ಸೇವಾ ಅಂದರೆ ಸಂಸ್ಥೆ ವಿಶ್ವ ವಿಕಲಚೇತನರ ದಿನಾಚರಣೆ. ಅಂಗವಿಕಲತೆ ಶಾಪವೂ ಅಲ್ಲ ಪಾಪವೂ ಅಲ್ಲ

ಸೇವಾ ಅಂದರೆ ಸಂಸ್ಥೆ ವಿಶ್ವ ವಿಕಲಚೇತನರ ದಿನಾಚರಣೆ. ಅಂಗವಿಕಲತೆ ಶಾಪವೂ ಅಲ್ಲ ಪಾಪವೂ ಅಲ್ಲ Service means organization World Disabled Day. Disability is neither a curse nor a sin

               ರಾಣೆಬೆನ್ನೂರು 08 :  ಸಮಾಜದಲ್ಲಿ ಪ್ರತಿಯೊಬ್ಬ ಮಾನವ ಜೀವಿಗೆ ಸಮಾನತೆಯಿಂದ ಬದುಕುವ ಹಕ್ಕಿದೆ. ಅದಕ್ಕಾಗಿ ವಿಕಲಚೇತನರು ತಮ್ಮ ಜೀವನದಲ್ಲಿ ಯಾವ ಕಾರಣಕ್ಕೂ ಮಡಿವಂತಿಕೆ ತೋರಬಾರದು ಅಂಗ ವೈಕಲ್ಲೇತೆ ಶಾಪವು  ಅಲ್ಲ ಪಾಪವೂ ಅಲ್ಲ ತಪ್ಪು ಕಲ್ಪನೆ ಯಾರು ಇಟ್ಟುಕೊಳ್ಳಬಾರದು ಇದೆಲ್ಲವೂ ಜೈವಿಕ ಸಂಬಂಧಿಸಿದಂತೆ ಇರುವ ಪ್ರಕ್ರಿಯೆ ಅಷ್ಟೇ ಎಂದು ಸರಕಾರಿ ಸಹಾಯಕ ಅಭಿಯೋಜಕರಾದ ಕವಿತಾ ಎನ್‌. ಜೆ. ಹೇಳಿದರು. ಅವರು, ಇಲ್ಲಿನ ಮಾರುತಿ ನಗರದ ಸೇವಾ ಅಂದರೆ ಸಂಸ್ಥೆಯ ರೇಣುಕಾ ಎಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆ, ಶ್ರವಣ  ದೋಷವುಳ್ಳ ಮಕ್ಕಳು ತಾಯಂದಿರ ಮಾಹಿತಿ ತರಬೇತಿ ಕೇಂದ್ರ, ಶಕ್ತಿ ಸದನ  ( ಉಜ್ವಲ) ಮಹಿಳೆ ಮತ್ತು ಮಕ್ಕಳ ಮಾರಾಟ ಸಾಗಾಣಿಕೆ ತಡೆಗಟ್ಟುವ ಯೋಜನೆ ಮತ್ತು ತಾಲೂಕ ಕಾನೂನು ಸೇವಾ ಸಮಿತಿ- ಕಾನೂನು ಅರಿವು ನೆರವು ಹಾಗೂ ವಕೀಲರ ಸಂಘವು ಆಯೋಜಿಸಿದ್ದ ಅಂತರರಾಷ್ಟ್ರೀಯ ವಿಕಲಚೇತನಡಿ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

               ವಿಕಲಚೇತನರು ಚೇತನರಲ್ಲಿ ಚೇತನರು ಅವರಲ್ಲಿ ವಿಶೇಷವಾದ ಚೈತನ್ಯವಿದೆ ಚೈತನ್ಯವಂತಕೆ ನಿರಂತರವಾಗಿ ಬೆಳೆಸುವ ಮನಸ್ಸು ಮಾಡಬೇಕು ಅಷ್ಟೇ. ಅವರಿಂದಲೇ ಇಂದು ಮಟ್ಟದಲ್ಲಿ  ಸಾಧನೆ ಸಾಧ್ಯವಾಗಿದೆ ಎನ್ನುವುದು ನಮ್ಮ ದೇಶದಲ್ಲಿ ಎಲ್ಲೆಡೆಯೋ ಎದ್ದು ಕಾಣುತ್ತಿರುವುದು ಸುಳ್ಳಲ್ಲ. ಎಂದರು. ಮುಖ್ಯ ಅತಿಥಿಯಾಗಿದ್ದ ವಕೀಲರ ಸಂಘದ ಅಧ್ಯಕ್ಷ ಬಿ. ಹೆಚ್‌. ಬುರಡಿಕಟ್ಟಿ ಅವರು, ತಾಲೂಕ  ಕಾನೂನು ಸಮಿತಿಯು, ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಕುರಿತು, ತನ್ನ ಯೋಜನೆಯಲ್ಲಿ  ಅರಿವು ನೆರವು ಮತ್ತು ಕಾನೂನು ಜಾಗೃತಿ ಮೂಡಿಸುತ್ತದೆ. ಎಲ್ಲ ಕಾರ್ಯಕ್ರಮಗಳಿಗೂ ವಕೀಲರ ಸಂಘವು  ಎಲ್ಲ ರೀತಿಯಿಂದಲೂ ಸೇವೆಗೆ ಸದಾ ಬದ್ಧವಾಗಿದೆ ಎಂದರು. ಕಾನೂನಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿರಲಿ, ಯಾರೇ ಆಗಲಿ ಸಂಪರ್ಕಿಸಬಹುದಾಗಿದೆ ಎಂದರು.        

              ಅಧ್ಯಕ್ಷತೆ ವಹಿಸಿದ್ದ ಸೇವಾ ಅಂದರೆ ಸಂಸ್ಥೆಯ ಕನ್ನಡ ಸಂಸ್ಥೆಯ ಅಧ್ಯಕ್ಷ ಎಚ್‌. ಆರ್‌. ಶಿವಕುಮಾರ, ಅವರು ಸೇವಾ ಅಂದರೆ ಸಂಸ್ಥೆಯಲ್ಲಿ, ಅಂದ ಮತ್ತು ಕಿವುಡ ಅಂಗವಿಕಲರ ಮಕ್ಕಳ ಸೇವೆಯಲ್ಲಿ ತನ್ನನ್ನೇ ತಾನು ತೊಡಗಿಸಿಕೊಂಡು, ಸಮಾಜದ ಒಂದು ಭಾಗವಾಗಿ  ತನ್ನ ಕರ್ತವ್ಯ ಮೇಲೆಯುತ್ತಿದೆ ಎಂದರು.  ಅಂದು 20 ವರ್ಷಗಳ ಹಿಂದೆ     ರಾಣೆಬೆನ್ನೂರಿನ ಹಾಗೂ ಜಿಲ್ಲೆಯ  ಜನತೆ ನೀಡಿರುವ ಸಹಾಯ ಸಹಕಾರ ಸಂಸ್ಥೆಯು ಮರೆಯುವಂತಿಲ್ಲ. ಮಕ್ಕಳ ಸೇವೆಯೇ ಧ್ಯೇಯ  ವಾಕ್ಯವಾಗಿಟ್ಟುಕೊಂಡು ನನ್ನ ಕೆಲಸ ನಿರ್ವಹಿಸುತ್ತಿದೆ ಎಂದು ಸಂಸ್ಥೆಯ ಪ್ರಗತಿಯನ್ನು ವಿವರಿಸಿ ಮಾತನಾಡಿದರು.

               ಮಕ್ಕಳು ಮತ್ತು ಮಹಿಳೆ ಹಾಗೂ ಸಾರ್ವಜನಿಕರು ಕಾನೂನು ಬಳಕೆ ಕುರಿತು ನ್ಯಾಯವಾದಿ ಜಯಶ್ರೀ ಎಚ್‌.ಆರ್‌. ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿಕಲಚೇತನ ಮಕ್ಕಳು   ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿ  ತಮ್ಮ  ಅಪ್ರತಿಮ ಸಾಧನೆ ಮೆರೆದ ಸಂಸ್ಥೆಯ ಮಕ್ಕಳಿಗೆ ಸನ್ಮಾನಿಸಿ, ಪದಕ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಸಂಸ್ಥೆಯ ಕಾರ್ಯಕ್ರಮಾಧಿಕಾರಿ  ಶಿವರಾಜ್ ಎನ್‌. ಜಿ, ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ನಡೆದ ವಿಕಲಚೇತನರ ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆಗಳು ನೆರೆದ ಪಾಲಕರ ಮತ್ತು ಮಕ್ಕಳ ಗಮನ ಸೆಳೆದವು.