ಸಿದ್ಧರಾಮಯ್ಯನವರ ಸರ್ಕಾರ ಅರ್ಥಿಕವಾಗಿ ದಿವಾಳಿಯಾಗಿದೆ : ಹೇಮಲತಾ ನಾಯಕ ಆರೋಪ

ಸಿದ್ಧರಾಮಯ್ಯನವರ ಸರ್ಕಾರ ಅರ್ಥಿಕವಾಗಿ ದಿವಾಳಿಯಾಗಿದೆ : ಹೇಮಲತಾ ನಾಯಕ ಆರೋಪ Siddaramaiah's government is financially bankrupt: Hemalatha Nayak alleges

ಕೊಪ್ಪಳ 02: ಕಾಂಗ್ರೆಸ್ ಪಕ್ಷದ ನೇತೃತ್ವದ ಸಿದ್ಧರಾಮಯ್ಯನವರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಆರೋಪಿಸಿದರು.ಅವರು ಸೋಮವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಪೌರಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರಿಂದ ಹಿಡಿದು ಅನೇಕ ಇಲಾಖೆಗಳ ಉದ್ಯೋಗಿಗಳಿಗೆ ತಿಂಗಳ ಸಂಬಳ ಕೊಡಲಾಗದೆ ರಾಜ್ಯ ಸರ್ಕಾರ ಪರದಾಡುತ್ತಿದೆ . ಸಾರಿಗೆ, ಆರೋಗ್ಯ ಇಲಾಖೆಯ ನೌಕಾರರಿಗೆ ಪಾವತಿಸ ಬೇಕಾದ ಬಾಬಿನಲ್ಲಿ ನೂರಾರು ಕೋಟಿ ರೂಗಳನ್ನು ಬಾಕಿ ಉಳಿಸಿಕೊಂಡಿದೆ ತನ್ನ ಎಡವಟ್ಟುಗಳನ್ನು ಮತ್ತು ದಿವಾಳಿಯಾದ ಖಜಾನೆಯನ್ನು ಮುಚ್ಚಿಕೊಳ್ಳಲು’ ಮೀಸಲಾತಿಯಲ್ಲಿ ಗೊಂದಲ’ ಸೃಷ್ಟಿಸಿ ವಿದ್ಯಾರ್ಥಿ, ಯುವಜನರ ಕನಸು, ನೀರೀಕ್ಷೆಗಳಿಗೆ ಮಣ್ಣು ಸುರಿಯುತ್ತಿದೆ ಸಚಿವ ಸಂಪುಟದ ಸಭೆಯಲ್ಲಿ ಕರ್ನಾಟಕ ಸರ್ಕಾರ 56432 ಹುದ್ದೆಗಳ ಭರ್ತಿಗೆ ಮುಂದಿನ 30 ದಿನಗಳಲ್ಲಿ ಪ್ರಕ್ರಿಯೆ ಆರಂಭಿಸುವುದಾಗಿ ಪ್ರಕಟಿಸಿದೆ, ಆದರೆ ಈ ಪ್ರಕ್ರಿಯೆಯನ್ನು ಶೇ. 56ಅರ ಮೀಸಲಾತಿಯನ್ನು ಹೊರಗಿಟ್ಟು ಮಾಡುತ್ತಿರುವುದು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ, ಎಸ್ಸಿ ಮೀಸಲಾತಿಯ ವರ್ಗೀಕರಣಕ್ಕಾಗಿ ನ್ಯಾ. ನಾಗಮೋಹನ್ ದಾಸ್ ಆಯೋಗ ರಚಿಸುವಾಗ ಶೇ.56ಅ ಮೀಸಲಾತಿಯೇ ಇತ್ತು.  

