ಶಶಿಧರ ಶಿರಸಂಗಿ
ಶಿರಹಟ್ಟಿ 11: ಶಿರಹಟ್ಟಿಯು ತಾಲೂಕಾ ಕೇಂದ್ರವಾಗಿದ್ದು, ಇಲ್ಲಿಗೆ ಬೇಕಾದ ಮೂಲಭೂತ ಅವಶ್ಯಕತೆಗಳ ಕೊರತೆ ಎದ್ದು ಕಾಣುತ್ತಿದ್ದು, ಅಭಿವೃದ್ಧಿ ಕಾರ್ಯಗಳಂತೂ ಮರೀಚಿಕೆಯಾಗುತ್ತಿದ್ದು, ರಾಜ್ಯದಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮತಕ್ಷೇತ್ರದ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಇದೊಂದು ಅತೀ ಹಿಂದುಳಿದ ತಾಲೂಕಿನಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು.
ಪಟ್ಟಣದ ಬಸ್ ನಿಲ್ದಾಣದ ಬಳಿಯ ಲೋಕೋಪಯೋಗಿ ಇಲಾಖೆಯಿಂದ ನಿಮರ್ಾಣವಾದ ರಸ್ತೆಯು ನೆಹರು ವೃತ್ತದಲ್ಲಿ ರಸ್ತೆಗಳು ಸಂಪೂರ್ಣ ಕಿತ್ತು ಹೋಗಿದ್ದು ಡಾಂಬರು ಇಲ್ಲದೇ ತಗ್ಗುಗಳು ಬಿದ್ದು ದೊಡ್ಡ ದೊಡ್ಡ ತಗ್ಗು-ಗುಂಡಿಗಳ ಕೊಳವಾಗಿದೆ. ಇದ್ದನ್ನು ನೋಡಿಯೋ ನೋಡದೇ ಹಾಗಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷತನದಲ್ಲಿ ಜಾಣ ಕುರುಡುತನ ತೋರಿಸುತ್ತಿದ್ದಾರೆ.
ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಕೋಟ್ಯಂತರ ರೂಪಾಯಿಗಳ ಹಣ ವೆಚ್ಚ ಮಾಡಿ ರಸ್ತೆ ನಿಮರ್ಾಣ ಮಾಡಲಾಗುತ್ತಿದ್ದು ನೆಹರು ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ರಸ್ತೆಯ ಪಕ್ಕದಲ್ಲಿ ಚರಂಡಿಯಿಲ್ಲದ ಕಾರಣ ರಸ್ತೆ ಮೇಲೆ ನೀರು ಹರಿಯುತ್ತದೆ. ಇದರಿಂದ ರಸ್ತೆಯೇ ನೀರಿನ ಗುಂಡಿಗಳಾಗಿ ಪರಿವರ್ತಣೆಯಾಗುತ್ತವೆ. ವಿಶೇಷವಾಗಿ ಪಟ್ಟಣದಲ್ಲಿ ಲೋಕೋಪಯೋಗಿ ವ್ಯಾಪ್ತಿಗೆ ಬರುವ ರಸ್ತೆಗಳು ಸ್ಥಿತಿ ನೋಡಿದರೆ ಯಾವ ವೈರಿಗೂ ಬಾರದು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ. ಪಟ್ಟಣದ ಪ್ರಮುಖ ಸಾರಿಗೆ ಘಟಕ, ಕೃಷಿ ಮಾರುಕಟ್ಟೆ, ನಾಯ್ಯಾಲಯ, ವಿಶೇಷವಾಗಿ ವಿದ್ಯಾಥರ್ಿಗಳು ತಾಲೂಕ ಕೇಂದ್ರವನ್ನು ಬಿಟ್ಟು ಬೇರಡೆ ಹೋಗಿ ಕಲಿಯುವ ಪರಸ್ಥಿತಿ ಮುಂದುವರೆದಿದೆ ಅದಕ್ಕೆ ಮುಕ್ತಿ ಎಂದು? ಸಮಸ್ಯೆಗಳಲ್ಲಿ ಹೇಳುತ್ತಾ ಹೋದರೆ ಪಟ್ಟಿ ಬೇಳೆಯುತ್ತಾ ಹೋಗುತ್ತದೆ.
ಪಟ್ಟಣದ ಸುಂದರವಾಗಿ ಕಾಣಲು ಪಟ್ಟಣದ ರಸ್ತೆಗಳು ನೋಡಿದರೆ ಆ ಪಟ್ಟಣದ ಯಾವ ರೀತಿ ಇದೆ ಎಂದು ಅದರ ಮೂಲಕ ತಿಳಿಯುತ್ತದೆ ಎಂದು ಕಂಡುಬರುತ್ತದೆ. ಅದರಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಗೆ ಬರುವ ಮುಖ್ಯ ದ್ವಾರದಲ್ಲಿ ರಸ್ತೆ ಸಂಪೂರ್ಣವಾಗಿ ಕಿತ್ತು ದೊಡ್ಡ ದೊಡ್ಡ ಗುಡ್ಡಗಳು ಹಾಗೂ ಗುಂಡಿಗಳು ಬಿದ್ದು, ಕಲ್ಲುಗಳು ಮೇಲೇದ್ದಿವೆ ಇದರಿಂದ ವಾಹನ ಸವಾರರ ಸಂಚಾರಕ್ಕೆ ಅಡ್ಡಿಯಾಗಿದೆ. ಲೋಕೋಪಯೋಗಿ ವ್ಯಾಪ್ತಿಗೆ ಬರುವ ರಸ್ತೆ ಸರಿಯಾಗಿ ದುರಸ್ತಿಗೊಳ್ಳದೇ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪಟ್ಟಣದ ಮುಖ್ಯ ರಸ್ತೆಯಾದ ನೆಹರು ವೃತ್ತದಲ್ಲಿಂದಲೇ ಎಲ್ಲ ವಾಹನಗಳ ಸಂಚಾರವಾಗುವುದು. ಈ ವೃತ್ತದಲ್ಲಿಯೇ ತಗ್ಗುಗಳು ನಿಮರ್ಾಣವಾಗಿದ್ದು ನಿತ್ಯ ಎಲ್ಲ ಸಂಚಾರಕ್ಕೆ ಅಡ್ಡಿಯಾಗಿದ್ದು, ಬಸ್ಗಳು ಸೇರಿದಂತೆ ದ್ವಿಚಕ್ರ ವಾಹನಗಳು ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುತ್ತವೆ. ಡಾಂಬರು ಕಿತ್ತು, ಉಸುಕು ಮತ್ತು ದೂಳು ಚಾಲಕರ ಕಣ್ಣಿಗೆ ಎರಚುತ್ತಿರುವುದರಿಂದ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುವ ಭಯ ಭೀತಿ ವಾಹನ ಸವಾರರಲ್ಲಿ ಆತಂಕಗೊಂಡು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ವಾಹನ ಓಡಿಸುವ ಪರಿಸ್ಥಿತಿ ನಿಮರ್ಾಣವಾಗಿದೆ. ಇವೆಲ್ಲವನ್ನು ತಪ್ಪಿಸಬೇಕೆಂದರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕೂಡಲೇ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಂಡು ಕಿತ್ತು ಹೋದ ಭಾಗದಲ್ಲಿ ಎಷ್ಟರಮಟ್ಟಿಗೆ ಅಧಿಕಾರಿಗಳು ಡಾಂಬರ ಕಾಮಗಾರಿ ಕೈಗೊಳ್ಳುತ್ತಾರೆ. ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.