ಕೊಪ್ಪಳದಲ್ಲಿಂದು ಶಿವಸಿಂಪಿ ಸೌಹಾರ್ದ ಸಹಕಾರ ಸಂಘ ನಿಯಮಿತ ಪ್ರಾರಂಭೋತ್ಸವ
Shivasimpi Souharda Sahakari Sangha Limited inauguration ceremony in Koppal today
ಕೊಪ್ಪಳ 13: ನಗರದಲ್ಲಿ ನೂತನವಾಗಿ ಕೊಪ್ಪಳ ಶಿವಸಿಂಪಿ ಸೌಹಾರ್ದ ಸಹಕಾರ ಸಂಘ ನಿಯಮಿತ ನೂತನ ಸಹಕಾರಿಯ ಪ್ರಾರಂಭೋತ್ಸವ ಮತ್ತು ಉದ್ಘಾಟನಾ ಸಮಾರಂಭ 13ರ ಶುಕ್ರವಾರದಂದು ಬೆಳಗ್ಗೆ 11 ಗಂಟೆಗೆ ಗವಿಮಠ ರಸ್ತೆ ಅರ್ಬನ್ ಬ್ಯಾಂಕ್ ಪಕ್ಕದ ಕಟ್ಟಡದಲ್ಲಿ ಪ್ರಾರಂಭೋತ್ಸವ ಜರುಗಲಿದೆ, ಸಮಾರಂಭದ ದಿವ್ಯ ಸಾನಿಧ್ಯವನ್ನು ಮುಂಡರಗಿ ಶ್ರೀ ಅನ್ನದಾನೇಶ್ವರ ಶಾಖಾ ಮಠ ಕುಕ್ನೂರಿನ ಡಾ, ಮಹಾ ದೇವ ಮಹಾಸ್ವಾಮೀಜಿ ಗಳು ಸಾನಿಧ್ಯ ವಹಿಸಲಿದ್ದು, ನಿವೃತ್ತ ಅಭಿಯಂತ ಬಸವರಾಜ್ ಮೆರವಣಿಗೆ ,ಉದ್ಯಮಿ ಕುಷ್ಟಗಿಯ ವೀರಣ್ಣ ಚಟ್ಟೆರ್, ಸೈಬರ್ ಪೊಲೀಸ್ ಠಾಣೆಯ ಎ ಎಸ್ ಐ ವಿರೂಪಾಕ್ಷಪ್ಪ ಶಿವಸಿಂಪಿಗೆರ, ರೈಲ್ವೆ ಇಲಾಖೆಯ ನಿವೃತ್ತ ಅಭಿಯಂತ ಈರಣ್ಣ ಶಿರೂರ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ, ಇದೇ ಸಂದರ್ಭದಲ್ಲಿ ಮಹಾ ಗಣಪತಿ ಮಹಾಲಕ್ಷ್ಮಿ ಶ್ರೀ ಮಹಾ ಸರಸ್ವತಿ ಹಾಗೂ ಶಿವ ದಾಸಿಮಯ್ಯ ರವರ ಪೂಜಾ ಸಮಾರಂಭದೊಂದಿಗೆ ನೂತನ ಸಹಕಾರಿಯ ಪ್ರಾರಂಭೋತ್ಸವ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಶಿವಸಿಂಪಿ ಸೌಹಾರ್ದ ಸಹಕಾರ ಸಂಘ ನಿಯಮಿತದ ಪದಾಧಿಕಾರಿಗಳು, ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿ ವರ್ಗದವರು ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 