ಶಿರಹಟ್ಟಿ: ಸರ್ಕಾರಿ ಶಾಲೆಗಿಲ್ಲವೇ ಬಯಲು ಬಹಿರ್ದಸೆ ಮುಕ್ತ ರಾಷ್ಟ್ರ ಭಾಗ್ಯ..!

ಶಶಿಧರ ಶಿರಸಂಗಿ

ಶಿರಹಟ್ಟಿ 03: ನಮ್ಮ ದೇಶದ ಪ್ರಧಾನಿಯ ಬಹು ದೊಡ್ಡ ಕನಸು ಭಾರತ ದೇಶವು ಸಂಪೂರ್ಣ ಬಹಿದರ್ೆಸೆ ಮುಕ್ತವಾಗಬೇಕು, ಪ್ರತಿಯೊಬ್ಬ ಪ್ರಜೆಯೂ ಸಹ ಬಯಲು ಬಹಿದರ್ೆಸೆ ನಿಲ್ಲಿಸಬೇಕು, ಪ್ರತೀ ಒಂದು ಕುಟುಂಬಕ್ಕೆ (ಇಜ್ಜತ್ ಘರ್) ಮರ್ಯಾದೆ  ಮನೆ ಎಂಬ ಹೆಸರಿನ ಮೇಲೆ ಶೌಚಾಲಯ ನಿರ್ಮಿಸಿ  ಶೌಚಾಲಯವನ್ನು ಕಡ್ಡಾಯವಾಗಿ ಉಪಯೋಗಿಸಬೇಕೆಂದು ನಿಯಮವನ್ನು ತಂದಿದ್ದಾರೆ. 

ಅದೇ ರೀತಿ ಗದಗ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯಾಗಿಸುವಲ್ಲಿ ಪ್ರತೀಯೊಬ್ಬರೂ ಶ್ರಮಿಸಿ ಜಿಲ್ಲೆಗೆ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಪ್ರಶಸ್ತಿಯನ್ನು ಏನೋ ತಂದಿದ್ದಾರೆ ನಿಜ ಆದರೆ ಶಿರಹಟ್ಟಿ ತಾಲೂಕು ಇದಕ್ಕೆ ಅಪವಾದ ಎನ್ನುವಂತೆ ಶಿಕ್ಷಣ ಇಲಾಖೆಯ ಶಾಲಾ ಹಾಗೂ ಕಾಲೇಜುಗಳಲ್ಲಿ ಮೂತ್ರ ಹಾಗೂ ಬಹಿದರ್ೆಸೆಗೆ ಹೋಗಲು ವಿದ್ಯಾಥರ್ಿಗಳು ಹಿಂದೇಟು ಹಾಕುತ್ತಿದ್ದಾರೆ.

ರಾಷ್ಟ್ರ ನಿರ್ಮಾಣದಲ್ಲಿ  ಶಿಕ್ಷಣ ಇಲಾಖೆಯ ಪಾತ್ರ ಅತೀ ಮುಖ್ಯವಾಗಿದ್ದು, ಶಿಕ್ಷಣವು ಪ್ರತೀ ಒಬ್ಬ ಮಗುವಿಗೂ ದೊರಕಬೇಕು, ಅದೇ ರೀತಿ ಪ್ರತೀ ಮಗುವಿಗೂ ಕಾನೂನು ಪ್ರಕಾರ ಮೂಲಭೂತ ಸೌಕರ್ಯಗಳು ಶಾಲಾ ಹಂತದಲ್ಲಿ ಸಿಗುವಂತಿರಬೇಕು. ಉದಾಹರಣೆಗೆ ಗುಣಮಟ್ಟದ ಶಿಕ್ಷಣ, ಶುದ್ಧ ಕುಡಿಯುವ ನೀರು, ಉತ್ತಮ ಗಾಳಿ ಬೆಳಕು, ಮುಖ್ಯವಾಗಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ತಕ್ಕಂತೆ ಉತ್ತಮ ಶೌಚಾಲಯಗಳ ವ್ಯವಸ್ಥೆಗಳಿರಬೇಕು.

ಈ ಶೌಚಾಲಯ ವ್ಯವಸ್ಥೆಗಳನ್ನು ನೋಡಲಾಗಿ, ಸಕರ್ಾರಿ ಸ್ವಾಮ್ಯಗಳಲ್ಲಿರುವ ಶಾಲೆಗಳತ್ತ ತಿರುಗಿ ನೋಡಿದಾಗ ಹೆಚ್ಚಾಗಿ ಶೌಚಾಲಯಗಳು ಮೂಲಭೂತ ಸೌಕರ್ಯಗಳಿಲ್ಲದೇ ಎಲ್ಲವೂ ಶೋಚನಿಯ ಸ್ಥಿತಿಯಲ್ಲಿದ್ದು ನೋಡಲಿಕ್ಕೆ ಮಾತ್ರ ಶೌಚಾಲಯಗಳಿವೆ. ಇವುಗಳ ಸಮರ್ಪಕ ನಿರ್ವಹಣೆಗಳಿಲ್ಲದೇ ಸ್ವಚ್ಚತೆ ಹಾಗೂ ನೀರಿನ ವ್ಯವಸ್ಥೆಯಿಂದ ದೂರ ಬಲುದೂರ ಉಳಿದಿವೆ. ಮಕ್ಕಳ ಸಂಖ್ಯೆಗೆ ಅನುಸಾರವಾಗಿ ಶೌಚಾಲಯಗಳು ಹಾಗೂ ಮುತ್ರಾಲಯಗಳನ್ನು ನಿಮರ್ಿಸಲಾಗಿಲ್ಲ.

