ಸ್ವಚ್ಛತಾ ಮಾಸಾಚರಣೆ-ವಿದ್ಯಾಥರ್ಿಗಳೊಂದಿಗೆ ಫೋನ್ ಇನ್ ಕಾರ್ಯಕ್ರಮ ಗುಲಾಬಿ ಹೂ ನೀಡಿ ಶೌಚಾಲಯ ಬಳಕೆಗೆ ಮನವೊಲಿಸಲು ಶಿಲ್ಪಾ ನಾಗ್ ಸಲಹೆ

ಸ್ವಚ್ಛತಾ ಮಾಸಾಚರಣೆ-ವಿದ್ಯಾಥರ್ಿಗಳೊಂದಿಗೆ ಫೋನ್ ಇನ್ ಕಾರ್ಯಕ್ರಮ ಗುಲಾಬಿ ಹೂ ನೀಡಿ ಶೌಚಾಲಯ ಬಳಕೆಗೆ ಮನವೊಲಿಸಲು ಶಿಲ್ಪಾ ನಾಗ್ ಸಲಹೆ

ಹಾವೇರಿ: ನಮ್ಮ ಶಾಲೆಗೆ ಹೈಟೆಕ್ ಶೌಚಾಲಯ ನಿಮರ್ಿಸಿಕೊಡಿ, ನಮ್ಮ ಗ್ರಾಮದ ಚರಂಡಿ ಸ್ವಚ್ಛಮಾಡಿಸಿ, ನಗರ ಸ್ವಚ್ಛತೆ ಹಾಗೂ ಕ್ರೀಡಾಂಗಣ ಸ್ವಚ್ಛತೆಗೆ ಸೂಚಿಸಿ, ಪ್ಲಾಸ್ಟಿಕ್ ನಿಷೇಧಿಸಿ, ಬಯಲು ಬಹಿದರ್ೆಸೆ ತಡೆಯಲು ನಮಗೆ ಮಾರ್ಗದರ್ಶನ ನೀಡಿ ಪ್ಲೀಸ್ ಮೇಡಂ.... 

ಹೀಗೆ... ಸ್ವಚ್ಛತಾ ಮಾಸದ ಅಂಗವಾಗಿ ಜಿಲ್ಲೆಯ ಶಾಲಾ ವಿದ್ಯಾಥರ್ಿಗಳೊಂದಿಗೆ ಶನಿವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಶ್ರೀಮತಿ ಶಿಲ್ಪಾ ನಾಗ್ ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಮೇಲ್ಕಂಡಂತೆ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾಥರ್ಿಗಳು ದೂರವಾಣಿ ಕರೆ ಮಾಡಿ ಮನವಿ ಮಾಡಿಕೊಂಡ ಪರಿ ಇದು.

    ಬೆಳಿಗ್ಗೆ 10 ರಿಂದ ಒಂದೂವರೆ ತಾಸು ವಿದ್ಯಾಥರ್ಿಗಳ ಪ್ರಶ್ನೆಗಳನ್ನು ಸ್ವೀಕರಿಸಿ ಸಮಚಿತ್ತದಿಂದ ಉತ್ತರಿಸಿದ ಸಿಇಒ ಶಿಲ್ಪಾ ನಾಗ್ ಅವರು ಹಿರೇಕೆರೂರು ತಾಲೂಕಿನ ಮೊರಾಜರ್ಿ ದೇಸಾಯಿ ವಸತಿ ಶಾಲೆಯ ಕುಮಾರಿ ನಿವೇದಿತಾ ಶಂಕರ ಎಂಬ ವಿದ್ಯಾಥರ್ಿನಿಯೋರ್ವರು ಸ್ವಚ್ಛತೆ ಕುರಿತು ಶಾಲಾ ಶಿಕ್ಷಕರು  ನಮಗೆ ಸಾಕಷ್ಟು ಅರಿವು ಮೂಡಿಸಿದ್ದಾರೆ. ಪ್ರಬಂಧ ಸ್ಪಧರ್ೆ, ಕವನ ಸ್ಪಧರ್ೆ, ರಂಗೋಲಿ ಸ್ಪಧರ್ೆ ಏರ್ಪಡಿಸಿದ್ದಾರೆ. ಈ ಕುರಿತಂತೆ ನಮಗೆ ಸಾಕಷ್ಟು ಮಾಹಿತಿ ದೊರೆತಿದೆ. ಆದರೆ ಗ್ರಾಮಸ್ಥರಿಗೆ ಸ್ವಚ್ಛತೆ ಕುರಿತಂತೆ ಶೌಚಾಲಯ ಬಳಕೆ ಮಾಡುವ ಕುರಿತಂತೆ ಯಾವ ರೀತಿಯ ಅರಿವು ಮೂಡಿಸಬೇಕು ಮಾರ್ಗದರ್ಶನ ನೀಡಿ ಎಂದು ಕೋರಿದರು.

