ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಯೋಗ ಸ್ಪರ್ಧೆಗೆ ಏಳು ವಿದ್ಯಾರ್ಥಿಗಳು ಆಯ್ಕೆ
Seven students selected for All India Inter University Yoga Competition
ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಯೋಗ ಸ್ಪರ್ಧೆಗೆ ಏಳು ವಿದ್ಯಾರ್ಥಿಗಳು ಆಯ್ಕೆ
ಕೊಪ್ಪಳ 24: ಅಖಿಲ ಭಾರತಅಂತರ್ ವಿಶ್ವವಿದ್ಯಾಲಯ ಪುರುಷ ಮತ್ತು ಮಹಿಳೆಯರ ಯೋಗ ಸ್ಪರ್ಧೆಯು ದಿನಾಂಕ 24-12-2024 ರಿಂದ 27-12-2024 ರವರೆಗೆ ಓಡಿಸ್ಸಾದ ಕೆ.ಐ.ಟಿ.ಟಿ. ವಿಶ್ವವಿದ್ಯಾಲಯ, ಭುವನೇಶ್ವರದಲ್ಲಿ ಜರುಗಿದೆ. ಸದರಿ ಪಂದ್ಯಾಟಕ್ಕೆ ಕೊಪ್ಪಳದ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿ ಕು.ಕಿರಣಕುಮಾರ, ಬಿ.ಕಾಂ ಅಂತಿಮದ ವರ್ಷದ ವಿದ್ಯಾರ್ಥಿಕು.ಅನಿತ, ಮತ್ತು ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕು.ಸೌಮ್ಯ ಸಂಗಪ್ಪ, ಕು. ವರ್ಷಾ ಬಿ., ಕು. ನಾಗವೇಣಿ ಎ, ಕು.ಚಂದ್ರಿಕಾ, ಕು.ರಶ್ಮಿ ಕೆ.ಇವರುಗಳು ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ತಂಡದ ಆಟಗಾರರಾಗಿ ಆಯ್ಕೆಯಾಗಿರುತ್ತಾರೆ.
ಸದರಿ ಏಳು ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಡಾ.ಆರ್ ಮರೇಗೌಡ ಮತ್ತು ಗವಿಸಿದ್ಧೇಶ್ವರ ಟ್ರಸ್ಟಿನ ಎಲ್ಲಾ ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರಾದ ಡಾ.ಚನ್ನಬಸವ, ಕಾಲೇಜಿನದೈಹಿಕ ನಿರ್ದೇಶಕರಾದ ವಿನೋದ ಸಿ.ಮುದಿನಬಸನಗೌಡರ ಹಾಗೂ ಕಾಲೇಜಿನ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು 