ಲೋಕದರ್ಶನವರದಿ
ಹಗರಿಬೊಮ್ಮನಹಳ್ಳಿ 05:ಇಂದಿನ ಯುವ ಬರಹಗಾರರು ಬೆರಳೆಣಿಕೆಯಷ್ಟು ಪುಸ್ತಕಗಳ ಲೋಕಾರ್ಪಣೆ ಮಾಡುವುದರ ಮೂಲಕ ಸಾಹಿತಿಗಳೆಂದು ಬೀಗಿ ಬಿಂಬಿತರಾಗುವುದಕ್ಕಿಂತ ನಿರಂತರ ಶ್ರಮ ಮತ್ತು ಸಂಶೋಧನೆಯಿಂದ ಹರಿಯುವ ನೀರಿನಂತೆ ನೂತನ ಮೈಲುಗಲ್ಲನ್ನು ಸೃಷ್ಟಿಸಬೇಕು ಎಂದು ಹಂಪಿ ಕನ್ನಡ ವಿವಿಯ ಜಾನಪದ ಪ್ರಾಧ್ಯಾಪಕ ಡಾ.ಮಂಜುನಾಥ ಬೇವಿನಕಟ್ಟಿ ಅಭಿಪ್ರಯಾ ವ್ಯೆಕ್ತಪಡಿಸಿದರು.
ಪಟ್ಟಣದ ರೇಣುಕಾ ಸಂಯುಕ್ತ ಪ.ಪೂ.ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ವಿನ್ಯಾಸ್ ಪ್ರಕಾಶನದ ಚೈತ್ರಾ.ವಿ.ಮಾಲವಿರವರ "ಒಳಧ್ವನಿ" ಕಿರು ಕಾದಂಬರಿ ಲೋಕಾರ್ಪಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಯುವಜನಾಂಗ ಸಾಹಿತ್ಯ ಲೋಕಕ್ಕೆ ಸೇವೆ ಸಲ್ಲಿಸುವ ಹೆಬ್ಬಯಕೆ ಹೊಂದಿದ ಯುವ ಪ್ರತಿಭೆಗಳು ಅರಳುವ ಮುನ್ನ ಸಾಕಷ್ಟು ಅಡೆತಡೆಗಳು ಸೃಷ್ಠಿ ಸಹಜವಾದರೂ ಅವುಗಳನ್ನು ಮೆಟ್ಟಿನಿಲ್ಲುವ ಜೊತೆ ಮತ್ತಷ್ಟು ಶ್ರಮವಹಿಸಿದರೆ ಮಾತ್ರ ಸಾಹಿತಿಗಳ ಸಾಲಿಗೆ ಸೇರಿಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂದರು. ಯುವ ಸಾಹಿತಿಗಳು ಜಾಗತೀಕರಣದಿಂದ ಸೃಷ್ಠಿಯಾಗಿರುವ ಸಮಸ್ಯೆಗಳತ್ತ ಬೆಳಕು ಚಲ್ಲುವಂತೆ ಕಾರ್ಯ ನಿರ್ವಹಿಸಬೇಕು, ಸಾಮಾನ್ಯ ಜನರಿಗೆ ಅಥರ್ೈಯಿಸಿಕೊಳ್ಳುವ ಹಾಗೂ ಜೀಣರ್ಿಸಿಕೊಳ್ಳುವಂತಹ ಸಾಹಿತ್ಯ ನೀಡಬೇಕು ಲೋಕಾರ್ಪಣೆಗೊಳ್ಳುತ್ತಿರುವ ಕಿರು ಕಾದಂಬರಿ ಓದುಗರನ್ನು ಮನಗೆಲ್ಲುವಂತಹಾ ಸಾಹಿತ್ಯ ಸೊಗಡು ಅಡಕವಾಗಿದ್ದು ಬರಹಗಾತರ್ಿ ಚೈತ್ರಾ.ವಿ.ಮಾಲವಿ ಸಾಹಿತ್ಯದಲ್ಲಿ ಇನ್ನಷ್ಟು ಸಾಧನೆಯತ್ತ ಸಾಗಲಿ ಎಂದರು.
ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಅಮರೇಶ ನುಗುದೋಣಿಯವರು ಪುಸ್ತಕ ಬಿಡುಗಡೆಮಾಡಿ, ಯಾವುದೇ ಬರಹಗಾರರಿಗೆ ಅನುಭವದಿಂದ ಬರವಣಿಗೆ ಬರುತ್ತದೆ, ಅನುಭವವು ಭಾಷೆಯಾಗಿ ರೂಪಗೊಳ್ಳತ್ತದೆ. ಜೀವನದಲ್ಲಿನ ಅನೇಕ ಅನುಭವಗಳ ಮುಖಾಂತರ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡುವಂತೆ ಪ್ರೇರಣೆ ನೀಡುತ್ತದೆ, ವಿದ್ಯಾಥರ್ಿ ಜೀವನದಲ್ಲಿಯೇ ಕಥೆ, ಕವನಗಳನ್ನು ಬರೆದು ಬೆಳೆಯಬೇಕು ಇದಕ್ಕೆ ಶಿಕ್ಷಕರು ಮತ್ತು ಪಾಲಕರು ಪ್ರೋತ್ಸಹ ನೀಡಬೇಕು ಎಂದರು. ಯುವ ಬರಹಗಾತರ್ಿ ಚೈತ್ರಾ.ವಿ. ಮಾಲವಿ ತಮ್ಮ ಅನುಭವಕ್ಕೆ ತಕ್ಕ ಮಟ್ಟಿಗೆ ಕಿರು ಕಾದಂಬರಿ ರಚನೆಮಾಡಿ ಓದುಗರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ ಎಂದರು.
ಎಡಿಯೂರು ಸಿದ್ಧಲಿಂಗೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎಂ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿ, ಸಾಹಿತ್ಯ ಎಂದಿಗೂ ನಿಂತ ನೀರಾಗಲು ಸಾಧ್ಯವಿಲ್ಲ. ವಿದ್ಯಾಥರ್ಿಗಳು ಶಾಲಾ ಪಠ್ಯ ವéಿಯಗಳಿಗೆ ಮಾರು ಹೋಗದೆ ಸಾಹಿತ್ಯ ಲೋಕದ ಕಥೆ, ಕವನ, ಕಾದಂಬರಿಯಂತಹ ಪುಸ್ತಕಗಳನ್ನು ಓದುವುದರಿಂದ ಚಟುವಟಿಕೆಯಿಂದ ಕೂಡಿರಲು ಸಾಧ್ಯವಾಗುತ್ತದೆ. ನಮಗೆಲ್ಲ ಹಿರಿಯರು ಕಥೆಗಳ ಮೂಲಕ ಸಮಾಜದಲ್ಲಿನ ಅನೇಕ ವಿಷಯಗಳನ್ನು ಅಲ್ಪಮತಿಗಳಿದ್ದಾಗಲೇ ಅಥರ್ೈಯಿಸಿಕೊಳ್ಳವಂತಹ ಸಾಹಿತ್ಯ ಸೃಷ್ಠಿಸಿ ಹೇಳುತ್ತಿದ್ದರು.ಇಂದಿನ ಆಧುನಿಕ ತಂತ್ರಜ್ಞಾನದಿಂದ ಸಾಹಿತ್ಯ ಸೊರಗಿದೆ ಎಂದರೆ ತಪ್ಪಾಗಲಾರದು ಹಾಗಾಗಿ ತಂತ್ರಜ್ಞಾನದ ಅವಶ್ಯಕ ವಿಚಾರಗಳನ್ನು ತಿಳಿಯುತ್ತಾ ಜೊತೆಗೆ ಸಾಹಿತ್ಯ ಲೋಕದತ್ತ ಮುಖಮಾಡಬೇಕು ಎಂದರು.
