ಮುಖ್ಯಮಂತ್ರಿಯಾಗಿ ಸಿದ್ರಾಮಯ್ಯ ದಾಖಲೆ: ಸಂಭ್ರಮಾಚರಣೆ

ಮುಖ್ಯಮಂತ್ರಿಯಾಗಿ ಸಿದ್ರಾಮಯ್ಯ ದಾಖಲೆ: ಸಂಭ್ರಮಾಚರಣೆ Siddaramaiah's record as Chief Minister: Celebration

ಜಮಖಂಡಿ 07: ರಾಜ್ಯದಲ್ಲಿ ದಿ. ದೇವರಾಜ ಅರಸು ಅವರ ನಂತರ ಸುಧೀರ್ಘ ಅವಧಿಗೆ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ನಾಯಕ ಸಿದ್ಧರಾಮಯ್ಯ ಅವರು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಜನರ ನೆಚ್ಚಿನ ನಾಯಕರಾಗಿದ್ದಾರೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು. 

ನಗರದ ಮಧ್ಯಭಾಗದಲ್ಲಿ ಇರುವ ಹನುಮಾನ ದೇವಸ್ಥಾನಲ್ಲಿ ದೇವರಿಗೆ ವಿಶೇಷ ಪೂಜೆಯನ್ನು ಸಲಿಸಿ, ನೂರಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪಟಾಕಿಯನ್ನು ಸಿಡಿಸಿ. ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.  

ಬಿಎಸ್‌ವೈ ಅವರು 5 ವರ್ಷ 82 ದಿನ ಅಧಿಕಾರ ನಡೆಸಿದ್ದಾರೆ. ದಿ. ರಾಮಕೃಷ್ಣ ಹೆಗಡೆ ಅವರು 5 ವರ್ಷ 216 ದಿನಗಳು, ದಿ.ನಿಜಲಿಂಗಪ್ಪನವರು 7 ವರ್ಷ 125 ದಿನ, ದಿ. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿ 7 ವರ್ಷ 239 ದಿನ ಅಧಿಕಾರ ನಡೆಸಿದ್ದಾರೆ. ಇವರೆಲ್ಲರ ದಾಖಲೆಯನ್ನು ಮುರಿದ ರಾಜ್ಯದ ಮುಖ್ಯಮಂತ್ರಿ ಸಿದ್ರಾಮಯ್ಯನವರು 7 ವರ್ಷ 240 ದಿನಗಳನ್ನು ಪೂರೈಸಿದ್ದಾರೆ ಎಂದರು. 

ಸಿದ್ರಾಮಯ್ಯನವರು ಜನರ ಏಳಿಗೆಗೆ ಅನೇಕ ಕಾರ್ಯಕ್ರಮಗಳನ್ನು ರೂಪಸಿದ್ದಾರೆ, ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರೈತರ ಸಾಲ ಮನ್ನಾ, ಅನ್ನಭಾಗ್ಯ, ಹಸಿವು ಮುಕ್ತ ಕರ್ನಾಟಕದ ನಿರ್ಮಾಣ, ಸೇರಿದಂತೆ ಐದು ಗ್ಯಾರಂಟಿಗಳನ್ನು ಘೋಷಿಸಿ ಜಾರಿಗೆ ತಂದು ನುಡಿದಂತೆ ನಡೆಯುತ್ತಿದ್ದಾರೆ. ವರ್ಷಕ್ಕೆ 58 ಸಾವಿರ ಕೋಟಿ ರೂ,ಗಳನ್ನು ರಾಜ್ಯದ ಜನರಿಗೆ ಖರ್ಚು ಮಾಡಿ ಜನ ಮಾನಸದಲ್ಲಿ ಹೆಮ್ಮೆಯ ನಾಯಕರಾಗಿದ್ದಾರೆ ಎಂದರು. 

