ಶಶಿಧರ ಶಿರಸಂಗಿ
ಶಿರಹಟ್ಟಿ 12: ತಾಲೂಕಿನ ಮಾಗಡಿ ಕ್ರಾಸ್ನಿಂದ ಕೇವಲ 5 ಕಿಮೀ ದೂರದಲ್ಲಿರುವ ಯಳವತ್ತಿಯ ಜಾಗೃತದೇವಿ ಶ್ರೀ ಉಡಚಮ್ಮದೇವಿಯ ಮಹಾ ಪಲ್ಲಕ್ಕಿ ಉತ್ಸವ ಕಾರ್ಯಕ್ರಮವು ಇದೇ ಮೇ. 14ರಂದು ಬೆಳಿಗ್ಗೆ ಜರುಗಲಿದೆ.
ರಾಜ್ಯದ ಇತಿಹಾಸ ಪುಟಗಳನ್ನು ತೆರೆದು ನೋಡಿದಾಗ ತನ್ನದೇ ಆದ ಒಂದು ಭವ್ಯ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿರುವಂತಹ ಗ್ರಾಮವೆಂದರೆ ಅದುವೆ ಯಳವತ್ತಿ ಗ್ರಾಮ. ಈ ಗ್ರಾಮ ತಾಲೂಕಿನಲ್ಲಿಯೇ 3ನೇ ದೊಡ್ಡ ಗ್ರಾಮವೆಂದು ಹೆಸರು ವಾಸಿಯಾಗಿದೆ. ಇಲ್ಲಿನ ಅನೇಕ ಮಹತ್ವದ ಇತಿಹಾಸಗಳು ಬೆಳಕಿಗೆ ಬಾರದೇ ಕಾಲಗರ್ಭದಲ್ಲಿ ಹೂತು ಹೋಗಿವೆ. ಅದರಂತೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದ ಶ್ರೀ ಉಡಚಮ್ಮದೇವಿಯ ದೇವಸ್ಥಾನವೂ ಸಹ ಒಂದಾಗಿದೆ.
ಯಳವತ್ತಿ ಗ್ರಾಮ ಕಳೆದ 12 ನೇ ಶತಮಾನಕ್ಕಿಂತಲೂ ಪುರಾತನ ಗ್ರಾಮವಾಗಿದ್ದು, ಇಲ್ಲಿನ ವಿಶೇಷತೆ ಎಂಬಂತೆ ಶ್ರೀ ಉಡಚಮ್ಮದೇವಿಯು ಈ ಗ್ರಾಮದ ಆರಾಧ್ಯ ದೇವಿಯಾಗಿಯೂ, ಸದಾ ಕಾಲ ಯಳವತ್ತಿಯ ಸರ್ವ ಭಕ್ತರಿಗೂ ಯಾವುದೇ ಕಷ್ಠಗಳು ಬರದಂತೆ ತನ್ನ ಆಶೀವರ್ಾದಗಳೊಂದಿಗೆ ಕಾಪಾಡುತ್ತಾ ಬಂದಿರುತ್ತಾಳೆ. ಇಲ್ಲಿಯ ಇನ್ನೊಂದು ವಿಶೇಷತೆಯೇನೆಂದರೆ, ಊರಿನ ಯಾವುದೇ ರೀತಿಯ ಪೂಜಾ-ಪುನಸ್ಕಾರಗಳಿರಲಿ, ಯಾವುದೇ ಸಮಾರಂಭಗಳಿರಲಿ, ಮದುವೆ-ಮುಂಜೆಗಳಿಗೆ ಬಟ್ಟೆ ಖರೀದಿಸುವ ಮೊದಲು ಈ ತಾಯಿಗೆ ಮೊದಲು ಸೀರೆಗಳನ್ನು ಖರೀಸಿದ ನಂತರವೇ ಸಮಾರಂಭಗಳಿಗೆ ಖರೀದಿಸುವ ಸಂಪ್ರದಾಯ ಕಳೆದ 12 ನೇ ಶತಮಾನದಿಂದಲೂ ಬಂದಿರುವ ವಾಡಿಕೆಯಾಗಿದೆ.