ಪ್ರತೀ ಶಾಲೆಗಳಲ್ಲಿರುವ ಶೌಚಾಲಯಕ್ಕೆ ಪ್ರವೇಶಿಸಬೇಕೆಂದರೆ ಮೂಗು ಮುಚ್ಚಿಕೊಂಡು ಹೋಗುವಂತ ಪರಿಸ್ಥಿತಿ ನಿಮರ್ಾಣವಾಗಿದ್ದು ಅಷ್ಟೇ ಅಲ್ಲದೇ, ಶೌಚಾಲಯಗಳು ಗಬ್ಬು ನಾರುತ್ತಿದ್ದು, ಇಲ್ಲಿ ನಲ್ಲಿಗಳಲ್ಲಿ ನೀರಿನ ಸೌಕರ್ಯವಿಲ್ಲದೇ ಇರುವುದು ದುರಂತ ಹೀಗೆ ಶೌಚಾಲಯಗಳು ಮುಂದುವರೆದರೆ ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುತ್ತಿದ್ದು ಶಿಕ್ಷಣ ಇಲಾಖೆ ಇದಕ್ಕೆ ನೇರ ಹೋಣೆ ಎಂದು ವಿದ್ಯಾಥರ್ಿಗಳ ಪಾಲಕರು ಆರೋಪಿಸುತ್ತಿದ್ದಾರೆ.

ಶಾಲಾ ಶೌಚಾಲಯಗಳು ಇತರರಿಗೆ ಮಾದರಿಯಾಗಿರಬೇಕು: ಶಾಲೆ ಹಾಗೂ ಶಾಲಾ ವ್ಯವಸ್ಥೆ ಮಕ್ಕಳಲ್ಲಿ ದಾರ್ಶನಿಕ ಮಾದರಿಯನ್ನು ನಿಮರ್ಿಸುವಂತಿರಬೇಕು. ಶಾಲೆಗೆ ಬರುವ ಪ್ರತಿ ಮಗುವು ಶಾಲಾ ಆವರಣದಲ್ಲಿರುವ ಶೌಚಾಲಯವನ್ನು ಬಳಸಿದಾಗ ಆ ಮಗುವಿಗೆ ತಕ್ಷಣದಲ್ಲಿ ತಮ್ಮ ಮನೆಯಲ್ಲಿ ಇರುವ ಶೌಚಾಲಯ ಹೀಗಿದ್ದರೆ ಚನ್ನ ಎಂದೆನಿಸಬೇಕು ಮತ್ತು ಮನೆಯಲ್ಲಿ ಶೌಚಾಲಯವಿಲ್ಲದ ಮಕ್ಕಳು ಮನೆಯಲ್ಲಿ ಹೊಸದಾಗು ಶೌಚಾಲಯವನ್ನು ನಿಮರ್ಿಸುವಂತೆ ಪಾಲಕರನ್ನು ವತ್ತಾಯಿಸುವಂತಾಗಬೇಕು. ಅದರಲ್ಲಿದೆ ಶೌಚಾಲಯ ವ್ಯವಸ್ಥೆಯ ಸಾರ್ಥಕತೆ ಹಾಗೂ ಪ್ರಧಾನಿ ಕಂಡ ಕನಸು ಬಹಿದರ್ೆಸೆ ಮುಕ್ತ ಭಾರತದ ಕನಸು ನನಸಾಗಲು ಸಾಧ್ಯ.  ಆದರೆ ಶಾಲಾ ಆವರಣದಲ್ಲಿಯ ಶೌಚಾಲಯಗಳ ನಿಮರ್ಾಣ ಕಾಟಾಚಾರದ ಕಾರ್ಯಕ್ರಮಗಳಾಗಿರುವುದು ದುದರ್ೈವದ ಸಂಗತಿಯಾಗಿದ್ದು ನೋಡಿದರೆ ಈ ಸಕರ್ಾರಿ ಶಾಲೆಗಳಿಗೇಕಿಲ್ಲ ಬಹಿದರ್ೆಸೆ ಮುಕ್ತ ರಾಷ್ಟ್ರದದ ಭಾಗ್ಯ? ಯಾವಾಗ ಸಿಗುವುದು ಈ ಮಕ್ಕಳಿಗೆ ಮೂಲಭೂತ ಸೌಕರ್ಯಗಳು? ಯಾವಾಗ ಸಿಗುವುದು ಮಯರ್ಾದಾ ಮನೆಯ ಭಾಗ್ಯ? ಬರೀ ಸಕರ್ಾರಿ ಶಾಲೆಗಳಲ್ಲಿನ ಕಾಮಗಾರಿಗಳು ಕಾಟಾಚಾರಕ್ಕಾಗಿಯೇ ನಡೆಯುತ್ತಿವೆಯೇ? ಹಾಗಾದರೆ ಏನು ಮಾಡುತ್ತಿವೆ ಶಾಲಾ ಸುಧಾರಣಾ ಕಮೀಟಿ? ಇದನ್ನು ಪ್ರಶ್ನಿಸುವುದು ಹಾಗೂ ಮಕ್ಕಳು ತಮ್ಮ ಈ ಎಲ್ಲ ಸಮಸ್ಯೆಗಳನ್ನು ಹೇಳಿಕೊಳ್ಳುವುದು ಯಾರ ಹತ್ತಿರ? ಮಕ್ಕಳಿಗೆ ಬಹಿದರ್ೆಸೆಯೇ ಮುಕ್ತಿನಾ? ಎಂಬ ನೂರಾರು ಪ್ರಶ್ನೆಗಳು ಮಕ್ಕಳನ್ನು ನಿರಂತರ ಕಾಡುತ್ತಿವೆ. ಇವಕ್ಕೆಲ್ಲ ಮುಕ್ತಿ ಯಾವಾಗ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.  

