ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿ ಅಲ್ಲ: ಸಚಿವ ಲಾಡ್
ಮಾಂಜರಿ 18: ಛತ್ರಪತಿ ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ, ಅವರ ಸೇನೆಯಲ್ಲಿ 60 ಸಾವಿರ ಮುಸ್ಲಿಂ ಸೈನಿಕರಿದ್ದರು. 12 ಜಾತಿಗಳನ್ನು ಸೇರಿಸಿ ಸ್ವರಾಜ್ಯ ನಿರ್ಮಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಇಂದಿನ ಯುವಕರು ಛತ್ರಪತಿ ಶಿವಾಜಿ ಮಹಾರಾಜರ ಮತ್ತು ಇನ್ನಿತರ ಹುತಾತ್ಮರ ಇತಿಹಾಸ ಓದಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಅವರು ಸೋಮವಾರರಂದು ಸಾಯಂಕಾಲ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಪ್ರತಿಮೆ ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲೇ ಪ್ರಥಮ ಬಾರಿಗೆ ಮೀಸಲಾತಿ ನೀಡಿದ ಶಾಹು ಮಹಾರಾಜರು. ಸಯಾಜಿರಾವ್ ಗಾಯಕವಾಡ್ ಅವರು ಅಂಬೇಡ್ಕರ್ ಅವರಿಗೆ ಶಿಕ್ಷಣಕ್ಕಾಗಿ ಸಹಾಯ ಮಾಡಿದರು ಮತ್ತು ಅವರು ಸಂವಿಧಾನವನ್ನು ಬರೆದರು.
ಶಿವಾಜಿ ಮಹಾರಾಜರು ತಮ್ಮ ಕಾಲದಲ್ಲಿ ಒಬ್ಬ ಮಹಿಳೆಯನ್ನೂ ಬಂಧಿಸಿಲ್ಲ. ಶಿವಾಜಿ ಮಹಾರಾಜರ ಆದರ್ಶವನ್ನು ಇಂದಿನ ಯುವಕರು ಅನುಸರಿಸಬೇಕಾಗಿದೆ. ಮಹಿಳೆಯನ್ನೂ ಬಂಧಿಸಿಲ್ಲ .ಶಿವಾಜಿ ಮಹಾರಾಜರ ಆದರ್ಶವನ್ನು ಇಂದಿನ ಯುವಕರು ಅನುಸರಿಸಬೇಕಾಗಿದೆ. ಯಾವುದೇ ಪಕ್ಷದಲ್ಲಿ ಇದ್ದರೂ ಮರಾಠ ಸಮುದಾಯದವರು ಸಮುದಾಯಕ್ಕಾಗಿ ಒಂದಾಗಬೇಕು. ಮರಾಠ ಸಮಾಜ ಒಗ್ಗಟ್ಟಾಗಿ ದೇಶದಲ್ಲಿ ಏನಾಗುತ್ತಿದೆ ಎಂಬುದರ ಕುರಿತು ಚಿಂತನೆ ನಡೆಸಬೇಕು. ಶಾಸಕ ಗಣೇಶ ಹುಕ್ಕೇರಿ ಹಾಗೂ ವಿಧಾನಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಶಿವಾಜಿ ಮಹಾರಾಜರ ಪ್ರತಿಮೆಗೆ 25 ಲಕ್ಷ ರೂಪಾಯಿ ನೀಡಿ ಅವರ ಕನಸನ್ನು ನನಸು ಮಾಡಿದ್ದಾರೆ. ಅವರಿಗೆ ಸಮುದಾಯದ ವತಿಯಿಂದ ಧನ್ಯವಾದ ಹೇಳುತ್ತೇನೆ ಎಂದರು.
ದೆಹಲಿ ವಿಶೇಷ ಪ್ರತಿನಿಧಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿ ಈ ಪ್ರತಿಮೆಯನ್ನು ಸ್ಥಾಪಿಸಿದ ಕೀರ್ತಿ ಗಣೇಶ ಹುಕ್ಕೇರಿ ಅವರಿಗೆ ಸಲ್ಲುತ್ತದೆ. ಕೇಂದ್ರೀಯ ವಿದ್ಯಾಲಯ, ಡಿಪ್ಲೊಮಾ ಕಾಲೇಜು, ಬಸ್ ನಿಲ್ದಾಣ ಸೇರಿದಂತೆ ಸದಲಗಾ ಪಟ್ಟಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಬರುವ ವಿಧಾನಸಭಾ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆ ಹಾಗೂ ಸದಲಗಾ ತಾಲೂಕಾಗಬೇಕು ಎಂದು ಮುಖ್ಯಮಂತ್ರಿ ಹಾಗೂ ಸಚಿವ ಲಾಡ್ ಅವರಿಗೆ ಆಗ್ರಹಿಸಿದರು. ಸದಲಗಾದಲ್ಲಿ ಸಮಾಜ ಬಾಂಧವರ ಬೇಡಿಕೆಯಂತೆ ಮರಾಠಾ ಭವನಕ್ಕೆ 2 ಕೋಟಿ ಅನುದಾನ ನೀಡುವ ಭರವಸೆ ನೀಡಿದರು.