ಡಿ.29 ರಂದು ರಾಣೀಬೆನ್ನೂರಿನಲ್ಲಿ ಶರಣ ಸಾಹಿತ್ಯ ಸಮ್ಮೇಳನ

ಡಿ.29 ರಂದು ರಾಣೀಬೆನ್ನೂರಿನಲ್ಲಿ ಶರಣ ಸಾಹಿತ್ಯ ಸಮ್ಮೇಳನ Sharan Sahitya Sammelana to be held in Ranibennur on December 29

ರಾಣೀಬೆನ್ನೂರ  10 :  ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೊದಲನೆಯ ಹಾವೇರಿ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಡಿ.29 ರಂದು ರಾಣೀಬೆನ್ನೂರಿನಲ್ಲಿ ನಡೆಯಲಿದ್ದು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರು ಆಗಿರುವ ಸುತ್ತೂರು ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಸಾನಿಧ್ಯವಹಿಸುವರು ಎಂದು ಜಿಲ್ಲಾಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ ಹಾಗೂ ತಾಲೂಕು ಅಧ್ಯಕ್ಷೆ ರಾಜೇಶ್ವರಿ ಪಾಟೀಲ ತಿಳಿಸಿದರು. 

ರಾಣೀಬೆನ್ನೂರಿನ ನಾಗಶಾಂತಿ ಉನ್ನತಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಮ್ಮೇಳನ ಪೂರ್ವಭಾವೀ ಸಭೆಯಲ್ಲಿ ವಿವರ ನೀಡಿದ, ಹಾವೇರಿ ಜಿಲ್ಲಾ ಮಟ್ಟದ ಒಂದು ದಿನದ ಸಮ್ಮೇಳ ನಡೆಯಲಿದ್ದು ಸುತ್ತೂರು ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಸಾನಿಧ್ಯವಹಿಸುವರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ ಪಾಲ್ಗೊಳ್ಳುವರು ಎಂದು ತಿಳಿಸಿದರು.ಸಮ್ಮೇಳನದ ಸಿದ್ಧತೆಯ ಅಂಗವಾಗಿ ನಡೆದ ಸಭೆಯಲ್ಲಿ ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಚರ್ಚೆ ನಡೆಸಿ ಇದಕ್ಕಾಗಿ ಸಮೀತಿಗಳನ್ನು ರಚಿಸಲು ಚಾಲನೆ ನೀಡಲಾಯಿತು.  

ಸ್ವಾಗತ ಸಮಿತಿ ಗೌರವಾಧ್ಯಕ್ಷರನ್ನಾಗಿ ಹಿರಿಯರಾದ ವಾಸಣ್ಣ ಕುಸಗೂರ, ಅಧ್ಯಕ್ಷರಾಗಿ ಬಸವರಾಜ ಪಾಟೀಲ, ಕಾರ್ಯಾಧ್ಯಕ್ಷರಾಗಿ ಜಿ.ಜಿ.ಹೊಟ್ಟೀಗೌಡರ, ಕಾರ್ಯದರ್ಶಿಯಾಗಿ ರಾಜೇಶ್ವರಿ ಪಾಟೀಲ, ಸಹಕಾರ್ಯದರ್ಶಿಯಾಗಿ ಗಾಯತ್ರಮ್ಮ ಕುರವತ್ತೇರ, ಕೋಶಾಧ್ಯಕ್ಷರಾಗಿ ಎಸ್‌.ಬಿ.ಗುರಿಕಾರ, ಸ್ವಾಗತ ಸಮಿತಿ ಸದಸ್ಯರಾಗಿ ಎಸ್‌.ಎಚ್‌.ಪಾಟೀಲ, ಎಸ್‌.ಕೆ.ನೇಶ್ವಿ ಸೇರಿದಂತೆ ಗಣ್ಯರನ್ನು ನೇಮಿಸಲಾಯಿತು. 

ಸಭೆಯಲ್ಲಿ ಜಗದೀಶ ಮಳಿಮಠ, ಪಿ.ವಿ.ಮಠದ, ಶೀಲಾ ಮಾಕನೂರ, ಕೆ.ಎನ್‌.ಕೋರಧಾನ್ಯಮಠ, ಪಾರ್ರತಿ ಬೆನಕನಕೊಂಡ, ವೀಣಾ ಸೂರಣಗಿ, ಪ್ರಭಾಕರ ಸಿಗ್ಲಿ, ನಾಗರಾಜ ಗೋಡಿಹಾಳ, ಎಸ್‌.ಬಿ.ಗುರಿಕಾರ, ಎಸ್‌.ಜಿ.ಮಹಾನುಭಾವೀಮಠ, ವಿ.ಎಸ್‌.ಹಿರೇಮಠ, ನಿಂಗಪ್ಪ ಕರಿಗಾರ, ವಚನಶ್ರೀ ಪಾಟೀಲ, ನಿರ್ಮಲಾ ಸಾವಳಿಗಿ, ಭಾಗ್ಯಾ ಗುಂಡಗಟ್ಟಿ, ಲಲಿತಾ ಅರಳಿ, ಮಂಜುಳಾ ಪಾಟೀಲ, ಗಿರಿಜಾ ಎಡಯಾಪುರ, ಮಂಗಳಾ ಪಾಟೀಲ, ಜಯಶ್ರೀ ನೀರಲಗಿಮಠ, ಆರ್‌.ಎನ್‌. ಅಡಿಗೇರ, ಶೋಭಾ ಅಂಗಡಿ ಮೊದಲಾದವರು ಪಾಲ್ಗೊಂಡು ಮಾತನಾಡಿದರು.