ಶಿವಶಂಕರ ಸ್ವಾಮೀಜಿಯವರು ಹೃದಯಾಘಾತದಿಂದ ನಿಧನ
Shiva Shankara Swamiji passes away due to heart attack
ರಾಯಬಾಗ, 21 : ತಾಲೂಕಿನ ಬಾವನಸೌಂದತ್ತಿ ಗ್ರಾಮದ ಓಂಕಾರ ಆಶ್ರಮದ ಶಿವಶಂಕರ ಸ್ವಾಮೀಜಿ (63) ಬುಧವಾರ ಬೆಳಗಿನ ಜಾವ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ (63) ನಿಧನರಾದರು.
ಗುರುವಾರ ಬೆಳಿಗ್ಗೆ 8 ಗಂಟೆವರೆಗೆ ಪೂಜ್ಯರ ಅಂತಿಮ ದರ್ಶನಕ್ಕಾಗಿ ಮಹಾದೇವ ಆವರಣದಲ್ಲಿ ಇಡಲಾಗುವುದು. ನಂತರ 8.30 ರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ನಂತರ 10.30 ಕ್ಕೆ ವೀರಶೈವ ಲಿಂಗಾಯತ ವಿಧಿವಿಧಾನದ ಪ್ರಕಾರ ಓಂಕಾರ ಆಶ್ರಮದ ಆವರಣದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಗುವುದು ಎಂದು ಗಾ.್ರಪಂ ಸದಸ್ಯ ಧೂಳಗೌಡ ಪಾಟೀಲ ಹೇಳಿದರು.
ನಂದಿಕುರಳಿಯ ಪಂಚಲಿಂಗೇಶ್ವರ ವೀರಭದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಮಾಜದ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನದ ಬಗ್ಗೆ ನಿರ್ಧರಿಸಲಾಯಿತು.
ಶಂಕರಾನಂದ ಸ್ವಾಮೀಜಿ, ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಕಾಟೆ, ಸತ್ಯಪ್ಪ ಬಿಷ್ಠೆ, ತಾತ್ಯಾಸಾಹೇಬ ಕಾಟೆ, ಅನೀಲ ಹಂಜೆ, ಚಿದಾನಂದ ಮಂಗಸೂಳೆ, ಪ್ರಕಾಶ ಬಿಷ್ಠೆ, ಕಾಕಾಸಾಹೇಬ ತಡಾಕೆ, ಮಾರುತಿ ಚೌಗುಲೆ, ಅಜೀತ ಕಾಮುಗೊಂಡ, ಜಯಕುಮಾರ ಖೆಮಲಾಪುರೆ, ಅಜೀತ ಗೌರಾಜ, ಸತೀಶ ಮಂಗಸೂಳೆ, ಕುಮಾರ ಕುಂಬಾರ, ರಾಜಗೌಡ ಪಾಟೀಲ ಸೇರಿ ಅನೇಕರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 