ಶಶಿಧರ ಶಿರಸಂಗಿ
ಶಿರಹಟ್ಟಿ 31: ಅದು ಒಂದು ಸಮಯವಿತ್ತು, ಶಿಕ್ಷಣಕ್ಕೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರು ವಾಸಿಯಾಗಿ ಅತೀ ಹೆಚ್ಚು ವಿದ್ಯಾರ್ಥಿ ಗಳನ್ನು ಹೊಂದಿ ಸದಾ ಬೀಗುತ್ತಿದ್ದ "ಕನ್ನಡ ಗಂಡು ಮಕ್ಕಳ ಮಾದರಿ ಹಿರಿಯ ಪ್ರಾಥಮಿಕ ಶಾಲೆ" ಇಂದು ವಿದ್ಯಾರ್ಥಿಗಳ ದಾಖಲಾತಿ ಇಲ್ಲದೇ ಸೊರಗಿದಂತಾಗಿದೆ.
ಆ ಒಂದು ಸಮಯದಲ್ಲಿ ಈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 800 ರಿಂದ 1000 ವಿದ್ಯಾಥರ್ಿಗಳಿಗೆ ಇಪ್ಪತ್ತಕ್ಕಿಂತ ಅಧಿಕ ನುರಿತ ಶಾಲಾ ಶಿಕ್ಷರನ್ನು ಹೊಂದಿ, ತಾಲೂಕಿನ ಉಳಿದೆಲ್ಲ ಶಾಲೆಗಳಿಗೆ ಮಾದರಿಯಾಗಿದ್ದ ಈ ಶಾಲೆಯಲ್ಲಿ ಇಂದು ಅಬ್ಬಬ್ಬಾ ಎಂದರೆ 200 ವಿದ್ಯಾಥರ್ಿಗಳು ಹಾಗೂ ಕೇವಲ 7 ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ವಿಪಯರ್ಾಸವೆಂದರೆ ಕಳೆದ ಮೂರು ವರ್ಷಗಳಿಂದ ಇಲ್ಲಿ ಯಾವ ಅಧೀಕೃತ ಮುಖ್ಯೊಪಾಧ್ಯಾಯರು ನಿಯೋಜನೆಗೊಂಡಿಲ್ಲ. ಇದ್ದ ಶಿಕ್ಷಕರಲ್ಲೆ ಒಬ್ಬರು ಪ್ರಭಾರಿ ಮುಖ್ಯೊಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನೂ ಮಾದರಿ ಪ್ರಾಥಮಿಕ ಶಾಲೆಗೆ ಇರಬೇಕಾದ ಮಕ್ಕಳ ಸಂಖ್ಯೆಗಿಂತ ಕಡಿಮೆ ಇರುವದರಿಂದ ಇದನ್ನು ಮಾದರಿ ಶಾಲೆಯಿಂದ ಕೇವಲ ಹಿರಿಯ ಪ್ರಾಥಮಿಕ ಶಾಲೆಯೆಂದು ಮಾಡಲಾಗುವದು ಎಂಬುವದು ಸಾರ್ವಜನಿಕರಲ್ಲಿ ಕೇಳಿ ಬರುತ್ತಿರುವ ಸಂಗತಿಯಾಗಿದೆ. ಪಟ್ಟಣದ ಹೃದಯ ಭಾಗದಲ್ಲಿ ಇರುವ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಸಿಯಲು ನಿಜವಾದ ಕಾರಣವೇನು ಎಂಬುವದನ್ನು ಸಂಬಂಧಪಟ್ಟ ಅಧಿಕಾರಿಗಳು ತಿಳಿದುಕೊಂಡು ಶಾಲೆಯ ಉಳಿವಿಗಾಗಿ ಶ್ರಮಿಸಬೇಕಾಗಿದೆ ಎಂಬುವದು ಈ ಶಾಲೆಯಲ್ಲ್ಲಿ ಕಲಿತ ಹಳೆಯ ವಿದ್ಯಾಥರ್ಿಗಳ ಅಳಿಲಾಗಿದೆ.
ಶಾಲೆಯ ಇತಿಹಾಸ: ಸ್ವಾತಂತ್ರ್ಯ ಪೂರ್ವದಲ್ಲಿ ಸಾಂಗ್ಲಿ ಮಹಾರಾಜರ ಆಡಳಿತಕ್ಕೆ ಒಳಪಟ್ಟಿದ್ದ ಶಿರಹಟ್ಟಿ ಆಳರಸರ ಮಾತೃ ಭಾಷೆ ಮರಾಠಿಯಾದ ಕಾರಣ ಮರಾಠಿ ಶಾಲೆಯನ್ನು ಮಾತ್ರ ಹೊಂದಿತ್ತು. 1864ರಲ್ಲಿ ಚಿಕ್ಕದಾದ ಕಟ್ಟಡದಲ್ಲಿ ಇದ್ದ ಮರಾಠಿ ಶಾಲೆಯ ಜಾಗೆಯಲ್ಲಿ ಕನ್ನಡ ಭಾಷೆಯ ಬಗ್ಗೆ ಹಾಗೂ ಜನರಿಗೆ ಮಾತೃ ಭಾಷೆಯಲ್ಲಿಯೆ ಶಿಕ್ಷಣ ಸಿಗಬೇಕು ಎಂಬ ಪ್ರಾಮಾಣಿಕ ಕಳಕಳಿ ಹೊಂದಿದ್ದ ಮಹಾರಾಜರು ಇಂದು ನಾವೆಲ್ಲ ನೋಡುತ್ತಿರುವ ಕನ್ನಡ ಪ್ರಾಥಮಿಕ ಶಾಲೆಯನ್ನು ನಗರದ ಹೃದಯ ಭಾಗದಲ್ಲಿ ನಿಮರ್ಿಸಿರುವುದು.
