಂದೇ ಬೇರೆ ಅಲ್ಲ ಅಹಂ ಬ್ರಹ್ಮಾಸ್ಮಿ ಎಂದು ಅದ್ವೈತ ಸಾರಿದರು. ಪ್ರೀತಿ ಅಂತಃಕರಣದಿಂದ ತೊಯ್ದು ಅಜ್ಜನ ಮುಖೋದ್ಗತಗಳನ್ನು ಹೃದ್ಗತ ಮಾಡಿಕೊಳ್ಳುವಲ್ಲಿ ಜನಸಾಮಾನ್ಯರಿಗೆ ಇನ್ನೂ ಆಧ್ಯಾತ್ಮವನ್ನು ಸರಳಗೊಳಿಸುವಲ್ಲಿ, ದೈನಂದಿನ ಜೀವನದಲ್ಲಿ ಸರಳವಾಗಿ ಪರಿಪಾಲಿಸುವಷ್ಟು ‘ತೈಲವಿಲ್ಲದ ಜ್ಯೋತಿ' ಆಗಿ ಬೆಳಗಿದರು. 

ಸಿದ್ದಾರೂಢರು ಸಕಲ ಮತೋದ್ಧಾರಕಾರಗಿದ್ದರು, ಜಗ್ಗತ್ತನ್ನು ಉದ್ಧರಿಸಿದ ಸಾಕ್ಷಾತ್ ಶಿವನ ಸ್ವರೂಪಿಗಳಾಗಿ ನರನ ರೂಪದಲ್ಲಿ ಕೈಲಾಸದಿಂದ ಧರೆಗಿಳಿದ ಭಗವಂತ ಸಿದ್ದಾರೂಢರು ಭಕ್ತಿಯಿಂದ ನಾಮ ಸ್ಮರಣೆ ಮಾಡಿದರೆ ಸಾಕು ಕಷ್ಟಗಳನ್ನು ಕರಗಿಸಿ ಭಕ್ತರ ಬದುಕಿನಲ್ಲಿ ನೆಮ್ಮದಿ ಕರುಣಿಸುತ್ತಾನೆ. ಎಂದರು.  

ಸಾಯಂಕಾಲ 7 ಗಂಟೆಗೆ ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಸೇರಿದ ಅಪಾರ ಭಕ್ತ ಸಮೂಹ ಸಿದ್ದಾರೂಢ ಮಹಾರಾಜ್ ಕಿ ಜೈ, ಓಂ ನಮಃ ಶಿವಾಯ, ಹುಬ್ಬಳ್ಳಿಯೆಂಬುದು ಕಲ್ಯಾಣ ಸಿದ್ದಾರೂಢರೆ ಬಸವಣ್ಣ, ಸಿದ್ದಾರೂಢರ ಜೋಳಿಗೆ ಲೋಕಕ್ಕೆಲ್ಲ ಹೋಳಿಗೆ, ಇನ್ನೂ ಅನೇಕ ಜಯ ಘೋಷಗಳು ಮೊಳಗಿದವು. ಕಿಕ್ಕಿರಿದು ಸೇರಿದ ಜನರು ಅಜ್ಜನ ತೇರು ಎಳೆದು ಭಕ್ತಿ ಮೆರೆದರು. ಭಕ್ತರು ಉತ್ತತ್ತಿ, ಬಾಳೆಹಣ್ಣು, ನಿಂಬೆ ಹಣ್ಣು, ಹೂವು, ಹಾರಿಸಿ ಅಜ್ಜನ ಕೃಪೆಗೆ ಪಾತ್ರರಾದರು. 

ಬೆಳ್ಳಿಗೆ ನಾಲ್ಕ್ಕು ಗಂಟೆಗೆ ಭಕ್ತರು ದೀಡ ನಮಸ್ಕಾರ ಹಾಕಿದರು. ಮುಂಜಾನೆ 7 ಗಂಟೆಗೆ ಅಭಿಷೇಕ, 9 ಗಂಟೆಗೆ ಪಲ್ಲಕ್ಕಿ ಉತ್ಸವ ಜರುಗಿ ಮಧ್ಯಾಹ್ನ ಮಹಾ ಪ್ರಸಾದ ಜರುಗಿತು. 

ಮುಖಂಡರಾದ ಸಿದ್ದು ಕೊಣ್ಣೂರ, ಮಹಾಂತೇಶ್ ಹಿಟ್ಟಿನಮಠ, ಮಹಾಲಿಂಗಪ್ಪಾ ಸನದಿ, ಡಾ ಎ ಆರ್ ಬೆಳಗಲಿ, ರಂಗಣ್ಣಗೌಡ ಪಾಟೀಲ, ಅರ್ಜುನ್ ಹಲಗಿಗೌಡರ್, ಬಸವರಾಜ ನಾಗನೂರ್, ಬಿ ಜಿ ಕುಲಗೋಡ, ಬಸಪ್ಪ ವಗ್ಗರ, ಸದಾಶಿವ ಕೊಳಕರ, ಶಂಕರ ಕಲ್ಲೋಳ್ಳಿ, ಸಿದ್ದಪ್ಪ ಚಿಕ್ಕೋಡಿ, ವಿನೋದ ಉಳ್ಳಾಗಡ್ಡಿ, ಪಿಯುಸಿ ಒಸ್ವಾಲ್, ಸತ್ಯಪ್ಪ ಮುಧೋಳ, ಸಂಗಪ್ಪ ವಡರಟ್ಟಿ, ಮಹಾಲಿಂಗ ನಾಯಿಕ, ಯಲ್ಲಪ್ಪ ಕಲ್ಲೋಳ್ಳಿ, ಸದಾಶಿವ ಪಟ್ಟಣಶೆಟ್ಟಿ, ನಾರಾಯಣ ಸುತಾರ, ಪಾಂಡು ನಿಗಡೆ, ಮಲ್ಲಪ್ಪ ಅರಭಾವಿ, ಪರಸಪ್ಪ ತಿಮ್ಮಾಪುರ, ಮಹಾಂತೇಶ್ ಹಲಗಿಗೌಡರ್, ಸಂಜು ಮಾಳಿ, ವಿಠಲ್ ಅರಭಾಂವಿ, ಮುತ್ತಪ್ಪ ವಗ್ಗರ, ಭೀಮಶಿ ತಿಮ್ಮಾಪುರ, ಬಸವರಾಜ್ ಒಂಟಿ, ಶಂಕರ ಊರಭಿನವರ, ಭೀಮಪ್ಪ ಚಿಕ್ಕೋಡಿ, ಶುಭಾಸ ಬಿರಾಣಿ, ನಾಗಪ್ಪ ಡುಮ್ಮಣ್ಣವರ, ಮಲ್ಲಪ್ಪ ಉರಬಿ,ರಾಜು ಮಾಂಗ, ವಿಠಲ ಮಾಂಗ, ರಾಜು ಮುಲ್ಲಾ, ಸೈಯದಸಾಬ್ ಮುಲ್ಲಾ, ಜಯಶ್ರೀ ತಿಮ್ಮಾಪುರ, ಶೋಭಾ ಮಾಂಗ, ಶಿವಕ್ಕಾ ಬೋರನಟ್ಟಿ, ಪೂಜಾ ವಗ್ಗರ, ರಾಜಶ್ರೀ ಪಟ್ಟಣಶೆಟ್ಟಿ ಸೇರಿ ಹಲವರು ಇದ್ದರು.  

ಶಿಕ್ಷಕರಾದ ರವೀಂದ್ರ ಕಲ್ಲೋಳ್ಳಿ ನಿರೂಪಿಸಿ ವಂದಿಸಿದರು.