ಇಟಗಿ ನಾಗಚೌಡೇಶ್ವರಿ ಕ್ಷೇತ್ರದಲ್ಲಿ ಎಳ್ಳು ಅಮಾವಾಸ್ಯೆ ಪೂಜೆ
Sesame New Moon Puja in Itagi Nagachoudeshwari Constituency
ಇಟಗಿ ನಾಗಚೌಡೇಶ್ವರಿ ಕ್ಷೇತ್ರದಲ್ಲಿ ಎಳ್ಳು ಅಮಾವಾಸ್ಯೆ ಪೂಜೆ
ಕೊಪ್ಪಳ 28: ನಾಗದೇವರು, ನಾಗಚೌಡೇಶ್ವರಿ ಅಮ್ಮನವರ ಕ್ಷೇತ್ರ, ಇಟಗಿಯಲ್ಲಿ (ಕೂಕನೂರು) ತಾರೀಖು 30ನೇ ಡಿಸೆಂಬರ್ 2024ರ ಸೋಮವಾರ ಎಳ್ಳು (ಪುಷ್ಯ) ಅಮಾವಾಸ್ಯೆದಂದು ಬೆಳಿಗ್ಗೆ 11 ರಿಂದ 4 ರವರೆಗೆ ಪೂಜೆ ಕ್ರೋಧಿ ನಾಮ ಸಂವತ್ಸರ, ಮಾರ್ಗಶಿರ ಮಾಸೆ ಹೇಮಂತ ಋತು, ದಕ್ಷಿಣಾಯಣ ಕೃಷ್ಣ ಪಕ್ಷ, ಡಿ. 30 ರಂದು ಸೋಮವಾರದಂದು “ಅಮಾವಾಸ್ಯೆ ಪೂಜೆ”ಗೆ, ತಾವೆಲ್ಲರು ಸಹ-ಕುಟುಂಬ ಸಮೇತ ಆಗಮಿಸಿ, ನಾಗದೇವರು, ನಾಗಚೌಡೇಶ್ವರಿ ಅಮ್ಮನವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕ್ಷೇತ್ರ ಉಸ್ತುವಾರಿ ರಮೇಶ ಸುರ್ವೆ ತಿಳಿಸಿದ್ದಾರೆ.
ಪ್ರತಿ ತಿಂಗಳ ಅಮಾವಾಸ್ಯೆಯ ದಿನ ಮಾತ್ರ, ದೇವರ ದರ್ಶನ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ. ಉಳಿದ ದಿನಗಳಲ್ಲಿ ಹೊರಗಿನಿಂದಲೇ ದರ್ಶನ ಮತ್ತು ಪೂಜೆ ಮಾಡಿಕೊಳ್ಳಬೇಕೆಂದು, ಕಡ್ಡಾಯವಾಗಿ ಒಳಗಡೆ ಕಟ್ಟೆ ಹತ್ತಿ ಹೋಗಬಾರದೆಂದು ಮನವಿ. ಕೆಲವರು ಮಕ್ಕಳನ್ನು ಒಳಗೆ ಕಳುಹಿಸಿ ಪೂಜೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ದಯಮಾಡಿ ಹಾಗೆ ಮಾಡದೆ ಹೊರಗಿನಿಂದಲೇ ಪೂಜೆ ಮಾಡಿ ನಮಸ್ಕರಿಸಿ, ಅಮಾವಾಸ್ಯೆ ದಿನ ಮಾತ್ರ ವಿಶೇಷ ದರ್ಶನ ನೀಡುವ ಕ್ಷೇತ್ರ, ನಡೆದುಕೊಳ್ಳುವವರು ಸಂಕಲ್ಪ ಮಾಡಿ 5 ಅಮಾವಾಸ್ಯೆ ಪೂಜೆ ಪೂರೈಸಬೇಕು.
ಈ ಬಾರಿ ಇಟಗಿಯಲ್ಲಿರುವ ದೇವಾಲಯ ಚಕ್ರವರ್ತಿ ಮಹದೇವ ದೇಗುಲದ “ಮಹೇಶ್ವರ ಜಾತ್ರೆ” ನಡೆಯಲಿದೆ, ಡಿ. 30ರಂದು ಸಂಜೆ 4.30ಕ್ಕೆ ಮಹಾರಥೋತ್ಸವ ನಡೆಯಲಿದ್ದು, ಭಕ್ತಾದಿಗಳು ದೇವರ ದರ್ಶನ ಮತ್ತು ಶಿಲ್ಪ ವೈಭವನ್ನು ಕಣ್ತುಂಬಿಕೊಳ್ಳಿ, ಕುಟುಂಬ ಸಮೇತ ಆಗಮಿಸಲು ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 