ಶರೀಫರು ತತ್ತ್ವಪದಗಳ ಮೂಲಕ ಬದುಕಿನ ಅಗಾದರ್ಥ ತಿಳಿಸಿದರು : ವಾಲಿ ಗುರೂಜೀ

ಶರೀಫರು ತತ್ತ್ವಪದಗಳ ಮೂಲಕ ಬದುಕಿನ ಅಗಾದರ್ಥ ತಿಳಿಸಿದರು : ವಾಲಿ ಗುರೂಜೀ Sharif conveyed the profound meaning of life through philosophical sayings: Wali Guruji


            ಶಿಗ್ಗಾವಿ 21: ಅಜ್ಞಾನದ ಸೂರಿನಲ್ಲಿ ಬದುಕಿನ ಅಗಾಧರ್ಥವನ್ನು ತನ್ನ ತತ್ತ್ವಪದಗಳ ಮೂಲಕ ತಿಳಿಸಿದವರು ಶರೀಫಜ್ಜ ಎಂದು ಡಾ. ಸದ್ಗುರ ಸಮರ್ಥ ಎ.ಸಿ.ವಾಲಿ ಹೇಳಿದರು.ತಾಲೂಕಿನ ಶಿಶುವಿನಾಳ ಗ್ರಾಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತ ಶಿಗ್ಗಾವಿ, ಶರೀಫ ಶಿವಯೋಗಿ ಹಾಗೂ ಗುರು ಗೋವಿಂದ ಶಿವಯೋಗಿ ಪಂಚಾಗ್ನಿಮಠ ಟ್ರಸ್ಟ್‌ ಶರೀಫಗಿರಿ, ನಿರಾಮಯ ಪೌಂಡೇಶನ್ ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಬರಕೋ ಪದಾ ಬರಕೋ ಗ್ಯಾನ ಧ್ಯಾನದ ಪಯಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಗುರುವಿನ ಗುಂಗಿನಲ್ಲಿ ಬಿದ್ದರೆ ಭವದ ಹಂಗು ತಾನೆ ಕಡಿಮೆಯಾಗುತ್ತದೆ. 

            ಕತ್ತಲಿಂದಲೆ ಬೆಳಕಿನ ಪರಿಚಯವಾಗುವುದು. ಕಾಲಕ್ಕಿಂತ ಮುಂಚಿತವಾಗಿ ಹಣೆ ಬರಹಕಿಂತ ಮೊದಲು ಗುರುವಿನ ಶಕ್ತಿಯಿಂದ ದಡ್ಡನನ್ನು ಜಾಣನಾಗಿ ಜಾಣನನ್ನು ದಡ್ಡನಾಗಿ ಮಾಡುವ ಶಕ್ತಿ ಗುರುವಿಗೆ ಇದೆ. ಶರೀಫ ಎದೆಯಲ್ಲಿನ ಆತ್ಮಜ್ಞಾನದಿಂದ ಸತೃಪ್ತನಾದವನು ಹೊರಲೋಕದ ಜನರ ಕಣ್ಣಿಗೆ ಸಾಮನ್ಯವಾದ ವ್ಯಕ್ತಿ.ಹಿಂಗಾದ ಮೇಲಾ ಹೆಂಗಾ ಬಳಸಲಿ ಎಂಬು ಮಾತಿನ ಅರಿವನ್ನು ಅರಿತವರು ಶರೀಫ.ಜನರ ಬದುಕಿಗೆ ಜ್ಞಾನದ ಕಿರಣವಾದವರು ಶರೀಫರ ತತ್ತ್ವಪದಗಳ ಗಾನದ ಮೂಲಕ ಧ್ಯಾನಕ್ಕೆ ಇಳಿಸಿದರು. ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿ ಭವದ ಬಂಧನ ಮುಕ್ತಿಗೆ ಶರೀಫರ ತತ್ತ್ವ ಪದ ದಾರೀದೀಪಗಳಾಗಿವೆ. ಬದುಕಿನಲ್ಲಿ ಅಳವಡಿಸಿಕೋಳ್ಳಬೇಕು ಬರೀ ಭಾಷಣದ ಮಾತುಗಳಾಗ ಬಾರದು ಬದುಕಿಗೆ ಬಲೆ ತರುವ ಒಂದೊಂದು ಮಾತುಗಳು ಪದಗಳು ಮುತ್ತುಗಳಾದ್ದವು ಎಂದರು.ಸಮ್ಮುಖವಹಿಸಿ ಅತ್ತಿಗೇರಿ ಅದ್ವೈತಾನಂದ ಮಹಾಸ್ವಾಮಿ ಮಾತನಾಡಿ ಮಾನವ ಕನಕ ಕಾಂಚಣಾ ಕಾಮಿನಿ ಭೂಮಿಯಲ್ಲಿ ಆಸೆಯಲ್ಲಿ ಮುಳಗಿದ್ದಾನೆ.ಶರೀಫರ ತತ್ತ್ವಪದಗಳು ವ್ಯಕ್ತಿಯ ಒಳಗೆ ಹೋದಾಗ ಬದುಕು ಸುಂದರವಾಗುವುದು ಎಂದರು. 

              ಈ ಸಂದರ್ಭದಲ್ಲಿ ಅಧ್ಯಕ್ಷತೆ ಶರೀಫ ಪಂಚಾಗ್ನಿಮಠ ಟ್ರಸ್ಟ ಉಪಾಧ್ಯಕ್ಷ ಶಂಕರಗೌಡ ಪಾಟೀಲ, ಹುಬ್ಬಳ್ಳಿ ನಿರಾಮಯ ಫೌಂಡೇಶನ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಬಾಳಿಕಾಯಿ, ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷ ಸಿ.ಡಿ.ಯತ್ನಳ್ಳಿ, ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ನಾಗಪ್ಪ ಬೆಂತೂರ, ರವಿ ಕಮಡೊಳ್ಳಿ, ಹನುಮಂತಗೌಡ್ರ ಪಾಟೀಲ, ಸಿ.ಎಸ್‌.ಬೆಟದೂರ, ಯು.ಬಿ.ಶಿರೂರ, ಹಿರೇಗೌಡ್ರ, ಶಾಮು ದೇಸಾಯಿ,ಗುರು ಬನ್ನಿಕೊಪ್ಪ, ಪ್ರೋ ಶಶಿಕಾಂತ ರಾಠೋಡ, ಸುರೇಶ ಹರಿಜನ,ಶಂಭುಲಿಂಗಪ್ಪ ಕೇರಿ, ರಮೇಶ್ ಹರಿಜನ, ಷರೀಫ್ ಮಾಕಪ್ಪನವರ,ರವಿ ಕಡಕೋಳ, ಪ್ರಭುಗೌಡ ತೆಂಬದಮನಿ,ಮಾಂತೇಶ್ ನಾಯ್ಕೋಡಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.