    ವಿದ್ಯಾಥರ್ಿನಿಯ ಕರೆಗೆ ಉತ್ತರಿಸಿದ ಶಿಲ್ಪಾ ನಾಗ್ ಅವರು ನೀವು ನಿಮ್ಮ ಗ್ರಾಮ ವಿದ್ಯಾಥರ್ಿಗಳ ಹಾಗೂ ಸ್ನೇಹಿತರ ತಂಡಗಳನ್ನು ರಚಿಸಿಕೊಳ್ಳಿ ಬೆಳಿಗ್ಗೆ 6 ಗಂಟೆಯಿಂದ ವಿವಿಧ ಓಣಿಗಳಲ್ಲಿ ಬಯಲು ಬಹಿದರ್ೆಸೆ ಮಾಡಲು ಹೋಗುವ ಗ್ರಾಮಸ್ಥರಿಗೆ "ಗುಲಾಬಿ ಹೂ ನೀಡಿ" ಶೌಚಾಲಯ ಬಳಸಲು ವಿನಂತಿಮಾಡಿ. ಶೌಚಾಲಯ ಬಳಕೆ ಕುರಿತಂತೆ ಅರಿವು ಮೂಡಿಸಿ ಅವರ ಮನಸ್ಸು ಗೆಲ್ಲಿರಿ. ಬಯಲು ಬಹಿದರ್ೆಸೆಗೆ ಕೊನೆ ಹಾಡಿ ಎಂದು ಸಲಹೆ ನೀಡಿದರು. 

    ಹಾವೇರಿ ರೋಟರಿ ಪ್ರಾಥಮಿಕ ಶಾಲೆಯ ವಷರ್ಾ, ಮಾಕನೂರ ಪ್ರೌಢಶಾಲೆಯ ವಿದ್ಯಾಥರ್ಿ ಜನಾರ್ಧನ ಎಚ್.ಕೆ., ಶಿರಬಡಗಿ ಶಾಲೆಯ ಕಾವೇರಿ, ಯಲಿವಾಳ ಗ್ರಾಮದ ಕುಮಾರಿ ಮಧುರಾ ಎಸ್.ನಾಗೋಜಿ, ಆಡೂರ ಶಾಲೆಯ ಕುಮಾರಿ ಮಂಗಳಾ ಪಾಟೀಲ, ಬೇಲೂರ ಶಾಲೆಯ ಕುಮಾರಿ ಅನುಷಾ ಮೊದಲಾದವರು ಗ್ರಾಮಮಗಳ ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡಿ, ರಾಣೇಬೆನ್ನೂರ ತಾಲೂಕು ಕ್ರೀಡಾಂಗಣ ಮಲೀನವಾಗಿದೆ. ಸ್ವಚ್ಛವಾಗಿರಿಸಲು ಸೂಕ್ತ ಕ್ರಮಕೈಗೊಳ್ಳಿ. ಯತೇಚ್ಛವಾಗಿ ಪ್ಲಾಸ್ಟಿಕ್ ಬಳಸುತ್ತಾರೆ ನಿಯಂತ್ರಣ ಮಾಡಿ, ನಗರ ಪ್ರದೇಶಗಳಲ್ಲಿ ಸೂಕ್ತ ರೀತಿಯಲ್ಲಿ ಕಸ ವಿಲೇವಾರಿಗೊಳಿಸಿ. ಇದೇ ಮಾದರಿಯಲ್ಲಿ ಗ್ರಾಮೀಣ ಪ್ರದೇಶದಲ್ಲೂ ವೈಜ್ಞಾನಿಕ ಕಸವಿಲೇವಾರಿಗೊಳಿಸಿ, ಶಾಲೆಗಳಲ್ಲಿ ಹೈಟೆಕ್ ಶೌಚಾಲಯ ನಿಮರ್ಿಸಿಕೊಡಿ ಎಂಬ ಬೇಡಿಕೆಗಳನ್ನು ಮುಖ್ಯ ಕಾರ್ಯನಿವರ್ಾಹಣಾಧಿಕಾರಿಗಳ ಮುಂದಿರಿಸಿದರು.

