ಮದಭಾವಿಯಲ್ಲಿ ಛ.ಶಿವಾಜಿ ಮಹಾರಾಜರ ಪುತ್ಥಳಿ ಶೀಘ್ರ ಅನಾವರಣ: ಬಾಗಡಿ

Shivaji Maharaja's effigy to be unveiled soon at Madabavi: Bagadi

ಮದಭಾವಿಯಲ್ಲಿ ಛ.ಶಿವಾಜಿ ಮಹಾರಾಜರ ಪುತ್ಥಳಿ ಶೀಘ್ರ ಅನಾವರಣ: ಬಾಗಡಿ 

ಸಂಬರಗಿ 24: ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಹಾಗು ಹಾಲಿ ಶಾಸಕ ಲಕ್ಷ್ಮಣ ಸವದಿ ಹಾಗೂ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಇವರ ಮಾರ್ಗದರ್ಶನದಲ್ಲಿ ಮದಭಾವಿ ಗ್ರಾಮದಲ್ಲಿ 11 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಅನಾವರಣ ಮಾಡಲಾಗುವುದು ಮಹಾರಾಷ್ಟ್ರದ ಮಾಜಿ ಗೃಹಮಂತ್ರಿ ಸತೀಶಅ ಭಂಟಿ ಪಾಟೀಲ ಇವರು ಡಾ. ಡಿ. ವಾಯ್ ಪಾಟೀಲ ಟ್ರಸ್ಟ್‌ ಕೊಲ್ಹಾಪೂರ ಇವರಿಂದ ರೂ. 5 ಲಕ್ಷಗಳನ್ನು ಧನ ಸಹಾಯ ನೀಡಲಾಗಿದೆ ಎಂದು ಕಾಂಗ್ರೆಸ ಮುಖಂಡ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು ಹಾಗು ಛತ್ರಪತಿ ಶಿವಾಜಿ ಮಹಾರಾಜ ಮಿತ್ರ ಮಂಡಳಿಯ ಮುಖಂಡ ವಿನಾಯಕ ಬಾಗಡಿ ಹೇಳಿದರು.  ಮದಭಾವಿ ಗ್ರಾಮದಲ್ಲಿ ಸೋಮವಾರ ಶೀವಾಜಿ ಮಹಾರಾಜರ ಫೋಟೋ ಪ್ರತಿಮೆ ಪೂಜಾ ನೆರವೇರಿಸಿ ತಮ್ಮ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಹಲವಾರು ವರ್ಷಗಳಿಂದ ಶಿವಾಜಿ ಮಹಾರಾಜರ ಪುತ್ಥಳಿ ಅವಶ್ಯಕತೆಯಿದ್ದು ಗ್ರಾಮಸ್ಥರ ಬೇಡಿಕೆಯಂತೆ ಪುತ್ಥಳಿ ಅನಾವರಣ ಮಾಡಲಾಗುವುದು ಪುತ್ಥಳಿ ಅನಾವರಣಕ್ಕೆ ಪಕ್ಷಾತೀತವಾಗಿ ಎಲ್ಲಾ ಸಮಾಜದ ಮುಖಂಡರು ಮುಂದಾಗಿದ್ದಾರೆ. ಸಂಸದರು ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಭೇಟಿಯಾಗಿ ಪುತ್ಥಳಿ ಅನಾವರಣಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು ವಿನಂತಿ ಮೂಲಕ ಮನವಿ ಸಲ್ಲಿಸಲಾಗುವುದು. ಮದಭಾವಿ ಗ್ರಾಮ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಯಲ್ಲಿರುವ ಕಾರಣ ಸಾಂಗಲಿ ಸಂಸದ ವಿಶಾಲ ಪಾಟೀಲ ಜತ್ತ ವಿಧಾನಸಭಾ ಕ್ಷೇತ್ರ ಶಾಸಕ ಗೋಪಿಚಂದ ಪಡಳಕರ, ಮಿರಜ ಶಾಸಕ ಸುರೇಶ ಖಾಡೆ ಹಾಗೂ ಮಹಾರಾಷ್ಟ್ರದ ಇನ್ನಿತರ ರಾಜಕೀಯ ನೇತಾರ ಹಾಗು ಸಚಿವರು ಇವರಿಗೆ ಭೇಟಿಯಾಗಿ ಪುತ್ಥಳಿ ನಿರ್ಮಾಣ ಮಾಡಲು ವಿನಂತಿಸಿಕೊಳ್ಳಲಾಗುವುದು. ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಾಂಗಲಿ ಕೊಲ್ಹಾಪೂರ ಸಾತಾರಾ, ಬೆಳಗಾವಿ ಬಾಗಲಕೋಟ ವಿಜಯಪೂರ ಜಿಲ್ಲೆಯಿಂದ ಪಕ್ಷಾತೀತವಾಗಿ ರಾಜಕೀಯ ಮುಖಂಡರ ಧನ ಸಹಾಯ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದರು.ಕನ್ನಡ ಪರ ಹೋರಾಟಗಾರರು ಹಾಗೂ ಕಾಗವಾಡ ಕ್ಷೇತ್ರ ಕಾಂಗ್ರೆಸ ನೇತಾರ ಶಿವಗೌಡ ಕಾಗೆ ಮದಭಾವಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ನಿಜಗುಣಿ ಮಗದುಮ್ಮ ಉಪಾಧ್ಯಕ್ಷ ಅಶೋಕ ಪೂಜಾರಿ, ಅಪ್ಪಸಾಬ ಚೌಗಲಾ, ಪ್ರವೀಣ ಭಂಡಾರೆ, ಸಂಜಯ ಅದಾಟೆ, ಸುಖದೇವ ಬಾಗಡಿ, ಯಶವಂತ ಪಾಟೀಲ, ತಾನಾಜಿ ಶಿಂಧೆ, ಸುರೇಶ ಖುಟ್ಟೆ, ಪೋಪಟ ನಿಕ್ಕಮ, ಬಂಡು ಜಾಧವ, ಸುರೇಶ ಪೂಜಾ, ಉದಯ ಪವಾರ, ಅಶೋಕ ಸೂರ್ಯವಂಶಿ, ದಲಿತ ಸಘರ್ಷ ಸಮಿತಿಯ ಅಧ್ಯಕ್ಷ ಹಣಮಂತ ಕಾಂಬಳೆ ಮಾರುತಿ ಗಾಡಿವಡ್ಡರ, ಪರಶುರಾಮ ರಾಜಮಾನೆ, ಕೇಶವ ಭಂಡಾರೆ, ಪಪ್ಪು ಶಿಂಧೆ, ರಮೇಶ ಕಾಂಬಳೆ, ಪಿಕೆೆಎಸ್ ಸಂಬರಗಿ ಉಪಾಧ್ಯಕ ಅಣ್ಣಪ್ಪಾ ಮಿಸಾಳ, ಸಂಬರಗಿ, ಜಂಬಗಿ, ಅರಳಿಹಟ್ಟಿ, ಬೋಮ್ಮನಾಳ, ಖೀಳೇಗಾವ, ಸಿದ್ದೆವಾಡಿ ಗ್ರಾಮದಿಂದ ಹಾಗೂ ಸೇರಿದಂತ ಪಕ್ಷಾತೀತ ಕಾರ್ಯಕರ್ತರು ಉಪಸ್ಥಿತರಿದ್ದರು. 

 ಫೋಟೋ ಶೀರ್ಷಿಕೆ: 

ಮದಾಭವಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಫೋಟೋ ಪ್ರತಿಮೆ ವಿನಾಯಕ ಬಾಗಡಿ ನಿಜಗುಣಿ ಮಗದುಮ್ಮ ಸಂಜಯ ಅದಾಟೆ ಇವರ ಹಸ್ತದಿಂದ ಪೂಜೆ ನೇರವೇರಿಸಿದರು ಈ ವೇಳೆ ಅಶೋಕ ಪೂಜಾರಿ ಪ್ರವೀಣ ಭಂಡಾರೆ ಇನ್ನಿತರರು (24 ಸಂಬರಗಿ-1)