ರಾಷ್ಟ್ರೀಯ ಕಾಂಗ್ರೆಸ್ ಕಾನೂನು ಸಮಿತಿ ಗೆ ಹಿರಿಯ ನ್ಯಾಯವಾದಿ ಆಸಿಫ ಅಲಿ ನೇಮಕ

ರಾಷ್ಟ್ರೀಯ ಕಾಂಗ್ರೆಸ್ ಕಾನೂನು ಸಮಿತಿ ಗೆ  ಹಿರಿಯ ನ್ಯಾಯವಾದಿ ಆಸಿಫ ಅಲಿ ನೇಮಕ Senior lawyer Asif Ali appointed to National Congress Law Committee

  ಕೊಪ್ಪಳ 5:   ಎ ಐ ಸಿ ಸಿ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಅಖಿಲ ಭಾರತ ಕಾನೂನು ಮಾನವ ಹಕ್ಕುಗಳು ಹಾಗೂ ಆರ್ಟಿಐ ವಿಭಾಗ ರಾಷ್ಟ್ರೀಯ ಸಮಿತಿಗೆ ಹಿರಿಯ ಸದಸ್ಯರಾಗಿ ಕೊಪ್ಪಳದ ಹಿರಿಯ ನ್ಯಾಯವಾದಿ ಎಸ್ ಆಸೀಫ್ ಅಲಿ ನೇಮಕಗೊಂಡಿದ್ದಾರೆ, ಎಐಸಿಸಿ ರಾಷ್ಟ್ರೀಯ ಕಾಂಗ್ರೆಸ್ ಅಖಿಲ ಭಾರತ ಕಾನೂನು ಮಾನವ ಹಕ್ಕುಗಳು ಹಾಗೂ ಆರ್ಟಿಐ ಗಳ ವಿಭಾಗದ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ, ಅಭಿಷೇಕ್ ಸಿಂಗ್ವಿ ರವರು ಈ ನೇಮಕಾತಿ ಆದೇಶ ಹೊರಡಿಸಿದ್ದಾರೆ, ಕೊಪ್ಪಳದ ಹಿರಿಯ ನ್ಯಾಯವಾಗಿ ಎಸ್, ಆಸಿಫ್ ಅಲಿ ಅವರು ಈ ಹಿಂದೆ ರಾಯಚೂರು ಜಿಲ್ಲೆಯ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ನಂತರ ಸುಮಾರು ಏಳು ವರ್ಷಗಳ ಕಾಲ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ತದನಂತರ ಸುಮಾರು ಐದು ವರ್ಷಗಳ ಕಾಲ ಕೆಪಿಸಿಸಿ ಸದಸ್ಯರಾಗಿ ಕಾರ್ಯ ನಿರ್ವಹಿಸಿ ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ರವರ ಸರ್ಕಾರದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡು ಉತ್ತಮ ಸೇವೆ ಸಲ್ಲಿಸಿ, ಪಕ್ಷದ ವರಿಷ್ಠ ಮಂಡಳಿಯ ವಿಶ್ವಾಸ ಗಳಿಸುವಲ್ಲಿ ಹಾಗೂ  ಜಿಲ್ಲೆಯ ಜನಸಾಮಾನ್ಯರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವುದಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ನಡೆದ ಹೋರಾಟದಲ್ಲಿ ಇವರು ಕೂಡ ಕೊಪ್ಪಳ ಜಿಲ್ಲೆಯಿಂದ ಮುಂಚೂಣಿಯಲ್ಲಿ ಇದ್ದರು ಅಲ್ಲದೆ ಕರ್ನಾಟಕ ರಾಜ್ಯ ವಕ್ಫ್‌  ಮಂಡಳಿಯಲ್ಲಿ ಸದಸ್ಯರಾಗಿ ಹಣಕಾಸು ಮತ್ತು ಕಾನೂನು ಉಪಸಮಿತಿಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ,

ಸದರಿಯವರ ಉತ್ತಮ ಜನಪರ ಸೇವೆಗಳನ್ನು ಪರಿಗಣಿಸಿ ಪಕ್ಷದಲ್ಲಿ ಈಗ ಕಾನೂನು ಮತ್ತು ಮಾನವ ಹಕ್ಕುಗಳು ಆರ್ಟಿಐ ಕಾಯ್ದೆಗಳ ವಿಭಾಗ ದಲ್ಲಿ ಇನ್ನಷ್ಟು ಉತ್ತಮ ಮತ್ತು ಕಾನೂನು ಸೇವೆ ಮಾಡಲು ಸದರಿಯವರಿಗೆ ರಾಷ್ಟ್ರೀಯ ಸಮಿತಿಯಲ್ಲಿ ಹಿರಿಯ ಸದಸ್ಯರನ್ನಾಗಿ ನೇಮಕ ಮಾಡಿ ಡಾ, ಅಭಿಷೇಕ್ ಸಿಂಗ್ವಿ  ರವರು ಆದೇಶ ಹೊರಡಿಸಿದ್ದಾರೆ, ಸದರಿ ಉನ್ನತ  ರಾಷ್ಟ್ರೀಯ ಸಮಿತಿಯಲ್ಲಿ  ಹಿರಿಯ ಸದಸ್ಯರಾಗಿ ಕೊಪ್ಪಳದ ಹಿರಿಯ ನ್ಯಾಯವಾದಿ ಹಾಗೂ ಹಿರಿಯ ಕಾಂಗ್ರೆಸ್ಸಿಗ ಆಸಿಫ್ ಅಲಿ ಅವರನ್ನು ನೇಮಕ ಮಾಡಿರುವುದಕ್ಕೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ , ಎ ಐ ಸಿ ಸಿ ಕಾನೂನು ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಡಾ, ಅಭಿಷೇಕ್ ಸಿಂಗ್ವಿ, ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಜಮ್ಮು ಕಾಶ್ಮೀರ್ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಮತ್ತು ರಾಜ್ಯಸಭಾ ಸದಸ್ಯ ಡಾ, ಸಯ್ಯದ್ ನಾಸಿರ್ ಹುಸೇನ್, ಕರ್ನಾಟಕ ಸರ್ಕಾರದ ಮೇಲ್ಮನೆ ಮುಖ್ಯ ಸಚೇತಕ ಸಲೀಂ ಅಹಮದ್, ಹಾಗೂ ಕರ್ನಾಟಕ ರಾಜ್ಯ ವಕ್ಫ್‌  ಮಂಡಳಿಯ ಅಧ್ಯಕ್ಷರು ಹಾಗೂ ಗುಲ್ಬರ್ಗ ಖ್ವಾಜಾ ಬಂದೇ ನವಾಜ್ ದರ್ಗಾದ ಪೀಠಾಧಿಪತಿ ಹಜರತ್ ಸೈಯದ್ ಶಾಹ ಅಲಿ ಅಲ್ ಹುಸೇನಿ ರವರುಗಳಿಗೆ ಆಸಿಫ್ ಅಲಿ ಅವರ ಸ್ನೇಹಿತರ ಬಳಗ ಅಭಿಮಾನಿಗಳ ಬಳಗ ಮತ್ತು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರು  ಮತ್ತು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ,