ಸರ್ವರ್ ಸಮಸ್ಯೆಯಿಂದ ಪಡಿತರದಾರರ ಪರದಾಟ: ಪರಿಹರಿಸಲು ರೇಷನ್ ಅಂಗಡಿ ಮಾಲೀಕರ ಆಗ್ರಹ
Server issue causing ration vendors to struggle: Ration shop owners demand solution
ಬೆಳಗಾವಿ 25: ಈ ತಿಂಗಳಿನಿಂದ ಸರ್ವರ್ ಸಮಸ್ಯೆ ಈಗ ತೀವ್ರವಾಗಿದ್ದು ಪಡಿತರ ವಿತರಣೆಗೆ ತೊಂದರೆಯಾಗುತ್ತಿದೆ. ಸರ್ವರ್ ಸಮಸ್ಯೆಯಿಂದ ಬಡವರಿಗೆ ಪಡಿತರ ಸಿಗದೆ ಪರದಾಡುವಂತಾಗಿದೆ. ಆದ್ದರಿಂದ ಸರ್ವರ್ ಸಮಸ್ಯೆಯನ್ನು ನೀಗಿಸಿ ಬಡ ಪಡಿತರದಾರರಿಗೆ ಪಡಿತರ ದೊರೆಯುವಂತೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲೆಯ ನ್ಯಾಯಬೆಲೆ ಅಂಗಡಿ ಮಾಲೀಕರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.ಈ ತಿಂಗಳು ಆರಂಭದಿಂದಲೇ ನ್ಯಾಯಬೆಲೆ ಅಂಗಡಿಯ ಸರ್ವರ್ ಸಮಸ್ಯೆ ಅತ್ಯಂತ ಗಂಭೀರವಾಗಿದೆ. ನ್ಯಾಯ ಬೆಲೆ ಅಂಗಡಿ ಮುಖಾಂತರ ಬಡವರಿಗೆ ದವಸ ಧಾನ್ಯ ಸಿಗದಾಗಿದೆ. ಥಂಬ್ ಪಡೆದುಕೊಳ್ಳಲು ಅತ್ಯಂತ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದು, ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳುವವರು ಬೆಳಿಗ್ಗೆಯಿಂದ ಸಂಜೆಯವರೆಗೆ ನ್ಯಾಯ ಬೆಲೆ ಅಂಗಡಿಯ ಎದುರು ಸರತಿ ಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿ ಎದುರಾಗಿದೆ.
ನ್ಯಾಯ ಬೆಲೆ ಅಂಗಡಿಕಾರರಿಗೆ ಪಡಿತರದಾರರು ಹಿಡಿಶಾಪ ಹಾಕುವಂತಾಗಿದೆ. ಜಿಲ್ಲೆಯಲ್ಲಿ ಶೇ. 40 ರಷ್ಟು ಅಕ್ಕಿಯನ್ನು ವಿತರಿಸಲಾಗಿದ್ದು, ಶೇ. 60 ರಷ್ಟು ಅಕ್ಕಿಯನ್ನು ವಿತರಿಸಬೇಕಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಮೇ ಮುಗಿಯುತ್ತದೆ. ಆಹಾರ ಇಲಾಖೆಯೂ ಓರ್ವ ವ್ಯಕ್ತಿಯಿಂದ ಎರಡು ಬಾರಿ ಥಂಬ್ ಪಡೆಯುವ ವ್ಯವಸ್ಥೆಯೂ ಅನ್ಯಾಯಕಾರಕವಾಗಿದೆ. ಸರ್ವರ್ ಹಿನ್ನೆಲೆ ಒಂದೇ ಬಾರಿ ಥಂಬ್ ಬರುವುದು ದುಸ್ತರವಾಗಿದ್ದು, ಮುಂದಿನ ತಿಂಗಳಿನಿಂದ ಕೇವಲ ಒಂದೇ ಬಾರಿ ಥಂಬ್ ಪಡೆಯುವ ಅನುಮತಿ ನೀಡುವುದರೊಂದಿಗೆ ಸರ್ವರ್ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು. 60 ವರ್ಷ ಮೀರಿದ ನ್ಯಾಯ ಬೆಲೆ ಅಂಗಡಿ ಮಾಲಿಕರು ಮೃತಪಟ್ಟರೆ ಅವರ ಕುಟುಂಬ ಸದಸ್ಯರಿಗೆ ವಾರಸಾ ಆಧಾರದ ಮೇಲೆ ಲೈಸನ್ಸ ನೀಡುವ ವ್ಯವಸ್ಥೆ ಸರಳಿಕರಣಗೊಳಿಸಬೇಕು ಎಂದು ರಾಜಶೇಖರ್ ತಳವಾರ ಅವರು ಆಗ್ರಹಿಸಿದರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 