ಒನ್ ಅಪ್ ದಿ ಬೇಸ್ಟ ಸ್ಕೂಲ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಖಡಕಲಾಟ ಗ್ರಾಮದ ಶಿವಬಸವ ಶಾಲೆ
Shivabasava School in Khadakalata village, which has been awarded the title of One of the Best Scho
ಮಾಂಜರಿ 10: ಚಿಕ್ಕೋಡಿ ಗಡಿಭಾಗದ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ಖಡಕಲಾಟ ಗ್ರಾಮದ, ಪ್ರತಿಷ್ಠಿತ ಶ್ರೀ ಶಿವಬಸವ ಕನ್ನಡ ಮಾಧ್ಯಮ ಶಾಲೆಯು ಈ ವರ್ಷ ಕರ್ನಾಟಕದ ಒನ್ ಆಪ್ ದಿ ಬೇಸ್ಟ ಸ್ಕೂಲ್ ಅನ್ನೊ ಹೆಗ್ಗಳಿಕೆಯನ್ನು ತನ್ನ ಮಡಿಲಿಗೇರಿಸಿಕೊಂಡಿದೆ. ರಾಜ್ಯದಲ್ಲಿ ಹಲವಾರು ವರ್ಷಗಳಿಂದ ರಾಜ್ಯದ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಸರ್ವೆ ಮಾಡುವ ಕರ್ನಾಟಕದ ಪ್ರತಿಷ್ಠಿತ ಚಿತ್ರದುರ್ಗ ಚಿಂತನ ಪ್ರಕಾಶನ ಸಂಸ್ಥೆಯು, ಈ ವರ್ಷದ ತಮ್ಮ ಗುಣಮಟ್ಟದ ಶಾಲೆಯ ಸರ್ವೆ ಕಾರ್ಯಕ್ರಮದ ಅಂಗವಾಗಿ ನಡೆಸಿದ 8, 9 ಮತ್ತು 10ನೇ ವರ್ಗಗಳ ವಿದ್ಯಾರ್ಥಿಗಳ ಲಿಖಿತ ಪರೀಕ್ಷೆಯಲ್ಲಿ ಖಡಕಲಾಟ ಗ್ರಾಮದ ಶ್ರೀ ಶಿವಬಸವ ಶಾಲೆಯಿಂದ ಭಾಗವಹಿಸಿದ 40 ವಿದ್ಯಾರ್ಥಿಗಳಲ್ಲಿಯ ರಾಜ್ಯಮಟ್ಟದಲ್ಲಿ ಇಬ್ಬರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಮೂವರು ವಿದ್ಯಾರ್ಥಿಗಳು ಹಾಗೂ ಉಳಿದ 35 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಈ ಸಲದ ರಾಜ್ಯದ ಒನ್ ಆಪ್ ದಿ ಬೇಸ್ಟ ಸ್ಕೂಲ್ ಎಂಬ ಪ್ರಶಸ್ತಿ ಪಡೆದುಕೊಂಡಿದೆ. ಇದನ್ನರಿತ ಚಿಂತನಾ ಪ್ರಕಾಶನ ಚಿತ್ರದುರ್ಗರವರು ಸಾಧನೆ ಗೈದ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗೆ ಪ್ರಮಾಣ ಪತ್ರ, ಪುರಸ್ಕಾರ ಪದಕಗಳನ್ನು ನೀಡಿ ಗೌರವಿಸಿದ್ದಾರೆ. ಈ ವಿಷಯವಾಗಿ ಖಡಕಲಾಟ ಭಾಗದ ಪ್ರಜ್ಞಾವಂತ ನಾಗರಿಕರ ಜೊತೆ ರಾಜ್ಯದ ಶಿಕ್ಷಣ ಪ್ರೇಮಿಗಳ ಪ್ರಶಂಸೆಗೆ ಶ್ರೀ ಶಿವಬಸವ ಶಾಲೆ ಪಾತ್ರವಾಗಿದೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 