ಬಳ್ಳಾರಿಯ ಕೃಷ್ಣದೇವರಾಯ ಅತಿಥಿ ಉಪನ್ಯಾಸಕರಾದ ಡಾ.ಶಖೀಲಾ ಪುಸ್ತಕದ ಬಗ್ಗೆ ಪರಿಚಾಯಮಾಡುತ್ತಾ ಇಂದು ಮಹಿಳೆಯ ಬದುಕು ಭದ್ರವಾಗುತ್ತಿದೆ, ಈ ಕಾದಂಬರಿ ಮಹಿಳೆಯ ಅಸಹನೆಯನ್ನು ತೋರುತ್ತಿದೆ. ಇದು ಓದುವುದಕ್ಕೆ ಸೊಗಸಾಗಿದೆ. ಆದರೆ, ಬರಹಗಾರರಾದ ಚೈತ್ರಾವರವರು ಇನ್ನಷ್ಟು ಮುಂದೆ ಹೋಗಿ ಆಧುನಿಕ ಮಹಿಳೆಯರ ಬಗ್ಗೆ ಕಥೆ, ಕಾದಂಬರಿ ಬರೆಯಬೇಕು ಎಂದರು.
ಶಿಕ್ಷಕ ಪರಮೇಶ್ವರ ಸೊಪ್ಪಿಮಠ್ ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದಲ್ಲಿ ಮಹಿಳಾ ನಿರ್ಲಕ್ಷ್ಯಕ್ಕೊಳಗಾದ ಸಾಹಿತಿಗಳಾಗಿದ್ದಾರೆ. ಇಂದು ಸಮಾಜದಲ್ಲಿ ಹೊರಬಂದು ಸಾಹಿತ್ಯ ರಚನೆಮಾಡುವುದೊಂದು ದೊಡ್ಡಸಾಧನೆಯಾಗಿದೆ. ಅಂತಹ ಮಹಿಳೆ ನಮ್ಮ ತಾಲೂಕಿನವರೇ ಆಗಿದ್ದು ಮುಂದೆ ಬಳ್ಳಾರಿ ಜಿಲ್ಲೆಯ ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಹೆಚ್ಚಿನ ಸೇವೆ ಸಲ್ಲಿಸಲಿ ಎಂದರು.
ವಿದ್ಯಾಪೀಠ ಕಾರ್ಯದಶರ್ಿಯಾದ ಇಂದುಮತಿ ತಿಪ್ಪೇಸ್ವಾಮಿ, ಕಸಾಪ ಬಳ್ಳಾರಿ ಮಾಜಿ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಕಂಪ್ಲಿಯ ಸಾಹಿತ್ಯ ಸಿರಿ ಪ್ರತಿಷ್ಠಾನದ ಅಧ್ಯಕ್ಷ ಜಿ.ಪ್ರಕಾಶ, ಗಂ.ಭೀ.ಸ.ಪ.ಪೂ.ಕಾಲೇಜ್ ಉಪನ್ಯಾಸಕ ಗೂಳಪ್ಪ ಹುಲ್ಮನಿ, ಉಪನ್ಯಾಸಕಿ ಸುಧಾ ಚಿದಾನಂದಗೌಡ, ಹೊಸಪೇಟೆಯ ಸಾಹಿತಿ ಡಾ.ಎಸ್.ಎಂ.ಸಾವಿತ್ರಮ್ಮ, ಸಿ.ಚಂದ್ರಪ್ಪ ಮಾಲವಿ, ಅಡೂರು ಪಂಪಣ್ಣ, ವಿನ್ಯಾಸ್ ಪ್ರಕಾಶನದ ಕಾಶಿ ವಿಶ್ವನಾಥ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಉಪನ್ಯಾಸಕ ಬೆಟಪ್ಪ ಹಾಗೂ ಶಿಕ್ಷಕ ಅಂಬಿಗರ ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು