ಅಂಧಮಕ್ಕಳ ಸೇವೆ ದೇವರ ಸೇವೆ ಮಾಡಿದಂತೆಇಂಡಿಯನ್ ಓವರ್‌ಶಿಸ್ ಬ್ಯಾಂಕ್ ವ್ಯವಸ್ಥಾಪಕ ಪ್ರತಾಪ್‌ಸಿಂಗ್

ಅಂಧಮಕ್ಕಳ ಸೇವೆ ದೇವರ ಸೇವೆ ಮಾಡಿದಂತೆಇಂಡಿಯನ್ ಓವರ್‌ಶಿಸ್ ಬ್ಯಾಂಕ್ ವ್ಯವಸ್ಥಾಪಕ ಪ್ರತಾಪ್‌ಸಿಂಗ್ Serving blind children is like serving God: Indian Overseas Bank Manager Pratap Singh


         ರಾಣೇಬೆನ್ನೂರು 14: ಅಂಧ ಮಕ್ಕಳ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ ಕೆಲವು ಸಂಸ್ಥೆಗಳು ಇಂತಹ ಅಂಧ ಮಕ್ಕಳ ಬದುಕೊಟ್ಟಿಕೊಡಲು ತೋರುತ್ತಿರುವ ಪ್ರೀತಿ, ಅವಿರತ ಶ್ರಮ ನಿಜವಾಗಲು ದೇವರು ಮಾಡಬೇಕಾದಂತ ಕಾರ್ಯಗಳಾಗಿವೆ. ಇದೊಂದು ಅವಿಸ್ಮರಣೀಯ ಸೇವೆಯಂದು ರಾಣೇಬೆನ್ನೂರು ಶಾಖೆಯ ಇಂಡಿಯನ್ ಓವರ್‌ಶಿಸ್ ಬ್ಯಾಂಕಿನ ವ್ಯವಸ್ಥಾಪಕರಾದ  ಪ್ರತಾಪ್‌ಸಿಂಗ್ ಹೇಳಿದರು.  ಅವರು ಇತ್ತೀಚೆಗೆ ನಗರದ ಸಿದ್ದೇಶ್ವರ ನಗರದಲ್ಲಿರುವ ‘ಅಂಧರ ಜೀವ ಬೆಳಕು’ ಸಂಸ್ಥೆಯಲ್ಲಿ ಇಂಡಿಯನ್ ಓವರ್‌ಶಿಸ್ ಬ್ಯಾಂಕ್ ಸ್ಥಾಪನೆಗೊಂಡು ‘90’ ವರ್ಷ ಪೂರೈಸಿದ ನಿಮಿತ್ಯ ಹಮ್ಮಿಕೊಂಡ ಸಂಭ್ರಮದ ಕಾರ್ಯಕ್ರಮವನ್ನು ಅಂಧ ಮಕ್ಕಳಿಗೆ ಸಿಹಿ ತಿನಿಸುವ ಮೂಲಕ ಆಚರಿಸಿ ಮಕ್ಕಳೆದರು ಸಂತಸ ಹಂಚಿಕೊಂಡು ಮಾತನಾಡಿದ ಅವರು ಈ ಸ್ಪರ್ಧಾತ್ಮಕ ಬ್ಯಾಂಕಿಂಗ್ ಯುಗದಲ್ಲಿ ಸೇವೆಯಲ್ಲಿ ಮುಂಚುಣಿಯಲ್ಲಿರುವ ನಮ್ಮ ಇಂಡಿಯನ್ ಓವರ್‌ಶಿಸ್ ಬ್ಯಾಂಕ್ ಸರ್ಕಾರಿ ಸಾಮ್ಯದ ಬ್ಯಾಂಕಾಗಿದ್ದು 1937 ರ ಪೆಬ್ರುವರಿ 10 ರಂದು ತಮಿಳನಾಡು ಮೂಲಕ ಶ್ರೀಯುತ ಎಂ. ಚಿದಂಬರಂ ಚಿಟ್ಟಿಯಾರ ಎಂಬ ಮಹಾನ್ ಚೇತನದಿಂದ ಆರಂಭಗೊಂಡ ಈ ಬ್ಯಾಂಕ್ ಆಗಿನ ಮದ್ರಾಸ್ (ಈಗಿನ ಚನೈನ) ಸ್ಥಾಪಿಸಿತು.

         ಸಾಗರದಾಚೆಯ ದೇಶಗಳೊಂದಿಗೆ ಶಿಸ್ತುಬದ್ಧ ವ್ಯವಹಾರಕ್ಕೆ ಅತೀ ಅವಶ್ಯಕವಾಗಿ ಬೇಕಾಗಿದ್ದ ಬ್ಯಾಂಕಿಗ್ ವ್ಯವಸ್ಥೆಗೆ ಶಾಖೆಗಳನ್ನು ಹೊಂದಿ ತನ್ನ ವ್ಯಾಪಾರ ವಹಿವಾಟನ್ನು ಗ್ರಾಹಕರ ಅತೀಯಾದ ವಿಶ್ವಾಸದೊಂದಿಗೆ ಸ್ಥಾಪನೆ ಮೂಲಕ ನಾಂದಿ ಹಾಡಿತು. ಇಂದು ದೇಶಾದ್ಯಂತ ಹಾಗೂ ವಿದೇಶಗಳಲ್ಲೂ ಶಾಖೆಗಳನ್ನು ಹೊಂದಿ ತನ್ನ ವ್ಯಾಪರ ವಹಿವಾಟನ್ನು ಬೆರಗುಗೊಳಿಸುವ ರೀತಿಯಲ್ಲಿ ವಿಸ್ತರಿಸಿದೆ. ಬ್ಯಾಂಕುಗಳ ರಾಷ್ಟ್ರೀಕರಣದ ನಂತರ ಸಂಪೂರ್ಣ ಸರ್ಕಾರಿ ಸಾಮ್ಯದ ಬ್ಯಾಂಕಾಗಿ ಸೇವೆ ನೀಡುತ್ತಾ ಜನ ಸಾಮಾನ್ಯರ ಮನ್ನಣೆಗಳಿಸಿ ಇಂದು ತುಂಬು ‘90’ ವರ್ಷ ಪೂರೈಸಿದೆ ಎಂದರಲ್ಲದೆ ಈ ಸಂಭ್ರಮಾಚಾರಣೆಯನ್ನು ನಾವಿಂದು ದೇವರ ಸಮಾನರಾದ ಈ ಅಂಧ ಮಕ್ಕಳೊಂದಿಗೆ ಆಚರಿಸುತ್ತಿರುವುದು ತುಂಬಾ ಹೆಮ್ಮೆ ಎನಿಸುತ್ತಿದೆ ಎಂದರು.  ಈ ಸಂದರ್ಭದಲ್ಲಿ ಸಂಸ್ಥೆಯ ನಾಗನಗೌಡ ಡಿ. ಬೆಳ್ಳೊಳ್ಳಿ, ಮಯೂರ ಪಾಲಿವಾಲ್,  ಶೃತಿ ಮತ್ತು ಬ್ಯಾಂಕ್ ಸಹಾಯಕ ಸಿಬ್ಬಂದಿ ವಿನೋದಕುಮಾರ, ಕುಮಾರ ಪಾಲಂಕರ ಹಾಗೂ ಮಲ್ಲಿಕಾರ್ಜುನ ದೀಪಾವಳಿ, ದಿನೇಶ ಪಾಟೀಲ ಉಪಸ್ಥಿತರಿದ್ದರು. 


‘ಅಂಧರ ಜೀವ ಬೆಳಕು’ ಸಂಸ್ಥೆ ಇಂಡಿಯನ್ ಓವರ್‌ಶಿಸ್ ಬ್ಯಾಂಕ್ 90ನೇ ವಾರ್ಷಿಕೋತ್ಸವ 1937 ಸ್ಥಾಪನೆ