ಸನವಳ್ಳಿ, ಚಿಗಳ್ಳಿ ಜಲಾಶಯಕ್ಕೆ ಬಾಗಿನ ಅರ್ಿಸಿದ ಶಿವರಾಮ್ ಹೆಬ್ಬಾರ್
Shivaram Hebbar seeks permission for Sanavalli, Chigalli reservoirs
ಸನವಳ್ಳಿ, ಚಿಗಳ್ಳಿ ಜಲಾಶಯಕ್ಕೆ ಬಾಗಿನ ಅರ್ಿಸಿದ ಶಿವರಾಮ್ ಹೆಬ್ಬಾರ್
ಮುಂಡಗೋಡ, 04 : ತಾಲ್ಲೂಕಿನ ಸನವಳ್ಳಿ ಜಲಾಶಯ ಹಾಗೂ ಚಿಗಳ್ಳಿ ಜಲಾಶಯಕ್ಕೆ ಶಾಸಕ ಶಿವರಾಮ ಹೆಬ್ಬಾರ ಹಾಗೂ ಮಾಜಿ ಶಾಸಕ ವಿ.ಎಸ್.ಪಾಟೀಲ ಬುಧವಾರ ಸನವಳ್ಳಿ ಹಾಗೂ ಚಿಗಳ್ಳಿ ಜಲಾಶಯಗಳಿಗೆ ಬುಧವಾರ ಗಂಗಾಪೂಜೆ ನೆರವೇರಿಸಿ ಬಾಗಿನ ಸಲ್ಲಿಸಿದ್ದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ ಸನವಳ್ಳಿ ಜಲಾಶಯ ಹಾಗೂ ಚಿಗಳ್ಳಿ ಜಲಾಶಯ ತುಂಬಿರುವುದಕ್ಕೆ ಸಂತಸವಾಗಿದೆ. ಸನವಳ್ಳಿ ಜಲಾಶಯವ ಮುಂಡಗೋಡ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಹಾಗೂ ಸನವಳ್ಳಿ ಭಾಗದ ರೈತರಿಗೆ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ರೈತರು ತಮ್ಮ ಬೆಳೆಗಳಿಗೆ ಈ ನೀರಿನ ಉಪಯೋಗ ಪಡೆದುಕೊಂಡು ಸುಭೀಕ್ಷೆರಾಗುತ್ತಿದ್ದಾರೆ. ನೀರನ್ನು ಪೋಲು ಆಗದಂತೆ, ಮಿತವ್ಯಯವಾಗಿ ಬಳಸುವಂತೆ ನೋಡಿಕೊಳ್ಳುವುದು ಪಟ್ಟಣದ ಸಾರ್ವಜನಿಕರ ಹಾಗೂ ಸನವಳ್ಳಿ ಜಲಾಶಯದ ನೀರನ್ನು ಉಪಯೋಗಿಸುವ ರೈತರ ಜವಬ್ದಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ, ತಾ.ಪಂ ಇಒ ಟಿ.ವಾಯ್.ದಾಸನಕೊಪ್ಪ, ಚಿಕ್ಕನೀರಾವರಿ ಉಪವಿಭಾಗದ ಎಇಇ ರಿಯಾಜಅಹ್ಮದ ದಫೇದಾರ, ಜೆ.ಇ ರಾಮಚಂದ್ರ ನಾಯ್,ಬ್ಲಾಕ್ ಅಧ್ಯಕ್ಷ ಕೃಷ್ಣ ಹಿರಳ್ಳಿ, ಗ್ಯಾರಂಟಿ ಯೋಜನೆ ತಾಲೂಕ ಅಧ್ಯಕ್ಷ ಆರ್. ಆರಿ್ಹರೇಮಠ ಮುಖಂಡರಾದ ಎಚ್.ಎವರ್.ನಾಯಕ್, ರವಿಗೌಡ ಪಾಟೀಲ, ಜ್ಞಾನಶ್ವರ ಗುಡಿಯಾಳ, ಪ.ಪಂ ಅಧ್ಯಕ್ಷೆ ಜಯಸುಧಾ ಭೋವಿ, ಪ.ಪಂ ಸದಸ್ಯರಾದ ಮಹ್ಮದಗೌಸ ಮಕನಾದರ, ಅಹ್ಮದರಜಾ ಪಠಾಣ, ಗುತ್ತಿಗೆದಾರ ಮಲ್ಲಿಕಾರ್ಜುನ ನರೇಗಲ್, ಕೆಂಜೋಡಿ ಗಲಿಬಿ, ವಾಯ್.ಪಿ.ಭುಜಂಗಿ, ಲಕ್ಷಣ ಬನಸೋಡೆ , ಫಕ್ಕಿರಜ್ಞಾ ಬೋಕಿ ಯವರ, ಸುರೇಶ ಕೆರಿಹೊಲದವರ, ಮಂಜುನಾಥ ಕೋಣನಕೇರಿ, ತಿರುಪತಿ ವಡ್ಡರ ಸೇರಿದಂತೆ ಮುಂತಾದ ಚಿಗಳ್ಳಿ ಹಾಗೂ ಸನವಳ್ಳಿ ಗ್ರಾಮದ ಗ್ರಾಮಸ್ಥರು ಹಾಗೂ ಉಪಸ್ಥಿತರಿದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 