ಈ ತಾಯಿಯ ವಿಶೇಷತೆಯೇನೆಂದರೆ, ಯಾವುದೇ ರೀತಿಯ ಕಷ್ಠ-ಕಾರ್ಪಣ್ಯಗಳಿರಲಿ ಅಂತಹರು ಶ್ರೀ ತಾಯಿಯ ದೇವಸ್ಥಾನದಲ್ಲಿ ನಿಜ ಮನಸ್ಸಿನಿಂದ ಬಂದ ಕಷ್ಠಗಳನ್ನು ಪರಿಹರಿಸು ಎಂದು ಬೇಡಿಕೊಂಡರೆ ಸಾಕು. ಆ ಎಲ್ಲ ಕಷ್ಠಗಳು ಕೆಲವೇ ದಿನಗಳಲ್ಲಿ ಮಾಯವಾಗಿಬಿಡುತ್ತವೆ. ಸಾವಿರಾರು ಭಕ್ತರು ಪರಿಹಾರ ಕಾಣದೇ ಇರುವ ಸಮಸ್ಯೆಗಳನ್ನು ಈ ದೇವಸ್ಥಾನಕ್ಕೆ ಬಂದು ಪರಿಹರಿಕೊಂಡ ಸಾಕಷ್ಟು ಉದಾಹರಣೆಗಳಿವೆ. ತಮ್ಮ ಹೀಗಾಗಿ ಪ್ರತೀ ಮಂಗಳವಾರ ಹಾಗೂ ಶುಕ್ರವಾರ ಈ ದೇವಸ್ಥಾದಲ್ಲಿ ಭಕ್ತರ ಸಮೂಹ ನೋಡಿದರೆ ಜಾತ್ರೆಯೇನೋ ಇರಬಹುದು ಎಂದು ಕಾಣುತ್ತದೆ.
ಕಳೆದ 4 ವರ್ಷಗಳಿಂದ ಊರಿನ ಎಲ್ಲ ಭಕ್ತರು ತಮ್ಮ-ತಮ್ಮ ಜಾತಿ, ಮತ, ಬೇದಗಳನ್ನು ಮರೆತು ಕುಟುಂಬದ ಸರ್ವ ಸದಸ್ಯರೊಂದಿಗೆ ಸೇರಿ ಮಡಿ-ಹುಡಿಯಿಂದ, ಭಕ್ತಿ ಪರಾಕಾಷ್ಠೆಯಿಂದ ಸಕಲ ವಾಧ್ಯಗಳೊಂದಿಗೆ, ಎಲ್ಲ ಭಜನಾ ಸಂಘ-ಸಂಸ್ಥೆಗಳು, ಹಿರಿಯರು, ಎಲ್ಲ ಸ್ತ್ರೀಶಕ್ತಿ ಸಂಘಗಳು, ಸಕಲ ಭಕ್ತ ಸಮೂಹದವರೆಲ್ಲ ಶ್ರೀ ತಾಯಿಯ ಪಾಲಕಿಯನ್ನು ಹೊತ್ತುಕೊಂಡು ಉತ್ಸವವನ್ನು ಅತೀ ವಿಜೃಂಭಣೆಯಿಂದ ಪ್ರ-ಪ್ರಥಮವಾಗಿ ಮಳಲಮ್ಮತಾಯಿಯ ಮಳಲ ಭಾವಿಯ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿ ವರ್ಣರಂಜಿತ ಡೊಳ್ಳಿನ, ಭಜನಾ ಮೇಳಗಳ ಹಾಗೂ ನಾರಿಯರು ಹೊತ್ತ ಕುಂಭ ಮೇಳದೊಂದಿಗೆ ಸಾಗುವುದನ್ನು ನೋಡಲು ಎರಡು ಕಣ್ಣುಗಳು ಸಾಲದೆಂಬಂತಿರುತ್ತದೆ. ದೇಸ್ಥಾನದಲ್ಲಿ ಭಕ್ತಿ ರಂಗೋಲಿ ಚಿತ್ತಾರದ ಮೂಲಕ ಪಾಲಕಿ ಉತ್ಸವ ಕಾರ್ಯಕ್ರಮ ಪೂರ್ಣಗೊಳ್ಳುತ್ತಿದ್ದು, ಅಂದಿನ ಈ ತಾಯಿಯ ಪಾಲಿಕೆ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಭಕ್ತರ ಆಶೋತ್ತರಗಳನ್ನು ಪೂರ್ಣಗೊಳಿಸುವಲ್ಲಿ ಶ್ರೀ ತಾಯಿ ಆಶೀವರ್ಾದ ನೀಡಲಿದ್ದಾಳೆ.
ಪ್ರತೀ ವರ್ಷದಂತೆ ಈ ಬಾರಿಯೂ ಜಾತ್ರಾ ಮಹೋತ್ಸವದ ನಂತರ ಶ್ರೀ ತಾಯಿಯ ಮಹಾಪ್ರಸಾದ ಕಾರ್ಯಕ್ರಮ ಜರುಗುವುದು.ಆದ್ದರಿಂದ ಇಂತಹ ದೇವಸ್ಥಾನಗಳ ಪುನರುಜ್ಜೀವನಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಎಲ್ಲ ಜನಪ್ರತಿನಿಧಿಗಳು ಇಂತಹ ಐತಿಹಾಸಿಕ ಕ್ಷೇತ್ರಗಳಲ್ಲಿನ ದೇವಸ್ಥಾನಗಳ ಅಭಿವೃದ್ಧಿಯ ಕಾರ್ಯಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾಗಿದೆ ಎಂದು ಯಳವತ್ತಿ ನಾಗರಿಕರ ಮಹಾದಾಶೆಯಾಗಿದೆ.