ಆಧುನಿಕ ದೃಷ್ಟಿಕೊನದಲ್ಲಿ ನಿಮರ್ಿಸಲಾಗಿದ್ದ ಶಾಲಾ ಕಟ್ಟಡ: 150 ವರ್ಷಗಳ ಹಿಂದೆಯೇ ಅಂದರೆ 1868 ರಲ್ಲಿಯೆ ಪ್ಲಾಟ್ಫಾರ್ಮ ಹೊಂದಿದ ಕಟ್ಟಡದಲ್ಲಿ ಪ್ರತಿ ವರ್ಗಕ್ಕೆ ಸಮೃಧ್ಧ ಗಾಳಿ ಬೆಳಕಿನ ವ್ಯವಸ್ಥೆ ಇರುವ ಪ್ರತ್ಯೇಕ ಕೊಠಡಿ, ಆಫೀಸ್ ರೂಮ್, ವಿಶಾಲ ಮೈದಾನ, ಆಳೆತ್ತರದ ಸುತ್ತುಗೋಡೆ, ಕಟ್ಟಡದ ಹಿಂಬಾಗದಲ್ಲಿ ಕೈದೋಟ ನಿಮರ್ಿಸಲು ಜಾಗೆ ಹಾಗೂ ಕಟ್ಟಡದ ಮಧ್ಯ ಭಾಗದಲ್ಲಿ ಪಠ್ಯೇತರ ಚಟುವಟಿಕೆಗಾಗಿ ದೊಡ್ಡದಾದ ಸಭಾಭವನ ಹೊಂದಿದೆ. ವಿಶೇಷವೆಂದರೆ ಇತ್ತಿಚಿನ ವರ್ಷಗಳ ವರೆಗೂ ಈ ಸಭಾಭವನ ಶಿರಹಟ್ಟಿಯಲ್ಲಿ ನಡೆವ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆಯಾಗಿತ್ತು.
ನವೀಕರಣಕ್ಕಾಗಿ ಕಾಯುತ್ತಿರುವ ಶಾಲಾ ಕಟ್ಟಡ: ಅನೇಕ ಪಾರಂಪರಿಕ ಕಟ್ಟಡಗಳನ್ನು ಅವುಗಳ ನೈಜ ಸ್ಥಿತಿಯಲ್ಲಿಯೆ ಉಳಿಸಿಕೊಂಡು ಹೊಗುವದು ಆ ಕಟ್ಟಡಗಳ ಮೇಲೆ ಜನರಿಗಿರುವ ಭಾವನಾತ್ಮಕ ಸಂಭಂದವಾಗಿದೆ. ಈ ಹಿನ್ನಲೆಯಲ್ಲಿ ಕಟ್ಟಡದ ವಿನ್ಯಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಅದನ್ನು ಉಳಿಸಿಕೊಂಡು ಹೋಗುವದು ಶಿರಹಟ್ಟಿ ಮಹಾಜನತೆಯ ಆಸೆಯವಾಗಿದೆ. ಆದರೆ ಕಟ್ಟಡ ಸಿಥಿಲವಾಗದಂತೆ ಕೊಠಡಿಗಳ ಗೊಡೆಗಳಿಗೆ ಸಿಮಿಂಟ್ ಮಲ್ಲಾ, ಇರುವ ಮಂಗಳೂರ ಹಂಚಿನ ಮೇಲ್ಚಾವಣೆ ದುರಸ್ಥಿ ಹಾಗೂ ಗೊಡೆಗಳಿಗೆ ಬಣ್ಣ ಮಾಡಿಸಿ ಕಟ್ಟಡವನ್ನು ಉಳಿಸಿಕೊಳ್ಳಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಒಳಗೋಡೆಗಳ ಮೇಲೆ ಅವಶ್ಯಕ ಚಿತ್ರ ಪಠಗಳು, ಹೊಸ ವಿನ್ಯಾಸದ ಬ್ಲಾಕ್ ಬೊರ್ಡಗಳು, ಮಕ್ಕಳು ಕುಳಿತುಕೊಳ್ಳಲು ಪಿಠೋಪಕರಣಗಳ ಅವಶ್ಯಕತೆ ಇದೆ. ಇವುಗಳ ಜೊತೆಗೆ ಗಣಕ ಯಂತ್ರ ನಿಯಂತ್ರಿತ ಆಕರ್ಶಕ ಕಾಯರ್ಾಲಯ ಹಾಗೂ ಶಿಕ್ಷಕರಿಗೆ ಅವಶ್ಯಕ ಪೀಠೋಪಕರಣ ಹಾಗೂ ಪಾಠೋಪಕರಣಗಳ ವ್ಯವಸ್ಥೆ ಮಾಡಿ ಆಧುನಿಕ ಮನಸ್ಥಿತಿಯ ಪಾಲಕರು ಸ್ವಯಂ ಸ್ಪೂತರ್ಿಯಿಂದ ತಮ್ಮ ಮಕ್ಕಳನ್ನು ಈ ಶಾಲೆಯಲ್ಲಿ ನೋಂದಾಯಿಸುವಂತೆ ಆಗಬೇಕೆಂಬ ಹೆಬ್ಬಯಕೆ ಇಂದಿನ ಹಿರಿಯ ಜೀವಿಗಳಾದ ಅಂದಿನ ವಿದ್ಯಾಥರ್ಿಗಳದಾಗಿದೆ.