ವಿಶ್ವಗುರು ಬಸವಣ್ಣನವರ ಸಮಾನತೆ ಮಾರ್ಗದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಸಿದ್ದರಾಮಯ್ಯ ಅವರು ಅಹಿಂದ ಸಮಾಜಗಳಿಗೆ ಶಕ್ತಿ ತುಂಬುವ ಮೂಲಕ ಸರ್ವ ಜನಾಂಗದವರನ್ನು ಒಟ್ಟಿಗೆ ಸೇರಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಅವರು ಅಧಿಕಾರಕ್ಕೆ ಅಂಟಿಕೊಳ್ಳದೇ ಜನ ಸೇವೆ ಮಾಡುತ್ತಿದ್ದಾರೆ. 17 ಬಜೆಟ್‌ಗಳನ್ನು ಮಂಡಿಸಿರುವ ಅವರು ಮುಂದಿನ ತಿಂಗಳು ಫೆಬ್ರುವರಿಯಲ್ಲಿ 18ನೇ ಬಜೆಟ್ ಮಂಡಿಸಲಿದ್ದಾರೆ. ಕಾಂಗ್ರೆಸ್ ಎಲ್ಲ ವರ್ಗದ ಜನರಿಗೆ ನ್ಯಾಯ ದೊರಕಿಸುವ ಕೆಲಸ ಮಾಡುತ್ತಿದೆ. ಬಡ ರೈತ ಕುಟುಂಬದಿಂದ ಬಂದಿರುವ ಸಿದ್ಧರಾಮಯ್ಯ ಅವರು ಎಲ್‌ಎಲ್‌ಬಿ ವರೆಗೆ ಶಿಕ್ಷಣ ಪಡೆದು ರಾಜ್ಯದ ಜನನಾಯಕರಾಗಿ ಹೊರಹೊಮ್ಮಿದ್ದಾರೆ. ಅವರು ಇಂದಿನ ಪೀಳಿಗೆಗೆ ಸ್ಪೂರ್ತಿದಾಯಕ ನಾಯಕರೆನಿಸಿದ್ದಾರೆ ಎಂದರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ ಕೋಳಿ, ವರ್ಧಮಾನ ನ್ಯಾಮಗೌಡ, ನಜೀರ ಕಂಗನೊಳ್ಳಿ, ಕಾಡಪ್ಪ ಮಾಳಿ ಮಾತನಾಡಿದರು. ಮಾದೇವ ಪಾಟೀಲ, ಕಲ್ಲಪ್ಪ ಗಿರಡ್ಡಿ, ಅನ್ವರ ಮೊಮಿನ, ಮಾಜಿ ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ, ಪರಮಾನಂದ ಗೌರೋಜಿ, ದಾನೇಶ ಘಾಟಗೆ, ಅಣ್ಣಪ್ಪ ಶಿರಹಟ್ಟಿ, ಜಿಲ್ಲಾಯುವ ಕಾಂಗ್ರೆಸ್ ಅಧ್ಯಕ್ಷ ಕುಮಾರ ಆಲಗೂರ, ಮಾಹಾವೀರ ಭಂಡಾರಿ, ನಾಗಪ್ಪ ಹೆಗಡೆ, ಪ್ರಕಾಶ ಹುಕ್ಕೇರಿ ಮಲ್ಲು ಗಣಾಚಾರಿ, ಅಬುಬಕರ ಕುಡಚಿ. ಬಸವರಾಜ ಹರಕಂಗಿ, ರೋಹಿತ ಸೂರ್ಯವಂಶಿ, ಮಹಿಳಾ ಘಟಕದ ಸುಮಿತ್ರಾ ಗೋಳಬಾಳ, ಪುಷ್ಪಾ ಕರಣೆ, ಸುರೇಶ ನಡುವಿನಮನಿ ನೇರಿದಂತೆ ಹಲವಾರು ಕಾಂಗ್ರಸ್ ಕಾರ್ಯಕರ್ತರಿದ್ದರು.