ವಿದ್ಯಾಥರ್ಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಿಇಒ ಶಿಲ್ಪಾ ನಾಗ್ ಅವರು ಗ್ರಾಮದ ಚರಂಡಿಗಳ ಸ್ವಚ್ಛತೆಯ ಬಗ್ಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ನಿದರ್ೆಶನ ನೀಡುತ್ತೇನೆ ಹಾಗೂ ನಗರ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧ, ಸಾರ್ವಜನಿಕರು ಬಟ್ಟೆ ಚೀಲಗಳನ್ನು ಬಳಸುವ ಕುರಿತಂತೆ, ರಾಣೇಬೆನ್ನೂರ ತಾಲೂಕು ಕ್ರೀಡಾಂಗಣದ ಸ್ವಚ್ಛತೆ ಕುರಿತಂತೆ ಸಂಬಂಧಿಸಿದ ನಗರಸಭೆಯ ಮುಖ್ಯಾಧಿಕಾರಿಗಳು ಹಾಗೂ ತಾಲೂಕಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಣಾಧಿಕಾರಿಗಳಿಗೆ ಸೂಕ್ತ ನಿದರ್ೆಶನ ನೀಡುವುದಾಗಿ ವಿದ್ಯಾಥರ್ಿಗಳಿಗೆ ತಿಳಿಸಿದರು.

   ರಾಣೇಬೆನ್ನೂರ ತಾಲೂಕಿನ ಬೇಲೂರ ಸಕರ್ಾರಿ ಪ್ರೌಢಶಾಲೆಯ ವಿದ್ಯಾಥರ್ಿಗಳಾದ ಸೃಷ್ಠಿ ಮತ್ತು ಸಮರ್ಥ ಎಂಬ ವಿದ್ಯಾಥರ್ಿಗಳು ಗಾಂಧೀಜಿ ಅವರ ಕನಸಾದ ಸ್ವಚ್ಛತೆಯ ಬಗ್ಗೆ ಜನರಿಗೆ ಏಕೆ ಅರಿವಿಲ್ಲ. ಸ್ವಚ್ಛ ಭಾರತ ಕಾರ್ಯಕ್ರಮದಲ್ಲಿ ಜನರು ಏಕೆ ಭಾಗವಹಿಸುವುದಿಲ್ಲ ಎಂದು ಪ್ರಶ್ನಿಸಿದರು.

    ವಿದ್ಯಾಥರ್ಿಗಳ ಪ್ರಶ್ನೆಗೆ ಹಸನ್ಮುಖರಾಗಿ ಉತ್ತರಿಸಿದ ಸಿಇಒ ಅವರು ಸದೃಢ ಮತ್ತು ಸ್ವಸ್ಥ ದೇಶವಾಗಲು ದೇಶದ ಪ್ರತಿ ಗ್ರಾಮ ನಗರಗಳಲ್ಲಿ ಸ್ವಚ್ಛತೆ ಅತೀ ಮುಖ್ಯವಾಗಿರುತ್ತದೆ. ಸ್ವಚ್ಛ ಗ್ರಾಮವಾಗಿಸಲು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಆದರೆ ಜನರಲ್ಲಿ ಸ್ವಚ್ಛತೆ ಅರಿವು ತುಂಬಾ ಕಡಿಮೆ ಇದೆ. ಹಾಗೂ ಸ್ವಚ್ಛತೆ ಕುರಿತು ನಿರ್ಲಕ್ಷ್ಯವೂ ಕಾರಣವಾಗಿದೆ. ತಮ್ಮ ಪಾಲಕರಿಗೆ ಎಲ್ಲ ಮಕ್ಕಳು ಸ್ವಚ್ಛತೆ ಬಗ್ಗೆ ಮನಮುಟ್ಟುವ ರೀತಿಯಲ್ಲಿ ವಿವರಿಸಿದರೆ ಸ್ವಚ್ಛ ಭಾರತ ನಿಮರ್ಾಣ ಮಾಡಲು ಸಾಧ್ಯ ಎಂದು ಮನವರಿಕೆ ಮಾಡಿಕೊಟ್ಟರು.

