ಶಿರಹಟ್ಟಿ : ಮತದಾನ ಜಾಗೃತಿ ಕಾರ್ಯಕ್ರಮಗಳು ಅಗತ್ಯ: ಪ್ರಕಾಶ

ಲೋಕದರ್ಶನ ವರದಿ

ಶಿರಹಟ್ಟಿ 19: ಜಿಲ್ಲೆಯ ಎಲ್ಲ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಜಾಪ್ರಭುತ್ವದ ಯಶಸ್ಸನ್ನು ಸಾಧಿಸಲು ಕೈ ಜೋಡಿಸಬೇಕು. ನಮ್ಮ ನಾಯಕರ ಆಯ್ಕೆ-ನಮ್ಮ ಹಕ್ಕು, ಸುಭದ್ರ ಮತ್ತು ಸದೃಢ ದೇಶ ನಿರ್ಮಾಣದಲ್ಲಿ ಚುನಾವಣೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ಆದ್ದರಿಂದ 18ವರ್ಷ ಮೇಲ್ಪಟ್ಟ ಎಲ್ಲರೂ ಮತದಾನದ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಪರಿವರ್ತನಾ ಅರ್ಬನ್ರೂರಲ್ ಡೆವೆಲಪ್ಮೆಂಟ್ ಅಂಡ್ ಮಲ್ಟಿ ಸ್ಕಿಲ್ಸ್ ಟ್ರೇನಿಂಗ್ ಸೆಂಟರ್ ಮುಖ್ಯಸ್ಥ ಪ್ರಕಾಶ ಮೇಟಿ ಹೇಳಿದರು. 

ಅವರು ತಾಲೂಕಿನ ಬೆಳ್ಳಟ್ಟಿ ಪರಿವರ್ತನಾ ಕೌಶಲ್ಯಾಭಿವೃದ್ಧಿ ತರಬೇತಿ ಸಂಸ್ಥೆಯ ಕಂಪ್ಯೂಟರ್ ಹಾಗೂ ಎಸ್ಎಂಓ ಹೊಲಿಗೆ ತರಬೇತಿಯ ಕಲಿಕಾತರ್ಿಗಳಿಗೆ ಮತದಾನದ ಪ್ರಕ್ರಿಯೆ, ಮಹತ್ವಗಳ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಮತಗಟ್ಟೆಗೆ ತೆರಳುವ ಮೊದಲು ತಮ್ಮ ಹೆಸರು ಮತದಾರರ ಯಾದಿಯಲ್ಲಿ ಸೇರ್ಪಡೆಯಾಗಿದೆಯೇ ಎಂಬ ಬಗ್ಗೆ ಎಸ್ಎಂಎಸ್ ಅಥವಾ ಆನ್ಲೈನ್ ಮೂಲಕ ಖಚಿತಪಡಿಸಿಕೊಳ್ಳಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳೆಯರ ಮತದಾನದ ಪ್ರಮಾಣ ಕಡಿಮೆಯಾಗಿದೆ. ಇದನ್ನು ಹೋಗಲಾಡಿಸುವುದಕ್ಕೆ ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಶಶಿಧರ ಶಿರಸಂಗಿ, ಕಾರ್ಯದಶರ್ಿ ಪ್ರದೀಪ ಗೊಡಚಪ್ಪನವರ, ಹಿರಿಯರಾದ ಬಸವರಾಜ ಗಡ್ಡಿ, ಸುನಂದಾ ಗಡ್ಡಿ, ಜಯಶ್ರೀ ಕಮ್ಮಾರ, ಸೌಮ್ಯಾ ಕೋಟಿ, ದೇವಪ್ಪ ಬಾಲೋಜಿ, ಸಿದ್ದಪ್ಪ ಹೂಗಾರ ಹಾಗೂ ಸಂಸ್ಥೆಯ ಅನೇಕ ಶಿಬಿರಾರ್ಥಿ ಗಳು ಪಾಲ್ಗೊಂಡಿದ್ದರು.