ಶಿರಗುಪ್ಪಿ ಸ್ವಾಭಿಮಾನಿ ಸೊಸೈಟಿಯ ಸಭೆ
Shiraguppi Swabhimani Society meeting
ಶಿರಗುಪ್ಪಿ ಸ್ವಾಭಿಮಾನಿ ಸೊಸೈಟಿಯ ಸಭೆ
ಕಾಗವಾಡ 15: ರೈತರು ಸ್ವಾಭಿಮಾನದ ಜೀವನ ಕಟ್ಟುಕೊಳ್ಳುವ ಉದ್ದೇಶದಿಂದ ಸ್ವಾಭಿಮಾನಿ ಶೇತಕರಿ ಸಂಘಟನೆಯ ಸಂಸ್ಥಾಪಕ ರಾಜು ಶೆಟ್ಟಿ 2019 ರಲ್ಲಿ ಉದ್ಘಾಟನೆ ಮಾಡಿರುವ ಸ್ವಾಭಿಮಾನಿ ಸೊಸೈಟಿಯು ಪ್ರಗತಿ ಪಥದಲ್ಲಿ ಸಾಗುತ್ತಿದ್ದು, ಪ್ರಸಕ್ತ ಆರ್ಥಿಕ ಸಾಲಿನಲ್ಲಿ ರೂ. 43.58 ಲಕ್ಷ ನಿವ್ಹಳ ಲಾಭ ಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ರಾಜೇಂದ್ರ ಚೌಗುಲಾ ತಿಳಿಸಿದ್ದಾರೆ. ಅವರು, ರವಿವಾರ ದಿ. 14 ರಂದು ಶಿರಗುಪ್ಪಿ ಗ್ರಾಮದ ಜೈನ ಸಭಾಭವನದಲ್ಲಿ ನಡೆದ ಸೊಸೈಟಿಯ 7ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡುತ್ತಿದ್ದರು. ಸೊಸೈಟಿಯು 2 ಶಾಖೆಗಳೊಂದಿಗೆ 836 ಸದಸ್ಯರನ್ನು ಹೊಂದಿದ್ದು, 8 ಲಕ್ಷ 41 ಸಾವಿರ ರೂ. ಶೇರ ಬಂಡವಾಳ, 15 ಕೋಟಿ 17 ಲಕ್ಷ 34 ಸಾವಿರದ 230 ರೂ. ದುಡಿಯುವ ಬಂಡವಾಳದ ಹೊಂದಿದೆ. ಇನ್ನೂ 8 ಕೋಟಿ 55 ಲಕ್ಷ 62 ಸಾವಿರದ 427 ರೂ. ಸಾಲ ವಿತರಿಸಿ, ಒಟ್ಟು 43 ಲಕ್ಷ 57 ಸಾವಿರದ 977 ರೂ. ನಿವ್ಹಳ ಲಾಭ ಗಳಿಸಿದೆ ಎಂದರು. ಉಪಾಧ್ಯಕ್ಷ ಭೀಮು ಅಕಿವಾಟೆ ಸದಸ್ಯರಿಗೆ ಶೇ. 25 ರಷ್ಟು ಲಾಭಾಂಶ ಘೋಷಣೆ ಮಾಡಿದರು. ಕಾರ್ಯಕ್ರಮವನ್ನು ಸಸಿಗೆ ನೀರೇರೆದು ಚಾಲನೆ ನೀಡಲಾಯಿತು. ಮುಖ್ಯ ಕಾರ್ಯದರ್ಶಿ ರಾಕೇಶ ಅಕಿವಾಟೆ ವರದಿ ವಾಚನ ಮಾಡಿದರು. ರೈತ ಮುಖಂಡ ಸುರೇಶ ಚೌಗುಲೆ ಮಾತನಾಡಿ, ಸೊಸೈಟಿಯು 15 ಕೋಟಿ ರೂ.ಗಳಷ್ಟು ದುಡಿಯುವ ಬಂಡವಾಳದೊಂದಿಗೆ ಪ್ರಗತಿಪಥದಲ್ಲಿ ಸಾಗಿದ್ದು, ಇನಷ್ಟು ಶಾಖೆಗಳನ್ನು ಪ್ರಾರಂಭಿಸಿ, ರೈತರ ಆರ್ಥಿಕ ಪ್ರಗತಿಗೆ ಶ್ರಮಿಸಲಿ ಎಂದು ಹಾರೈಸಿದರು. ಈ ವೇಳೆ ನಿರ್ದೇಶಕರಾದ ಪ್ರಕಾಶ ಹೇಮಗಿರೆ, ಸುನೀಲ ಚೌಗುಲೆ, ಅರುಣ ಶಿರಗುಪ್ಪೆ, ಬಾಳಾಸಾಬ ಕಾಟಕರ, ಅಪ್ರೋಜ್ ಕನವಾಡೆ, ಮಹಾದೇವ ಢಂಗ, ಸೌ. ವೈಶಾಲಿ ಚೌಗುಲೆ, ಸೌ. ಸುಹಾಸಿನಿ ಮೋನೆ, ಶೇಡಬಾಳ ಶಾಖೆಯ ಅಧ್ಯಕ್ಷ ನೇಮಗೌಡಾ ನರಸಗೌಡರ, ಮಂಗಸೂಳಿ ಶಾಖೆಯ ಅಧ್ಯಕ್ಷ ಅಮರ ಪಾಟೀಲ, ಮೀರಾಸಾಬ ಸನದಿ ಸೇರಿದಂತೆ ಶಾಖೆಗಳ ಸಲಹಾ ಸಮಿತಿಯ ಸದಸ್ಯರು, ಸಿಬ್ಬಂದಿ ವರ್ಗದವರು, ಸರ್ವ ಸದಸ್ಯರು ಉಪಸ್ಥಿತರಿದ್ದರು. ಪ್ರಕಾಶ ಹೇಮಗಿರೆ ಸ್ವಾಗತಿಸಿದರು. ರಾಕೇಶ ಅಕಿವಾಟೆ ನಿರೂಪಿಸಿದರು. ಬಾಹುಬಲಿ ಗಿರಗಾಂವೆ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 