ಶಿರಹಟ್ಟಿ : ಶಿವಶರಣೆಯರಲ್ಲಿ ಅಗ್ರಮಾನ್ಯಳಾಗಿದ್ದಾಳೆ ಅಕ್ಕಮಹಾದೇವಿ: ಪ.ಪೂ ಮಹಾವಿದ್ಯಾಲಯದ ಉಪನ್ಯಾಸಕಿ ಹುಚ್ಚಣ್ಣವರ

ಲೋದರ್ಶನ ವರದಿ

ಶಿರಹಟ್ಟಿ ೨೦: ಹಸಿವೇ ನಿಲ್ಲು ನಿಲ್ಲು, ತೃಷೆಯೇ ನಿಲ್ಲು ನಿಲ್ಲು, ನಿದ್ರೆಯೇ ನಿಲ್ಲು ನಿಲ್ಲು, ಕಾಮವೇ ನಿಲ್ಲು ನಿಲ್ಲು, ಮತ್ಸರವೇ ನಿಲ್ಲು ನಿಲ್ಲು, ಸಕಲಚರಾಚರವೇ ನಿಲ್ಲು ನಿಲ್ಲು ಎಂದು ಹೇಳುತ್ತಾ ಕೌಶಿಕ ರಾಜನ ಅಷ್ಟೈಶ್ರ್ವರ್ಯಗಳನ್ನು ತಿರಸ್ಕರಿಸಿ ದಿಗಂಬರೆಯಾಗಿ ಸಾಧನೆಯಿಂದ ಅಕ್ಕಮಹಾದೇವಿ 900 ವರ್ಷಗಳ ಹಿಂದೆ ಆಗಿಹೋದ ಶಿವಶರಣೆಯರಲ್ಲಿ ಅಗ್ರಮಾನ್ಯ ಶಿವಶರಣೆಯಾಗಿದ್ದಾಳೆಂದು ಶಿರಹಟ್ಟಿಯ ಎಫ್.ಎಂ ಡಬಾಲಿ ಪ.ಪೂ ಮಹಾವಿದ್ಯಾಲಯದ ಉಪನ್ಯಾಸಕಿ ಪ್ರೋ. ಸುಧಾ ಹುಚ್ಚಣ್ಣವರ ನುಡಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಶಿರಹಟ್ಟಿ ಹಾಗೂ ಕದಳಿ ಮಹಿಳಾ ವೇದಿಕೆ ತಾಲೂಕ ಘಟಕ ಶಿರಹಟ್ಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿ. ಬಿ ಚನ್ನವೀರಶೆಟ್ಟರ ಅವರ ಮಹಾಮನೆಯಲ್ಲಿ ಆಯೋಜಿಸಿದ ಶರಣ ಪೌಣರ್ಿಮೆ-44 ಹಾಗೂ ಶಿವಶರಣೆ ಅಕ್ಕಮಹಾದೇವಿ ಜಯಂತಿ ಸಮಾರಂಭಗಳ ಅಂಗವಾಗಿ ಶಿರಹಟ್ಟಿ ತಾಲೂಕಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ವಿಮಲಕ್ಕ ಕಪ್ಪತ್ತನವರ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೀರ ವಿರಾಗಿಣಿ ಅಕ್ಕಮಹಾದೇವಿ ಅವರ ಜೀವನ ಹಾಗೂ ಸಂದೇಶ ಎಂಬ ವಿಷಯದ ಮೇಲೆ ಅವರು ಉಪನ್ಯಾಸವನ್ನು ನೀಡಿದರು.

ಅಕ್ಕಮಹಾದೇವಿ ತನ್ನ ಇಪ್ಪತ್ತನೇ ವಯಸ್ಸಿನಲ್ಲಿಯೇ ವಿರಾಗಿಣಿಯಾಗಿ ಮನೆತೊರೆದು ಸಮಾಜದ ಕಲ್ಯಾಣಕ್ಕಾಗಿ ತನ್ನ ಪ್ರತಿಭೆಯಿಂದ ಅನೇಕ ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯದಲ್ಲಿ ಅಗ್ರಮಾನ್ಯ ವಚನಗಾತರ್ಿಯಾಗಿದ್ದಾಳೆ ಎಂದು ನುಡಿದರು.

 ಫಕ್ಕಿರೇಶ ಅಕ್ಕಿ ಅಕ್ಕಮಹಾದೇವಿ ಜೀವನ ಚರಿತ್ರೆಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆ.ಎ ಬಳಿಗಾರ್ ನೆರವೇರಿಸಿದರು.

ನಂತರ ವಿಮಲಕ್ಕ ಕಪ್ಪತ್ತನವರ ಮಾತನಾಡಿ, ಅಕ್ಕಮಹಾದೇವಿಯ ದೇವಸ್ಥಾನದ ಜೀಣರ್ೋದ್ಧಾರದ ಪ್ರಯತ್ನ ನಡೆದಿದೆ, ಅದಕ್ಕೆ ಎಲ್ಲರ ಸಹಾಯ ಸಹಕಾರದ ಅವಶ್ಯಕತೆ ಇದೆ ಎಂದು ಹೇಳಿದರು.

ಭಾನುಮತಿ ಚನ್ನವೀರಶೆಟ್ಟರ, ವಿನಾಯಕ ಹಣಗಿ, ನಂದಾ ಕಪ್ಪತ್ತನವರ, ಸರೋಜಾ ಕಟ್ಟೀಮನಿ, ಶಾಂತಾ ಪಾಟೀಲ, ಬಿಎಸ್ ಹಿರೇಮಠ, ಬಸವರಾಜ ಬೋರಶೆಟ್ಟರ, ಎಚ್ಎಂ ದೇವಗಿರಿ, ಜಿಬಿ ಚನ್ನವೀರಶೆಟ್ಟರ, ಹಾಲಪ್ಪ ಬೀಡನಾಳ, ನೀಲಮ್ಮ ನಾಶರ್ಿ, ರೇಣುಕಾ ಕಪ್ಪತ್ತನವರ, ಶಾರವ್ವ ಸಂಕದಾಳ, ಸುನಿತಾ ಪಾಟೀಲ, ಶೇಖವ್ವ ಮುಧೋಳ, ಗೌರವ್ವ ದಂಡಣ್ಣವರ, ಸುಧಾ ಜಿಗನಳ್ಳಿ, ಜ್ಯೋತಿ ಗುಡಿ, ವಿನಾಯಕ ವಡಕಣ್ಣವರ, ಕಾತರ್ಿಕ ಜಿಗನಳ್ಳಿ ಹಾಗೂ ಇನ್ನೂ ಅನೇಕ ಶರಣರು ಭಾಗವಹಿಸಿದ್ದರು.