ಶ್ರೀ ಸಂತ ಸೇವಾಲಾಲ ಮಹಾರಾಜ ಜಯಂತಿಸಮಾನತೆಗೆ ಶ್ರಮಿಸಿದ ಸೇವಾಲಾಲ್ ಕೊಡುಗೆ ಅಪಾರ: ಪಿ.ಬಿ ಲಮಾಣಿ
Shri Sant Sevalal Maharaja Jayanti: Sevalal's contribution to equality is immense: P.B. Lamani
ಬೆಳಗಾವಿ 22 : ಸಂತ ಸೇವಾಲಾಲ್ ಮಹಾರಾಜರನ್ನು ಬಂಜಾರಾ ಸಮುದಾಯದ ಪ್ರಮುಖ ಗುರು, ಸಾಮಾಜಿಕ ಸುಧಾರಕ ಮತ್ತು ಶಾಂತಿಪರ ಚಿಂತಕ ಎಂದು ಪರಿಗಣಿಸಲಾಗುತ್ತದೆ.ಯಾವುದೇ ವ್ಯಕ್ತಿಯ ಮೇಲೂ ಭೇದಭಾವ ಮಾಡಬಾರದು, ಎಲ್ಲಾ ಮಾನವರಿಗೆ ಸಮಾನಗೌರವ ಕೊಡುವುದೇ ಸಂತ ಸೇವಾಲಾಲ್ ಸಂದೇಶ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಪಿ.ಬಿ ಲಮಾಣಿ ತಿಳಿಸಿದರು.ಜಿಲ್ಲಾಡಳಿತ. ಜಿಲ್ಲಾ ಪಂಚಾಯತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ (ಫೆ.22) ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಶ್ರೀ ಸಂತ ಸೇವಾಲಾಲ್ ಮಹಾರಾಜರ 287 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಂಜಾರಾ ಸಮುದಾಯವು ರಾಣಾ ಪ್ರತಾಪನ ಸಾಮ್ರಾಜ್ಯದ ನೀವಾಸಿಗಳಾಗಿದ್ದರು. ಜೀವನದುದ್ದಕ್ಕೂ ಸಮಾಜದ ಅಭಿವೃದ್ಧಿಗೆ ಶ್ರಮಿಸಿದರು. ಬಂಜಾರ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುಬೇಕು. ಎಲ್ಲ ಕ್ಷೇತ್ರದಲ್ಲಿ ಸಾಧಿಸಿ ಸಮಾಜದ ಮುಖ್ಯ ವಾಹಿನಿಗೆ ಸಮುದಾಯ ಬರಬೇಕು ಎಂದು ಹೇಳಿದರು.ಎಷ್ಟೋ ಜನ ಸೇವಲಾಲ್ ಹೇಸರಿನಲ್ಲಿ ಮಾಲೆ ಧರಿಸಿ ಸನ್ಯಾಸತ್ವ ಸ್ವಿಕರಿಸಿ ದುಷ್ಚಟದಿಂದ ದೂರ ಇರುತ್ತಾರೆ. ಬಂಜಾರಾ ಸಮಾಜ ಒಂದು ಹೃದಯವಂತಿಕೆ ಸಮಾಜವಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದುತ್ತಿರುವ ಸಮಾಜವಾಗಿದೆ."ಸಿಕೋ ಸಿಕಾವೂ" (ಕಲಿತು ಕಲಿಸಿ) ಎಂದು ಸೇವಾಲಾಲ್ ರವರು ಹೇಳಿದ್ದಾರೆ ಅದರಂತೆ ನಾವೆಲ್ಲರೂ ನಮ್ಮ ಮಕ್ಕಳಿಗೆ ಶಿಕ್ಷಣ ಕಡ್ಡಾಯಗೊಳಿಸಬೇಕು ಎಂದು ಪಿ.ಬಿ ಲಮಾಣಿ ಹೇಳಿದರು. ಬಂಜಾರ ಸಮುದಾಯ ಪಾರಂಪರಿಕವಾಗಿ ತಮ್ಮದೇಯಾದ ಆಚಾರ, ವಿಚಾರ, ಸಂಸ್ಕೃತಿ ಹೊಂದಿದೆ. ಅನೇಕ ಜನರು ನಗರಗಳಿಗೆ ಹಾಗೂ ಬೇರೆ ಬೇರೆ ಪ್ರದೇಶಗಳಿಗೆ ವಲಸಿ ಹೋಗುತ್ತಿದ್ದಾರೆ.
ಸಮಾಜದ ಅಭಿವೃದ್ಧಿಗೆ ಕುರಿತು ನಿರಂತರ ಬಗ್ಗೆ ಚರ್ಚೆಯಾಗಬೇಕು. ಪ್ರಸ್ತುತ ಸ್ಥಿತಿ ಗತಿಗಳ ಬಗ್ಗೆ ಯೋಚಿಸಬೇಕು ಇದರಿಂದ ಸಮಾಜದ ಅಭಿವೃದ್ಧಿಯಾಗಲಿದೆ. ಸಮಾಜದ ಅಭಿವೃದ್ಧಿಗ್ಗೆ ಪ್ರತಿಯಬ್ಬರು ಕೈ ಜೋಡಿಸಬೇಕು. ಎಂದು ಕುಡಚಿ ಮತಕ್ಷೇತ್ರದ ಮಾಜಿ ಶಾಸಕ ಪಿ. ರಾಜೀವ ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬಂಜಾರಾ ಪೀಠದ ಚಿತ್ರದುರ್ಗ ಸರ್ದಾರ ಸೇವಾಲಾಲ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.***ಇದಕ್ಕೂ ಮುಂಚೆ ನಗರದ ಕೋಟೆ ಕೆರೆ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಕೋಟೆ ಕೇರೆಯಿಂದ ರಾಣಿ ಚನ್ನಮ್ಮ ವೃತ್ತ, ಕೃಷ್ಣದೇವರಾಯ ವೃತ್ತದ ಮಾರ್ಗವಾಗಿ ಕುಮಾರ ಗಂಧರ್ವ ಕಲಾ ಮಂದಿರದವರೆಗೂ ತಲುಪಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಬಂಜಾರಾ ಪೀಠದ ಚಿತ್ರದುರ್ಗ ಸರ್ದಾರ ಸೇವಾಲಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಬಂಜಾರ ಸಮಾಜದ ಮುಖಂಡರು ಹಾಜರಿದ್ದರು.ಉಪನಿರ್ದೇಶಕರು,ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ,ಬೆಳಗಾವಿ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 