ಲೋಕದರ್ಶನ ವರದಿ
ಶಿರಹಟ್ಟಿ 19: ತಾಲೂಕಿನ ತಂಗೋಡ ಗ್ರಾಮದಲ್ಲಿ ಬಿಜೆಪಿ ಕಾರ್ಯ ಸಾಧನೆ ಶೂನ್ಯ. ಕಾಂಗ್ರೆಸ್ ಪಕ್ಷದ ಸಿದ್ದಾಂತಗಳು ದೇಶವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಸಾಮಾಜಿಕ ನ್ಯಾಯ ಒದಗಿಸುವ ಬದ್ಧತೆಯನ್ನು ನೆಚ್ಚಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಅಹ್ಲಾದಕರ ಬೆಳವಣಿಗೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ತಾಲೂಕಿನ ತಂಗೋಡ ಗ್ರಾಮದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಥರ್ಿ ಡಿ ಆರ್. ಪಾಟೀಲ ಪರ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಜನಪರವಾದ ಕಾಳಜಿ ಬಡವರ ನಿರ್ಗತಿಕರ ಹಾಗೂ ಅಲ್ಪಸಂಖ್ಯಾತರ ಏಳಿಗೆಯೇ ಮುಖ್ಯ ಧ್ಯೇಯವಾಗಿಸಿಕೊಂಡು ಚುನಾವಣೆಯನ್ನು ಎದುರಿಸಲಾಗುತ್ತಿದೆ, ಈ ಎಲ್ಲ ವಿಚಾರಗಳು ಜನಪರವಾಗಿರುವದರಿಂದ ಈ ಬಾರಿ ಡಿ ಆರ್ ಪಾಟೀಲರ ಗೆಲುವು ನಿಶ್ಚಿತವಾಗಿದೆ. ಮತಕ್ಷೇತ್ರದಾಂದ್ಯಂತ ಉತ್ತಮವಾದ ಉತಾವರಣ ಇದ್ದು, ಕಾಂಗ್ರೆಸ್ ಅಭ್ಯಥರ್ಿಯ ಗೆಲುವು ಸರಳವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ ಮಾಗಡಿ, ಡಿ ಕೆ ಹೊನ್ನಪ್ಪನವರ, ಜಿ ಆರ್. ಕೊಪ್ಪದ, ಎ ವಾಯ್ ನವಲಗುಂದ, ಫಕ್ಕೀರೇಶ ಮ್ಯಾಟಣ್ಣವರ, ನಾಗಪ್ಪ ಚಿಗರಿ, ಕುಮಾರಸ್ವಾಮಿ ಹಿರೇಮಠ, ಜಡಿಯಪ್ಪ ಹೊನ್ನಪ್ಪನವರ, ರವಿ ಹೊರೆಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.