ಶಿಗ್ಗಾವಿ: ಪೌರ ಕಾಮರ್ಿಕರ ದಿನಾಚರಣೆ

ಲೋಕದರ್ಶನ ವರದಿ 

ಶಿಗ್ಗಾವಿ ಃ ಪಟ್ಟಣದ ಸ್ವಚ್ಚತೆ ಕಾಪಾಡಿ ನಮ್ಮೆಲ್ಲರ ಆರೋಗ್ಯ ರಕ್ಷಣೆ ಮಾಡುವ ಪೌರ ಕಾಮರ್ಿಕರಿಗೆ ಕೇಂದ್ರ ಮತ್ತು ರಾಜ್ಯ ಸಕರ್ಾರಗಳ ನೌಕರರಿಗೆ ದೊರಕುವ ಸೌಲಭ್ಯಗಳು ದೊರಕುವಂತಾಗಬೇಕು ಎಂದು ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗಿಮಠ ಹೇಳಿದರು.

   ಪೌರಾಡಳಿತ ಇಲಾಖೆಯಿಂದ ಸೋಮವಾರ ಪಟ್ಟಣದ ಪುರಸಭೆ ಆವರಣದಲ್ಲಿ ಪೌರ ಕಾಮರ್ಿಕರ ದಿನಾಚರಣೆ ಅಂಗವಾಗಿ ಪೌರ ಕಾಮರ್ಿಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಸುಮಾರು 7 ತಿಂಗಳಿಂದ ವೇತನವಿಲ್ಲದಿದ್ದರೂ ತಮ್ಮ ತೊಂದರೆಗಳನ್ನು ಬದಿಗಿಟ್ಟು ಪಟ್ಟಣದ ಸ್ವಚ್ಚತೆ ಕಾಪಾಡಿದ ಪೌರ ಕಾಮರ್ಿಕರ ಕಾರ್ಯ ಶ್ಲ್ಯಾಘನೀಯ ಎಂದ ಅವರು, ಪೌರ ಕಾಮರ್ಿಕರ ಸಮಸ್ಯೆಗಳಿಗೆ ನಾವು ಸದಾ ಅವರೊಂದಿಗೆ ಇದ್ದೇವೆ ಎಂದು ಭರವಸೆ ನೀಡಿದರು.

    ಪುರಸಭೆ ಉಪಾಧ್ಯಕ್ಷ ಪರಶುರಾಮ ಸೊನ್ನದ ಮಾತನಾಡಿ, ಪೌರ ಕಾಮರ್ಿಕರು ಕಷ್ಟಪಟ್ಟು ಪಟ್ಟಣದ ಕೊಳೆ ತೆಗೆದು ನಗರದ ಸ್ವಚ್ಚತೆ ಕಾಪಾಡುತ್ತಿದ್ದಾರೆ. ನಗರದ ಸುಮಾರು 35 ಸಾವಿರ ಜನಸಂಖ್ಯೆ ಹೊಂದಿದ್ದು. ಪೌರ ಕಾಮರ್ಿಕರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ, ಕೊಳಚೆಯಲ್ಲಿ ಕೆಲಸ ಮಾಡುವದರಿಂದ ಅವರ ಆರೋಗ್ಯ ಬಧ್ರತೆಗೆ ಕೊರತೆಯಾಗಿದೆ ಕೆಲವು ಬಾರಿ ಅಪಾಯ ಎದುರಿಸಬೆಕಾಗಿದೆ. ಹಾಗಾಗಿ ಪುರಸಭೆಗೆ ಹೊಸಹೊಸ ತಂತ್ರಜ್ಞಾನದ ಯಂತ್ರಗಳ ಅವಷ್ಯಕತೆ ಇದೆ ಸಕರ್ಾರ ಇದರ ಬಗ್ಗೆ ಗಮನ ಹರಿಸಬೇಕು ಎಂದರು.

    ಕಾಮರ್ಿಕ ಸಂಘದ ರಾಜ್ಯಾಧ್ಯಕ್ಷ ಪಕ್ಕೀರೇಶ ಶಿಗ್ಗಾಂವ ಪ್ರಾಸ್ಥವಿಕವಾಗಿ ಮಾತನಾಡಿ. ಪೌರ ಕಾಮರ್ಿಕರಿಗೆ ಸಕರ್ಾರದ ಸೌಲಭ್ಯಗಳು, ವಿಮಾ ಯೋಜನೆಗಳು, ಹಾಗೂ ಅವರ ಮಕ್ಕಳು ಉನ್ನತ ಶಿಕ್ಷಣ ಹೊಂದಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

   ಪುರಸಭೆ ಸದಸ್ಯ ಸುಭಾಸ ಚವ್ಹಾಣ ಮಾತನಾಡಿ, ವರ್ಷಕ್ಕೊಮ್ಮೆ  ಪೌರ ಕಾಮರ್ಿಕರ ದಿನಾಚರಣೆ ಮಾಡಿದರೆ ಸಾಲದು ಪೌರ ಕಾಮರ್ಿಕರ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಸಕರ್ಾರಗಳು ಹಾಗೂ ಅಧಿಕಾರಿಗಳು ಕಾರ್ಯ ಮಾಡಬೇಕು ಎಂದರು.

 ಪುರಸಭೆ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ ಮಾತನಾಡಿ, ಪೌರ ಕಾಮಿಕರು ಮಾತ್ರ ನಗರವನ್ನು ಸ್ವಚ್ಚವಾಗಿಡಲು  ಸಾದ್ಯವಿಲ್ಲ, ಅವರೊಂದಿಗೆ ಸಾರ್ವಜನಿಕರು ಸಹಕರಿಸಬೇಕು ತ್ಯಾಜ್ಯ, ಕಸವನ್ನು ಎಲ್ಲೆಂದರಲ್ಲಿ ಚಲ್ಲದೆ ಮನೆ ಬಾಗಿಲಿಗೆ ಬರುವ ಪುರಸಭೆಯ ಕಸದ ಗಾಡಿಗಳಿಗೆ ನೀಡಬೇಕು ಎಂದರು.

 ಪಟ್ಟಣದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಪೌರ ಕಾಮಿಕರನ್ನು, ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗಿಮಠ ಹಾಗೂ ಉಪಾಧ್ಯಕ್ಷರು ಸದಸ್ಯರು ಹಾಗೂ ಅದಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ಪುರಸಭೆ ಸದಸ್ಯರಾದ ರೂಪಾ ಬನ್ನಿಕೊಪ್ಪ, ವೀಣಾ ಕುಡರ್ೆಕರ, ಫಕ್ಕೀರಮ್ಮ ಅಡರಕಟ್ಟಿ, ಶಂಕ್ರಮ್ಮ ಅಂದಲಗಿ, ಲಕ್ಷ್ಮವ್ವ ಕಟ್ಟಿಮನಿ, ಗೌಸಖಾನ ಮುನಸಿ, ಅಬ್ದುಲಸತ್ತಾರ ಶಿಡೇನೂರ, ಪುರಸಭೆ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ ಸ್ವಾಗತಿಸಿದರು, ಈರಣ್ಣ ಬಾರಕೇರ ನಿರೂಪಿಸಿದರು, ಶೈಲಜಾ ಎಸ್ ಪಾಟೀಲ ವಂದಿಸಿದರು.