ಶಿರಹಟ್ಟಿ : ಮತದಾನದ ಜಾಗೃತಿಗಾಗಿ ರಂಗೋಲಿ ಸ್ಪರ್ಧೆಗಳು ಅಗತ್ಯ: ಅರ್ಕಸಾಲಿ

ಲೋಕದರ್ಶನ ವರದಿ

ಶಿರಹಟ್ಟಿ ೦೪: ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ರಂಗೋಲಿ ಸ್ಪರ್ಧೆ  ಏರ್ಪಡಿಸುವುದರ ಮೂಲಕ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಬಸವರಾಜ ಅರ್ಕಸಾಲಿ ಮಾತನಾಡಿ, ಸಂವಿಧಾನದತ್ತವಾಗಿ ದೊರೆತಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬರೂ ತಪ್ಪದೇ ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಮತ್ತು ಇದೇ ಎಪ್ರೀಲ್ 23 ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಶೇ. 100ರಷ್ಟು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಒಬ್ಬ ಉತ್ತಮ ನಾಯಕನನ್ನು ಆಯ್ಕೆಮಾಡುವುದುರ ಮೂಲಕ ಸದೃಢ ದೇಶ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಅಮರಪ್ಪ ದೊಡ್ಡಮನಿ, ಶಾಹೀರಾ ಬೇಗಂ ಹಳೇಮನಿ, ದೇವಮ್ಮ ನಿವರ್ಾಣಿ, ಲಕ್ಷ್ಮೀ ಕಮ್ಮಾರ, ರೇಣುಕಾ ಕೆಂಚಕ್ಕನವರ, ಕೆ ಆರ್ ಕುಲಕರ್ಣಿ , ರೇಖಾ ಮಠಪತಿ, ಲಕ್ಷ್ಮೀ ದೊಡ್ಡಮನಿ, ಸಾವಿತ್ರಿ ಬೀರಣ್ಣವರ, ಸುವರ್ಣ ಶಿರಬಡಗಿ, ಶಾಂತವ್ವ ಯಲಿಗಾರ, ಜಯಶ್ರೀ ಮಠಪತಿ ಇನ್ನೂ ಹಲವಾರು ಕಾರ್ಯಕರ್ತೆಯರಿಗೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.