ಪಟ್ಟಣದಲ್ಲಿನ ಶಾಲೆಗಳ ಶೌಚಾಲಯಗಳ ಸ್ಥಿತಿ: ಪಟ್ಟಣದಲ್ಲಿನ ಬಹುತೇಕ ಸರಕಾರಿ ಶಾಲೆಗಳ ಶೌಚಾಲಯ ಹಾಗೂ ಮೂತ್ರಾಲಯಗಳ ಸ್ಥಿತಿ ಶೋಚನೀಯವಾಗಿದೆ. ಪಟ್ಟಣದ ಮ್ಯಾಗೇರಿ ಪ್ರಾಥಮಿಕ ಶಾಲೆಯಲ್ಲಿನ ಶೌಚಾಲಯಕ್ಕೆ ಸರಕಾರದಿಂದ ಯಾವುದೇ ರೀತಿಯ ಅನುದಾನ ಬಂದಿಲ್ಲ ಅಲ್ಲಿಯ ಶಿಕ್ಷಕರೇ ಶಾಲಾ ಸಮಿತಿಯ ಹಣದಿಂದ ಶೌಚಾಲಯ ನಿಮರ್ಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬುವದು ಸಾರ್ವಜನಿಕರ ಹೇಳಿಕೆಯಾಗಿದೆ. ಇನ್ನೂ ಪಟ್ಟಣದ ಸರಕಾರಿ ಮಾದರಿ ಗಂಡು ಮಕ್ಕಳ ಶಾಲೆಯಲ್ಲಿ ಒಂದೇ ಶೌಚಾಲಯವಿದ್ದು ಮಕ್ಕಳು ಮಲ-ಮೂತ್ರಕ್ಕಾಗಿ ಬಯಲಿಗೆ ಹೋಗಿ ಎಂದು ಶಿಕ್ಷಣ ಇಲಾಖೆಯವರೇ ಹೇಳುವ ಪರಿಸ್ಥಿತಿ ನಿಮರ್ಾಣವಾಗಿದೆ. ಇದಕ್ಕೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಪ್ರತಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಶೌಚಾಲಯಗಳ ದು:ಸ್ಥಿತಿಯನ್ನು ನೋಡಿ ಅವುಗಳ ದುರಸ್ತಿ ಹಾಗೂ ಸ್ವಚ್ಚತೆಯ ಕುರಿತು ವಿಶೇಷ ಕಾಳಜಿ ವಯಿಸಬೇಕು ಎಂಬುದು ಸಾರ್ವಜನಿಕರ ಹಾಗೂ ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳ ಪಾಲಕರ ಆಶಯವಾಗಿದೆ.

ಮುತ್ತುರಾಜ ಭಾವಿಮನಿ, ರಾಜ್ಯಾಧ್ಯಕ್ಷ, ಮಾಜಜ ವೇದಿಕೆ ಮೇ 1 ರಂದು ಶಾಲೆಗಳು ಪ್ರಾರಂಭವಾಗಿವೆ. ಇದಕ್ಕೂ ಮೊದಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಲ್ಲ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ ಎಲ್ಲ ರೀತಿಯ ಲೋಪದೋಷಗಳನ್ನು ಸರಿಪಡಿಸಿ ಮಕ್ಕಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆಗಳನ್ನು ಮಾಡಿಸುವಲ್ಲಿ ಮುಂದಾಗಬೇಕಿತ್ತು, ಆದರೂ ಈವರೆಗೆ ಮೂಲಭೂತ ಸೌಕರ್ಯಗಳಿಲ್ಲದ ಶಾಲೆಗಳಿಗೆ ಅಧಿಕಾರಿಗಳು ತುರ್ತಾಗಿ  ಭೇಟಿ ನೀಡಿ ಅಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಮಕ್ಕಳಿಗಾಗುತ್ತಿರುವ ಸಮಸ್ಯೆಗಳನ್ನು ಬಗೆ ಹರಿಸಬೇಕು.