ಬಾಲಕನ ಕುಟುಂಬಕ್ಕೆ ಸಾಂತ್ವನ,ಪರಿಹಾರ ಮತ್ತು ಆಶ್ರಯ ಮನೆ ಭರವಸೆ ಶ್ರಿ ಕೃಷ್ಣಗೌಡ್ರ ಪಾಟೀಲ

Shri Krishna Gowdra Patil promises consolation, relief and a shelter home to the boy's family

ಬಾಲಕನ ಕುಟುಂಬಕ್ಕೆ  ಸಾಂತ್ವನ, ಪರಿಹಾರ ಮತ್ತು ಆಶ್ರಯ ಮನೆ ಭರವಸೆ ಶ್ರಿ ಕೃಷ್ಣಗೌಡ್ರ ಪಾಟೀಲ 

ಗದಗ 10 : ಗದಗ ಗಂಗಿಮಡಿ ನಗರದ ಹೊರ ವಲಯದಲ್ಲಿರುವ ಕೃಷಿ ಹೊಂಡದಲ್ಲಿ ಇತ್ತಿಚೆಗೆ ಮುಳುಗಿ ಮೃತಪಟ್ಟ ಸವಿತಾ ಸಮಾಜದ ದಿ.ಶಿವಾಜಿ ಮಹೇಶ ವಡ್ಡೆಪಲ್ಲೇ ಎಂಬ ಬಾಲಕನ ಮನೆಗೆ ಹಿರಿಯ ಸಚೀವರಾದ ಎಚ್ ಕೆ ಪಾಟೀಲಜಿ ಅವರ ಸುಪುತ್ರರಾದ ಕೃಷ್ಣಗೌಡ್ರ ಪಾಟೀಲ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು ಇದೆ ಸಂದರ್ಭದಲ್ಲಿ ದಿ. ಶಿವಾಜಿ ಮಹೇಶ ವಡ್ಡೆಪಲ್ಲಿ ಎಂಭ 14 ವರ್ಷದ ಬಾಲಕನ ಕುಟುಂಭದವರು ಅತ್ಯಂತ ಕಡು ಬಡವರಾಗಿದ್ದು ಆ ಕುಟುಂಭಕ್ಕೆ ಶಿವಾಜಿ ಒಬ್ಬನೆ ಗಂಡು ಮಗನಾಗಿದ್ದ ಆದರೆ ಆ ಒಬ್ಬ ಮಗನನ್ನೇ ಕಳಿದುಕೊಂಡಿದ್ದು ದುಖ್ಖದ ಸಂಗತಿಯಾಗಿದ್ದು ಈ ಕುಟುಂಭಕ್ಕೆ ಯಾವುದೆ ಆಶ್ರಯ ವಿಲ್ಲ ಹಾಗಾಗಿ ಈ ಬಡ ಕುಟುಂಭಕ್ಕೆ ದಯಾಳುಗಳಾದ ಸರಕಾರವು ಕಲ್ಯಾಣ ನೀದಿಯಿಂದ ಮತ್ತು ಮುಖ್ಯಮಂತ್ರಿಗಳ ಪರಿಹಾರ ನೀದಿಯಿಂದ ಗದಗ ಜಿಲ್ಲಾ ಉಸ್ತುವಾರಿ ಸಚೀವರ ಪಂಡದಿಂದ ಮತ್ತು ಗದಗ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಒಟ್ಟು 25 ಲಕ್ಷ ರೂ ಪರಿಹಾರ ಮತ್ತು ಒಂದು ಆಶ್ರಯ ಮನೆ ದೊರಕಿಸಿಕೊಡಬೆಕೇಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಹಡಪದ ಅವರು ಕೃಷ್ಣಗೌಡ್ರ ಪಾಟೀಲರಿಗೆ ಸಮಾಜದಿಂದ ಮನವಿ ಸಲ್ಲಿಸಿ ಅವರ ಮೂಲಕ ಸರಕಾರವನ್ನು ಒತ್ತಾಯಿಸಿ ಆಗ್ರಹಿಸಿದರು ಕಾಂಗ್ರೇಸ್ ಯುವ ನಾಯಕರಾದ ಕೃಷ್ಣಗೌಡ್ರ ಪಾಟೀಲರು ಜಿಲ್ಲಾ ಸವಿತಾ ಸಮಾಜದ ಮನವಿ ಸ್ವಿಕರಿಸಿ ಮಾತನಾಡಿ ಘಟನೆಯಿಂದ ಮನಸ್ಸಿಗೆ ನೋವುಂಟಾಗಿದೆ. ಒಬ್ಬನೇ ಒಬ್ಬನಾಗಿದ್ದ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮನ ಕಲಕುತ್ತಿದೆ. ಬಾಲಕನ ಕುಟುಂಬಕ್ಕೆ ವಿದ್ಯಾರ್ಥಿ ಕಲ್ಯಾಣ ನಿಧಿಯಿಂದ ಜತೆಗೆ ಸರಕಾರದಿಂದ ಸಿಗಲಿರುವ ಎಲ್ಲರೀತಿಯ ಪರಿಹಾರಗಳನ್ನು ದೊರಕಿಸಿಕೊಡಲಾಗುತ್ತದೆ ಮತ್ತು ಒಂದು ಆಶ್ರಯ ಮನೆ ಕೂಡಲೇ ಮಂಜೂರು ಮಾಡಿಸಿ ತಮಗೆ ಅನಕೂಲ ಮಾಡಿಸಿ ಕೊಡುತ್ತೆನೆ ಎಂದು ಭರವಸೆ ನೀಡಿ ಮಾತನಾಡಿದರು ಗದಗ ಗಂಗಿಮಡಿ ನಗರದ ಯುವ ನಾಯಕರಾದ ಕುಮಾರ ಮಾರನಬಸರಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಠ್ಠಲ ಸಪಾರಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು      ಈ ಸಂದರ್ಭದಲ್ಲಿ ಕಾಂಗ್ರೇಸ್ ಯುವ ಘಟಕದ ಅಧ್ಯಕ್ಷರಾದ ಅಶೋಕ ಮಂದಾಲಿ ಗದಗ ಸವಿತಾ ಸಮಾಜ ಸುಧಾರಣಾ ಸಂಘದ ಅಧ್ಯಕ್ಷರಾದ ಪರಶುರಾಮ ಕೊಟೇಕಲ್ಲ ಮಾಜಿ ಅಧ್ಯಕ್ಷರಾದ ಹೇಮಂತ ವಡ್ಡೆಪಲ್ಲಿ ಜಿಲ್ಲಾ ಸಮಾಜದ ಪ್ರ.ಕಾರ್ಯದರ್ಶಿ ಮಂಜುನಾಥ ಮಾನೆ ಜಿಲ್ಲಾ ಕಜಾಂಚಿ ಅರೂಣ ರಾಂಪೂರ ಹಿರಿಯರಾದ ಹನಮಂತಪ್ಪ ರಾಂಪೂರ ಪಾಂಡು ಕಾಳೆ ಜಿಲ್ಲಾ ಪರಶುರಾಮ ರಾಂಪೂರ ರಮೇಶ ರಾಂಪೂರ ಸುರೇಶ ಬುದೂರ ಶ್ರೀನಿವಾಸ ಕೊಟೇಕಲ್ಲ ರಾಮು ವಡ್ಡೆಪಲ್ಲಿ ಯುವ ನಾಯಕರಾದ ವೆಂಕಟೇಶ ಕೊಟೇಕಲ್ಲ ಕಾರ್ತಿಕ ಆಗಲಾವೆ ಶ್ರೀಧರ ಕಡಬೂರ ಹಾಗೂ ಸಂತ್ರಸ್ತ  ಮಹಿಳೆಯ ಗಂಡ. ಮಗಳು. ಮತ್ತು ಅಣ್ಣನಾದ ಗುಂಡುರಾವ್ ಹಡಪದ ಹಾಗೂ ಗಂಗಿಮಡಿ ನಗರದ ಪ್ರಮುಖ ನಾಯಕರು ಸವಿತಾ ಸಮಾಜದ ಇತರರು ಉಪಸ್ತಿತರಿದ್ದರುಕೃಷ್ಣಾ ಎಚ್ ಹಡಪದ7204240818