ಶಿರುಗುಪ್ಪಿ: ಜೈ ಹನುಮಾನ ಕ್ರೆಡಿಟ್ ಸಹಕಾರಿ ನೂತನ ಕಟ್ಟಡ ಉದ್ಘಾಟನೆ
Shiruguppi: Jai Hanumana Credit Cooperative's new building inaugurated
ಕಾಗವಾಡ 28: ಇಂಗಳಿಯ ಜೈ ಹನುಮಾನ ಸಹಕಾರಿಯು, ಶಿರುಗುಪ್ಪಿ ಗ್ರಾಮದಲ್ಲಿ ಶಾಖೆ ಪ್ರಾರಂಭಿಸಿ, ಕೇವಲ ನಾಲ್ಕೇ ವರ್ಷಗಳಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ ಎಂದರೆ ಆಡಳಿತ ಮಂಡಳಿಯ ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮ ಜೊತೆಗೆ ಗ್ರಾಹಕರ ಸಹಕಾರ ಬಹಳಷ್ಟಿದೆ ಎಂಬುದು ಕಂಡು ಬರುತ್ತದೆ ಎಂದು ಅಥಣಿ ಶುಗರ್ಸ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.
ಅವರು, ಶುಕ್ರವಾರ ದಿ. 28 ರಂದು ತಾಲೂಕಿನ ಶಿರುಗುಪ್ಪಿ ಗ್ರಾಮದಲ್ಲಿ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಜೈ ಹನುಮಾನ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಶಿರಗುಪ್ಪಿ ಶಾಖೆಯ ನೂತನ ಕಟ್ಟಡವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ನಾನೇ ಚಿಕ್ಕ ಬಾಡಿಗೆ ಸ್ಥಳದಲ್ಲಿ ಸಹಕಾರಿಯ ಶಾಖೆಯನ್ನು ಉದ್ಘಾಟಿಸಿದ್ದೆ. ಈಗ ಅದು ಸುಸಜ್ಜಿತ ಸ್ವಂತ ಕಟ್ಟಡಕ್ಕೆ ಸ್ಥಳಾಂತರ ಗೊಂಡಿರುವುದರಿಂದ ಇಲ್ಲಿಯ ಗ್ರಾಹಕರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಅನುಕೂಲವಾಗಲಿದೆ. ಇಲ್ಲಿಯ ಸಿಬ್ಬಂದಿ ವರ್ಗದವರು ಇದರ ಲಾಭವನ್ನು ಪಡೆದು ಸಹಕಾರಿಯ ಪ್ರಗತಿಗೆ ಶ್ರಮಿಸಬೇಕು ಎಂದರು.
ಸಾನಿಧ್ಯವನ್ನು ನಂದಿಕುರಳಿಯ ವೀರಭದ್ರ ಮಹಾಸ್ವಾಮಿಗಳು ವಹಿಸಿ, ಆಶೀರ್ವಚನ ನೀಡಿದರು. ಸಹಕಾರಿಯ ನಿರ್ದೇಶಕ ಶಂಕರ ಪವಾರ ವಾಸ್ತವಿಕವಾಗಿ ಮತ್ತು ಹಿರಿಯ ನಿರ್ದೇಶಕ ಶ್ರೀಪತಿ ಜಾಧವ ಮಾತನಾಡಿ, ಸಹಕಾರಿಯ ಪ್ರಗತಿಯ ಕುರಿತು ವಿವರಿಸಿದರು. ಜೊತೆಗೆ ಗಣ್ಯರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಸಹಕಾರಿಗೆ ಶುಭ ಕೋರಿದರು. ಶ್ರೀನಿವಾಸ ಪಾಟೀಲ ಹಾಗೂ ಗಣ್ಯರು ಸೇರಿ, ನೂತನ ಶಾಖೆಯನ್ನು ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದರು. ಅದರಂತೆ ಲಾಕರನ್ನು ಅಭಯಕುಮಾರ ಅಕಿವಾಟೆ, ಗಣಕ ಯಂತ್ರಗಳನ್ನು ಶಿವಾನಂದ ಪಾಟೀಲ ಉದ್ಘಾಟಿಸಿದರು. ಇನ್ನೂ ವೇದಿಕೆಯ ಕಾರ್ಯಕ್ರಮವನ್ನು ಗಣ್ಯರು ಸಸಿಗೆ ನೀರಿರುವುದು ಚಾಲನೆ ನೀಡಿದರು.
ಅತಿಥಿಗಳಾಗಿ ಶಿರಗುಪ್ಪಿ ಗ್ರಾ.ಪಂ. ಉಪಾಧ್ಯಕ್ಷ ರಾಮಗೌಡ ಪಾಟೀಲ, ಡಿ.ಕೆ.ಎಸ್.ಎಸ್. ಕಾರ್ಖಾನೆಯ ನಿರ್ದೇಶಕ ಮಹಾವೀರ ಕಾತ್ರಾಳೆ, ಲಾಲ್ ಬಹದ್ದೂರ್ ಸಹಕಾರಿಯ ಅಧ್ಯಕ್ಷ ಭಮ್ಮಣ್ಣ ಚೌಗುಲೆ, ಮುಖಂಡರಾದ ಅಭಯಕುಮಾರ ಅಕಿವಾಟೆ, ಶಿವಾನಂದ ಪಾಟೀಲ, ಸುರೇಶ ಚೌಗುಲೆ, ಸಾತಗೌಡ ಪಾಟೀಲ, ಸುಭಾಷ ಪಾಟೀಲ, ಭೀಮು ಅಕಿವಾಟೆ, ಸಹಕಾರಿಯ ಅಧ್ಯಕ್ಷ ಅಪ್ಪಾಸಾಹೇಬ ಜತ್ರಾಟೆ, ಉಪಾಧ್ಯಕ್ಷ ಅರುಣ ಪಾಟೋಳೆ, ಶಿರಗುಪ್ಪಿ ಶಾಖೆಯ ಅಧ್ಯಕ್ಷ ಪ್ರಕಾಶ ಜಾದವ, ಉಪಾಧ್ಯಕ್ಷ ದಾದಗೌಡ ಪಾಟೀಲ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಜಿ.ಬಿ. ಪಾಟೀಲ ಸೇರಿದಂತೆ ಪ್ರಧಾನ ಶಾಖೆ ಹಾಗೂ ಹೊಸ ಇಂಗಳಿ, ಶಿರುಗುಪ್ಪಿ ಮತ್ತು ಅಥಣಿ ಶಾಖೆಯ ಎಲ್ಲ ನಿರ್ದೇಶಕರು, ಸಿಬ್ಬಂದಿ ವರ್ಗದವರು ಹಾಗೂ ಸಹಕಾರಿಯ ಹಿತೈಷಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಬಾಹುಸಾಬ ಕಾಗವಾಡೆ ಸ್ವಾಗತಿಸಿದರು. ವೈಭವ ಪಾಟೀಲ ನಿರೂಪಿಸಿದರು. ಶಿವಾಜಿ ಶಿಂಧೆ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 