ಲೋಕದರ್ಶನ ವರದಿ
ಶಿರಹಟ್ಟಿ 31: ಪಟ್ಟಣದ ಹೃದಯ ಭಾಗದಲ್ಲಿರುವ ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿ ವಾಯ್.ಎಚ್.ನದಾಫ್ ಸರಕಾರ ಮಕ್ಕಳ ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಅವುಗಳೆಲ್ಲದರ ಲಾಭವನ್ನು ಪಡೆದು ಮಕ್ಕಳು ವಿದ್ಯಾವಂತರಾಗಿ ದೇಶದ ಆಸ್ತಿಯಾಗಬೇಕು ಎಂದು ಹೇಳಿದರು.
ನಂತರ ಎಸ್.ಡಿ.ಎಮ್.ಸಿ ಅಧ್ಯಕ್ಷ ಗುಡದಯ್ಯ ನೀಲಣ್ಣನವರ ಹಾಗೂ ಈರಣ್ಣ ಕೋಟಿ ಮಾತನಾಡಿ ಇಂದಿನ ದುಬಾರಿ ಕಾಲದಲ್ಲಿ ಮಕ್ಕಳಿಗೆ ಪಾಲಕರು ಪಠ್ಯ ಪುಸ್ತಕಗಳನ್ನು ಖರೀದಿಸಲಾಗದೆ ಮಕ್ಕಳು ವಿದ್ಯಾರ್ಜನೆಯಿಂದ ವಂಚಿತರಾಗ ಬಾರದು ಎಂಬ ಮಹತ್ತರ ಉದ್ದೇಶದಿಂದ ಇಂದು ಸರಕಾರ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕ, ಶಾಲಾ ಸಮವಸ್ತ್ರ ಹೀಗೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಕಾರಣ ಮಕ್ಕಳು ಇವುಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾವಂತರಾಗಿ ಶಾಲೆಗೂ ಹಾಗೂ ದೇಶಕ್ಕೂ ಕೀತರ್ಿಯನ್ನು ತರಬೇಕು ಎಂದು ಹೇಳಿದರು.
ಬಿಆರ್ಪಿ ಎನ್.ಎಸ್.ಬಂಕಾಪೂರ, ಸಿಆರ್ಪಿ ಎಚ್.ಎನ್.ಪಾಟೀಲ್, ಶಾಲೆಯ ಪಾಲಕರ ಪ್ರತಿನಿಧಿ ವಿರಣ್ಣ ಕೋರಿ, ಎಚ್.ಬಿ.ಸಣ್ಣಮನಿ, ಎಸ್.ಎಸ್.ಕುಬೇರ, ಗೀತಾ ಸರವಿ, ವೀಣಾ ಗುಡಿ, ವೆಂಕಟೇಶ ಪಾಟೀಲ ಹಾಗೂ ಸಹ ಶಿಕ್ಷಕಿಯರು ಮತ್ತು ಶಾಲಾ ವಿದ್ಯಾಥರ್ಿನಿಯರು ಪಾಲ್ಗೊಂಡಿದ್ದರು.