    ವಿದ್ಯಾಥರ್ಿಗಳಲ್ಲದೇ ಕೆಲವು ಶಾಲಾ ಶಿಕ್ಷಕರು ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನೀರಲಗಿ ಶಾಲೆಯ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರದ ಒಡಕಪ್ಪ ಎಂಬುವರು ಶಾಲೆಗೆ ಶೌಚಾಲಯ ಇಲ್ಲದಿರುವ ಕುರಿತಂತೆ ಗಮನಕ್ಕೆ ತಂದರು. ತಕ್ಷಣವೇ ಸ್ಪಂದಿಸಿದ ಸಿಇಒ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶೌಚಾಲಯ ನಿಮರ್ಾಣ ಕುರಿತಂತೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

    ಹಾನಗಲ್ ತಾಲೂಕು ಮಹಾರಾಜಪೇಟೆ ಶಾಲಾ ವಿದ್ಯಾಥರ್ಿಗಳಾದ ಸುಷ್ಮಾ, ಕಾವ್ಯಾ, ಆದಿತ್ಯ, ರಾಣೇಬೆನ್ನೂರ  ತಾಲೂಕಿನ ವಿನಾಯಕ, ಹಾನಗಲ್ ತಾಲೂಕು ಬೊಮ್ಮನಹಳ್ಳಿಯ  ವಿದ್ಯಾಥರ್ಿ ಕುಮಾರಿ ನಾಗಿಣಿ, ಶಿಗ್ಗಾಂವ ತಾಲೂಕು ಗುಡ್ಡದ ಚನ್ನಾಪೂರ ವಿದ್ಯಾಥರ್ಿನಿ ಕುಮಾರಿ ಪ್ರಜ್ಞಾ ತಮ್ಮಣ್ಣ ಬಡ್ನಿ, ಹಾನಗಲ್ ತಾಲೂಕು ಕೋಡಿಯಲ್ಲಾಪುರದ ಸುದೀಪ್, ಶಿಗ್ಗಾಂವ ತಾಲೂಕು ಮೊಳಕೇರಿ ಶಾಲೆಯ ಸಹ ಶಿಕ್ಷಕಿ ಜ್ಯೋತಿ ಮೊಗೇರಾ, ಶಿರಬಡಗಿ ಶಾಲೆಯ  ವಿದ್ಯಾಥರ್ಿನಿ ಕಾವೇರಿ ಮೊದಲಾದವರು ದೂರವಾಣಿ ಕರೆಮಾಡಿ ಶಾಲಾ ಹಂತದಲ್ಲಿ ಯಶಸ್ವಿಯಾಗಿ ಸ್ವಚ್ಛತಾ ಮಾಸಾಚರಣೆಯನ್ನು ನಡೆಸಲಾಗುತ್ತಿದೆ. ಗ್ರಾಮದ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಲ್ಲದೇ ಸ್ವಚ್ಛತೆ ಕುರಿತಂತೆ ಜಾಗೃತಿ ಮೂಡಿಸಲು ಬೀದಿನಾಟಕ ಪ್ರದರ್ಸನ ಸೇರಿದಂತೆ ಹಲವು ವಿಚಾರಗಳನ್ನು ಚಚರ್ಿಸಿವುದರ ಮೂಲಕ ಪರಿಸರ ರಕ್ಷಣೆ ಹಾಗೂ ಸ್ವಚ್ಛತೆಯ  ಕಾಳಜಿಯನ್ನು ಮೆರೆದು ನೂರಾರು ವಿದ್ಯಾಥರ್ಿಗಳು ದೂರವಾಣಿ ಕರೆಮಾಡಿ ವಿವಿಧ ಬೇಡಿಕೆಗಳನ್ನು ಮನವಿಗಳನ್ನು ಪ್ರಶ್ನೆಯ ರೂಪದಲ್ಲಿ ಮುಖ್ಯ ಕಾರ್ಯನಿವರ್ಾಹಣಾಧಿಕಾರಿಗಳ ಮುಂದಿರಿಸಿದರು.