ಸರ್ಕಾರ ಒಳಮೀಸಲಾತಿಗಾಗಿ ಮಸೂದೆ ಮಂಡಿಸಿ ರಾಜ್ಯಪಾಲರ ಅನುಮೋದನೆ ಪಡೆಯುವಾಗಲೂ ಶೇ56 ಅರ ಮೀಸಲಾತಿಯೇ ಇತ್ತು. ಈಗ ಏಕಾಏಕಿ ಶೇ 56 ಅರ ಮೀಸಲಾತಿಯನ್ನು ಶೇ 50ಅಕ್ಕೆ ಇಳಿಸುವಾಗ ಇಡೀ ಪರಿಶಿಷ್ಟವರ್ಗದ ನಾಯಕರನ್ನು, ಹೋರಾಟಗಾರರನ್ನು ಕತ್ತಲಲ್ಲಿ ಇರಿಸಲಾಗಿದೆ,2022 ರಿಂದ ಕರ್ನಾಟಕದಲ್ಲಿ ಖಅ 17ಅ ಮತ್ತು ಖಖಿ 7ಅ ಮೀಸಲಾತಿ ಜಾರಿಯಲ್ಲಿದೆ. ಸತತ ಮೂರು ವರ್ಷ ಸಿ ಇ ಟಿ, ನೀಟ್ ಪರೀಕ್ಷೆಗಳೂ ಸೇರಿದಂತೆ ಸಾವಿರಾರು ನೇಮಕಾತಿಗಳು ಶೇ 56 ಅರ ಮೀಸಲಾತಿ ಪ್ರಮಾಣದಲ್ಲಿ ಸುಗಮವಾಗಿ ನೆಡದಿದೆ. ಈ ನಾಲ್ಕು ವರ್ಷದಲ್ಲಿ ಫಲಾನುಭವಿಗಳಾದ ಸಾವಿರಾರು ಜನರ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದರು.ಬಿಜೆಪಿ ಜಿಲ್ಲಾ ಎಸ್ ಸಿ ಮೋರ್ಚಾದ ಅಧ್ಯಕ್ಷ ಗಣೇಶ ಹೊರತಟ್ನಾಳ್ ಮಾತನಾಡಿ ಪರಿಶಿಷ್ಟ ಜಾತಿ, ಪಂಗಡಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಕೊಡಬೇಕಾದ ಮೀಸಲಾತಿಗೆ ಸಾಂವಿಧಾನಿಕವಾದ ಮಾನ್ಯತೆ ಇದೆ ಇದನ್ನು ಸಮರ್ಥವಾಗಿ ಹೈಕೋರ್ಟಿನಲ್ಲಿ ಮಂಡಿಸುವಲ್ಲಿ ಸೋತಿರುವ ರಾಜ್ಯಸರ್ಕಾರ  

ಒಳ ಮೀಸಲಾತಿಯಿಂದ ಹಿಂದೆ ಸರಿಯುವ ಭರದಲ್ಲಿ ಖಅ, ಖಖಿ ಮೀಸಲಾತಿಯನ್ನು ಕತ್ತರಿಸಿ ನೇಮಕ ಪ್ರಕ್ರಿಯೆ ಆರಂಭಿಸಲು ಹೊರಟಿರುವುದು ಸಾಮಾಜಿಕ ನ್ಯಾಯದ ವಿಷಯದಲ್ಲಿ ಸರ್ಕಾರಕ್ಕೆ ಬದ್ಧತೆಯ ಕೊರತೆ ಇರುವುದನ್ನು ಸ್ಪಷ್ಟಪಡಿಸಿದೆ, ಈಗ ಸರ್ಕಾರ ಭರ್ತಿ ಮಾಡಲು ಹೊರಟಿರುವ  ನೇಮಕಾತಿಯಲ್ಲಿ ಸರ್ಕಾರದ ಬೇಜವಾಬ್ದಾರಿ ನಡೆಯಿಂದ ನಾಲ್ಕು ಸಾವಿರಕ್ಕೂ ಮಿಕ್ಕಿ ಎಸ್ಸಿ ಎಸ್ಟಿ ಯುವಜನರಿಗೆ ಅನ್ಯಾಯವಾಗಲಿದೆ, ಸರ್ಕಾರ ತನ್ನ ಅಹಂಕಾರ ಪ್ರದರ್ಶಿಸುವುದನ್ನು ನಿಲ್ಲಿಸಲಿ ವಿಧಾನ ಪರಿಷತ್ತಿನ ಸದಸ್ಯರಾದ ಹೇಮಲತಾ ನಾಯಕ್ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ನಾಗರಾಜ್ ಬಿಲ್ಗಾರ್, ಬಿಜೆಪಿ ಮುಖಂಡರಾದ ಅಶ್ವಿನಿ ದೇಸಾಯಿ,ರಮೇಶ್ ನಾಡಿಗೇರ್, ವಿಜಯ್ ತಾಳ್ಕೇರಿ, ಪ್ರಸಾದ್ ಗಾಳಿ ಉಪಸ್ಥಿತರಿದ್ದರು.