ವಿಕಲಚೇತನ ಮಕ್ಕಳ ಸೇವೆ ದೇವರ ಸೇವೆಗೆ ಸಮ: ಹನುಮಂತಪ್ಪ

ವಿಕಲಚೇತನ ಮಕ್ಕಳ ಸೇವೆ ದೇವರ ಸೇವೆಗೆ ಸಮ: ಹನುಮಂತಪ್ಪ Serving disabled children is equal to serving God: Hanumanthappa

                ಕೊಪ್ಪಳ 09:  ವಿಕಲಚೇತನ ಮಕ್ಕಳ ಸೇವೆಯನ್ನು ಮಾಡುವುದು ದೇವರ ಸೇವೆಯನ್ನು ಮಾಡಿದಷ್ಟು ಶ್ರೇಷ್ಠವಾದದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಹನುಮಂತಪ್ಪ ಹೇಳಿದರು. ಅವರು ನಗರದ ಉರ್ದು ಸರ್ಧಾರಗಲ್ಲಿಯಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನ ಮಕ್ಕಳ ವೈದ್ಯಕೀಯ ತಪಾಸಣೆಯ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ,ವಿಕಲಚೇತನ ಮಕ್ಕಳಲ್ಲಿ ಇರುವ ಅವರ ಅಂಗವೈಕ್ಯತೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುವ ಮೂಲಕ ಅವರನ್ನು ಗುಣಪಡಿಸುವ ನಿಟ್ಟಿನಲ್ಲಿ ಸರಕಾರವು ಇಂತಹ ವೈದ್ಯಕೀಯ ತಪಾಸಣೆಯ ಶಿಬಿರವನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

                 ವಿಕಲಚೇತನ ಮಕ್ಕಳ ಪಾಲಕರು-ಪೋಷಕರು ಆ ಮಕ್ಕಳ ಪಾಲನೆ ಹಾಗೂ ಪೋಷಣೆ ಮಾಡುವ ಜೊತೆ ಜೊತೆಯಲ್ಲಿ ಅವರಿಗೆ ಉತ್ತಮ ಶಿಕ್ಷಣ ಕೊಡಿಸುವ ಕಾರ್ಯ ಮಾಡಬೇಕು.ಅಲ್ಲದೇ ಪಾಲಕರು ವಿಕಲಚೇತನ ಮಕ್ಕಳ ಸೇವೆಯನ್ನು ಮಾಡುವುದರಿಂದ ದೇವರ ಸೇವೆಯನ್ನು ಮಾಡಿದಂತಾಗುತ್ತದೆ ಎಂದು ಹೇಳಿದರು.  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶರಣಬಸವನೌಡ ಪಾಟೀಲ ಮಾತನಾಡಿ,ವಿಕಲಚೇತನರು ತಮ್ಮಲ್ಲಿ ಇರುವ ಅಂಗವೈಕಲ್ಯತೆಯ ಕಡೆಗೆ ಹೆಚ್ಚು ಗಮನವನ್ನು ಹರಿಸದೇ ವಿಶಾಲವಾದ ಮನೋಭಾವವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು. 

              ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರ​‍್ಪ ಅಂಡಗಿ ಚಿಲವಾಡಗಿ ಮಾತನಾಡುತ್ತಾ,ವಿಕಲಚೇತನರು ತಾವು ವಿಕಲಚೇತನರು ಎಂಬ ಮನೋಭಾವನ್ನು ಇರಬಾರದು.ಅಂಗವಿಕಲತೆಯನ್ನು ಯಾರು ಕೂಡಾ ಶಾಪವಾಗಿ ಪರಿಗಣಿಸದೇ ಅದನ್ನು ವರವಾಗಿ ಪರಿಗಣಿಸಬೇಕು.ಪಾಲಕರಾದವರು ತಮ್ಮ ಮಕ್ಕಳ ಅಂಗವೈಕಲ್ಯತೆಗೆ ಸಂಬಂಧಿಸಿದಂತೆ ಅನೇಕ ಶಾಲೆಗಳನ್ನು ಸರಕಾರ ಪ್ರಾರಂಭ ಮಾಡಿದ್ದು,ಅಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಕೆಲಸವಾಗಬೇಕಿದೆ.ಅಲ್ಲದೇ ವಿಕಲಚೇತನರಿಗೆ ಇರುವ ಸೌಲಭ್ಯಗಳ ಕುರಿತು ಇನ್ನೂ ಹೆಚ್ಚಿನ ರೀತಿಯ ಜಾಗೃತಿ ಹಾಗೂ ಪ್ರಚಾರದ ಅಗತ್ಯವಿದೆ.ಈ ಕಾರ್ಯವನ್ನು ಇಲಾಖೆ ಮಾಡಬೇಕಿದೆ.ಸರಕಾರದಿಂದ ದೊರೆಯುವ ಸೌಲಭ್ಯಗಳು ಅರ್ಹರಿಗೆ ಸಿಗುವಂತಾಗಬೇಕಿದೆ ಎಂದು ಹೇಳಿದರು. ಐ.ಈ.ಆರ್‌.ಟಿ.ಶಿಕ್ಷಕರಾದ ಬಲರಾಮ ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. 

              ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹದ ತಾಲೂಕ ಅಧಿಕಾರಿಗಳಾದ ಮಲ್ಲಿಕಾರ್ಜುನ ಗುಡಿ,ಕ್ಷೇತ್ರ ಸಮನ್ವಯಾಧಿಕಾರಿಗಳಾದ ಸೈಯದ ಹುಸೇನ,ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಹೊಳಿಬಸಯ್ಯಾ,ನಫಿಜಖಾನ,ಬಸವರಾಜ ಕಮಲಾಪುರ,ಮಲ್ಲಿಕಾರ್ಜುನ ಪೂಜಾರ,ಮುಂತಾದವರು ಹಾಜರಿದ್ದರು. ಐ.ಈ.ಆರ್‌.ಟಿ.ಶಿಕ್ಷಕರಾದ ಬಸವನಗೌಡ ಪಾಟೀಲ ಸ್ವಾಗತಿಸಿ,ಲಕ್ಷ್ಮಪ್ಪ ಪಲ್ಲೇದ ವಂದಿಸಿದರು.