ಶಾಹಿನ್ ಕಾಲೇಜ್ ಗ್ರೂಪ್ ವತಿಯಿಂದ ಕೊಪ್ಪಳ ಜಿಲ್ಲೆ ಯಲ್ಲಿಂದು ಶಿಕ್ಷ ಯಾತ್ರಾ ಕಾರ್ಯಕ್ರಮ
Shahin College Group to hold Shiksha Yatra program in Koppal district today
ಕೊಪ್ಪಳ 27: ನೋಬಲ್ ಶಾಹಿನ್ ಪಿ ಯು ಕಾಲೇಜ್ ಹೊಸಪೇಟೆ ಹಾಗೂ ಶಾಹಿನ್ ಕಾಲೇಜ್ ಗ್ರೂಪ್ ಆಫ್ ಎಜುಕೇಶನ್ ಸಂಸ್ಥೆ ವತಿಯಿಂದ ಕೊಪ್ಪಳ ನಗರದ ನೌಕರ ಭವನ್ ಸಭಾಂಗಣದಲ್ಲಿ ದಿ, 28 ರ ರವಿವಾರ ಬೆಳಿಗ್ಗೆ 10 ಗಂಟೆಗೆ ಶಿಕ್ಷ ಯಾತ್ರ ಕಾರ್ಯಕ್ರಮದ ಅಡಿಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಪ್ರೋತ್ಸಾಹ ಧನ ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಜೊತೆಗೆ ಕೌನ್ಸೆಲಿಂಗ್ ಕಾರ್ಯ ಕ್ರಮ ಏರಿ್ಡಸಲಾಗಿದೆ, ಅದೇ ದಿನ ಮಧ್ಯಾಹ್ನ 2:30 ಗಂಟೆಗೆ ಜಿಲ್ಲೆಯ ಗಂಗಾವತಿ ನಗರದ ಅಗರಿ ಸ್ಪೋರ್ಟ್ಸ ಅಸೋಸಿಯೇಷನ್ ಹಾಲ್ನಲ್ಲಿ ಕಾರ್ಯಕ್ರಮ ಏರಿ್ಡಸಲಾಗಿದೆ ಇದರಲ್ಲಿ ಕ್ಯಾರಿಯರ್ ಕೌನ್ಸಿಲರ್ ಅಂಡ್ ಲೈಫ್ ಕೋಚ್ ಸಂಪನ್ಮೂಲ ವ್ಯಕ್ತಿ ಅತಿಕ ಉರ್ ರಹಿಮಾನ್ ರವರು ವಿಶೇಷ ತರಬೇತಿ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಿದ್ದಾರೆ,
ಸದರಿ ಮಹತ್ವದ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಆಸಕ್ತ ವಿದ್ಯಾರ್ಥಿಗಳು ಮತ್ತು ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಪೂರ್ಣ ಮಾಹಿತಿ ಪಡೆಯುವುದರ ಜೊತೆಗೆ ಶಾಹಿನ್ ಕಾಲೇಜ್ ಶಿಕ್ಷಣ ಸಂಸ್ಥೆ ಹಾಗೂ ಇತರ ಸಂಸ್ಥೆಗಳಿಂದ ಸಿಗಬಹುದಾದ ಸಹಾಯ ಸೌಕರ್ಯ ಮತ್ತು ಸ್ಕಾಲರ್ ಶಿಪ್ ಪ್ರೋತ್ಸಾಹ ಧನ ಸಹಾಯಧನ ಪಡೆದುಕೊಂಡು ಉತ್ತಮ ಶಿಕ್ಷಣ ಪಡೆದು ತಮ್ಮ ಭವಿಷ್ಯ ಉಜ್ವಲ ಗೊಳಿಸಿಕೊಳ್ಳಲು ಸದರಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಅಲ್ಪಸಂಖ್ಯಾತ ಸಮುದಾಯದ ಹಿರಿಯ ನಾಯಕ ಅಮ್ಜದ್ ಪಟೇಲ್ ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 