ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ
Shivayogi Siddarameshwara Jayanti Celebration
ಕಂಪ್ಲಿ 14: ಕಾಯಕಯೋಗಿ ಸಿದ್ದರಾಮೇಶ್ವರ ಜಯಂತ್ಯೋತ್ಸವವನ್ನು ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಬುಧವಾರ ಅರ್ಥಪೂರ್ಣವಾಗಿ ಆಚರಿಸಿದರು.ತಹಶೀಲ್ದಾರ್ ಜೂಗಲ್ ಮಂಜುನಾಯಕ ಮಾತನಾಡಿ, ಸಿದ್ದರಾಮೇಶ್ವರವರ ತತ್ವಾದರ್ಶಗಳು ಉತ್ತಮ ಜೀವನಕ್ಕೆ ದಾರಿ ದೀಪವಾಗಿವೆ ಎಂದರು.ತಾಲೂಕು ಭೋವಿ ಸಂಘದ ಅಧ್ಯಕ್ಷ ಶಾಮೀಲ್ ವಿ.ಶೇಖರ್ಪ ಮಾತನಾಡಿ, ಶಿವಯೋಗಿಯಾಗಿದ್ದ ಸಿದ್ದರಾಮೇಶ್ವರರು ಕಾಯಕದ ಮೂಲಕ ಸಮಾಜ ಸೇವೆ ಮಾಡಿದ್ದಾರೆ.
ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸಿ ಸಮಾಜದ ಏಳಿಗೆಗಾಗಿ ಶ್ರಮಿಸಿದವರು. ಜ.21ರಂದು ಪಟ್ಟಣದಲ್ಲಿ ಸಮಾಜದಿಂದ ಜಯಂತ್ಯೋತ್ಸವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದರು. ಸಣಾಪುರ ರಸ್ತೆಯ ಶಾರದಾ ಶಾಲೆ ಬಳಿಯಲ್ಲಿರುವ ಭೋವಿ ಕಾಲೋನಿಯಲ್ಲಿ ಶ್ರೀರಾಮ ಸೇವಾ ಸಮಿತಿಯಿಂದ 854ನೇ ಸಿದ್ದರಾಮೇಶ್ವರ ಜಯಂತಿ ಅದ್ಧೂರಿಯಾಗಿ ಬುಧವಾರ ಆಚರಿಸಿದರು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಗೋವಿಂದರಾಜಲು, ಉಪಾಧ್ಯಕ್ಷ ನೀಲಕಂಠ, ಕಾರ್ಯದರ್ಶಿ ಪಕ್ಕೀರ್ಪ, ಶ್ರೀರಾಮ ಸೇವಾ ಸಮಿತಿ ಕಾರ್ಯದರ್ಶಿ ವಿ.ಟಿ.ಕುಮಾರ
ಮುಖಂಡರಾದ.ವಿ.ಸತ್ಯಪ್ಪ,ಎಸ್.ವಿ.ಶ್ರೀನಿವಾಸಲು,ಹೆಚ್.ಹುಲುಗಪ್ಪ,ವೆಂಕಟರಮಣ,ವಿ.ಟಿವಿಶ್ವನಾಥ, ಬಳ್ಳಾಪುರ ಮೌನೇಶ, ಎಂ ವಿರೇಶ, ಯಲ್ಲಪ್ಪ, ಪ್ರದೀಪ, ಅಂಬರೇಶ, ಗೋವಿಂದ, ರಾಜೇಶ, ನಾಗೇಂದ್ರ, ಈರಣ್ಣ, ವಿ.ಅಜಯ, ಬಿ.ಬಸವ, ವಿ.ತಿಮ್ಮರಾಜು, ನಂದಿಬಸವ, ವಿಬಿ ವಿರೇಶ, ಪರಶುರಾಮ, ಶಿವಕುಮಾರ, ರಾಹುಲ್, ದುರುಗಪ್ಪ, ಪ್ರಸಾದ್ ವಿಬಿ ನಾಗರಾಜ, ತಿಪ್ಪೇಸ್ವಾಮಿ, ಸೇರಿದಂತೆ ಅನೇಕರಿದ್ದರು. ನಂತರ ಸಂಘದ ಸಮುದಾಯ ಭವನದಲ್ಲಿ ಜಯಂತಿ ಆಚರಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 