ಶ್ರೀಮಾತೆ ಶಾರದಾದೇವಿಯವರು ಶಾಂತಿಯ ಸಾಗರ: ಡಾ. ಶೈಲಜಾ ಅಮೂರ

ಶ್ರೀಮಾತೆ ಶಾರದಾದೇವಿಯವರು ಶಾಂತಿಯ ಸಾಗರ: ಡಾ. ಶೈಲಜಾ ಅಮೂರ Shrimati Sharada Devi is an ocean of peace: Dr. Shailaja Amura

 ಹುಬ್ಬಳ್ಳಿ 15: ಪ್ರಸ್ತುತ ದಿನಮಾನದಲ್ಲಿ ಹಲವಾರು ಒತ್ತಡಗಳು ಜವಾಬ್ದಾರಿಗಳ ಮತ್ತು ಅನೇಕ ತಾಪತ್ರಯಗಳ ಮಧ್ಯದಲ್ಲಿ ಜೀವನ ನಡೆಸುತ್ತಿರುವ ನಮಗೆ ಶ್ರೀಮಾತೆ ಶಾರದಾದೇವಿಯವರ ಜೀವನದ ಅಧ್ಯಯನದಿಂದ ಶಾಂತಿಯ ಸಮಾಧಾನ ನೀಡುತ್ತದೆ ಅಷ್ಟೇ ಅಲ್ಲ ಶಾಂತಿಯ ಸಾಗರದಲ್ಲಿ ಮಿಂದೆದ್ದ ಅನುಭವ ನೀಡುತ್ತದೆ ಎಂದು ಖ್ಯಾತ ವೈದ್ಯೆ ಡಾ. ಶೈಲಜಾ ಆಮೂರ ಹೇಳಿದರು.ಅವರು ಹುಬ್ಬಳ್ಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ಲಿಂಗರಾಜನಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಮಾತೆ ಶ್ರೀಶಾರದಾದೇವಿಯವರ 173ನೇ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ಶ್ರೀಮಾತೆ ಶಾರದಾದೇವಿ ಅವರ ಜೀವನ ಅತ್ಯಂತ ಸರಳ ಮತ್ತು ನಮ್ಮೆಲ್ಲರಿಗೂ ಕೂಡ ದಾರೀದೀಪ ಅವರು ಈ ಯುಗದ ಅವತಾರ. ಶ್ರೀ ರಾಮಕೃಷ್ಣ ಪರಮಹಂಸರ ಸಹಧರ್ಮಿಣಿಯಾಗಿ ಅವರ ಆಧ್ಯಾತ್ಮಿಕ ಸಾಧನೆಗೆ ಶಕ್ತಿಯಾಗಿ ನಿಂತು ಶ್ರೀರಾಮಕೃಷ್ಣ ಪರಮಹಂಸರ ನೇರ ಶಿಷ್ಯರ ಅಷ್ಟೇ ಅಲ್ಲದೇ ಎಲ್ಲ ಭಕ್ತವೃಂದದ ಜವಾಬ್ದಾರಿಯನ್ನು ನಿರ್ವಹಿಸಿರುವ ರೀತಿ ನಿಜಕ್ಕೂ ಅಚ್ಚರಿಪಡುವಂಥದ್ದು.  

ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ತೇಜಸಾನಂದಜೀ ಮಹಾರಾಜ್ ಭಜನೆಯನ್ನು ನಡೆಸಿಕೊಟ್ಟರು ಇವರೊಂದಿಗೆ ಡಾ. ನಾಗಲಿಂಗ ಮುರಗಿ ತಬಲಾ ಸಾಥ ನೀಡಿದರು. ಭಾಗ್ಯ, ಕುಮಾರಿ ಮೇಘಾ, ಪ್ರಿಯಾ, ವೀಣಾ, ಶೈಲಜಾ, ಶ್ರದ್ಧಾ ಅವರು ಶ್ರೀಲಲಿತಾ ಸಹಸ್ರನಾಮ ಪಾರಾಯಣ ಮಾಡಿದರು, ಸ್ವಯಂ ಸೇವಕ ನಾಗೇಂದ್ರ ಮತ್ತು ಮಲ್ಲಿಕಾರ್ಜುನ ಶಾರದಾ ಹೋಮ ನಡೆಸಿಕೊಟ್ಟರು.  ಕಾರ್ಯಕ್ರಮದಲ್ಲಿ ಧರ್ಮದರ್ಶಿ ದಯಾನಂದರಾವ, ಭಕ್ತರಾದ ಸಂಗಣ್ಣ ಬೆಳಗಾವಿ, ದ್ಯಾಪನಗೌಡ್ರ ಸೇರಿದಂತೆ ಶ್ರೀರಾಮಕೃಷ್ಣ ಸೇವಾ ಸಮಿತಿಯ ಎಲ್ಲ ಸದಸ್ಯರು ಭಾಗವಹಿಸಿದ್ದರು.