ಹಿರಿಯ ನ್ಯಾಯವಾದಿ ಸಿ.ಎಂ. ಕುಲಕರ್ಣಿ ನಿಧನ

Senior Advocate C.M. Kulkarni passed away

ಹಿರಿಯ ನ್ಯಾಯವಾದಿ ಸಿ.ಎಂ. ಕುಲಕರ್ಣಿ ನಿಧನ 

       ರಾಣೇಬೆನ್ನೂರು 12 : ರಾಣೇಬೆನ್ನೂರು ನಗರದ ಅಶೋಕ ನಗರ ನಿವಾಸಿ ಹಿರಿಯ ನ್ಯಾಯವಾದಿ ಹಾಗೂ ಹಾವೇರಿ ಭಾಗದ ಪ್ರಸಿದ್ಧ ನ್ಯಾಯವಾದಿಯಾಗಿದ್ದ ಸಿ.ಎಂ. ಕುಲಕರ್ಣಿ (94) (ಚಿಕ್ಕೋ ಮಲ್ಹಾರ ಕುಲಕರ್ಣಿ) ಅವರು ತಮ್ಮ ರಾಣೇಬೆನ್ನೂರಿನ ಸ್ವಗೃಹದಲ್ಲಿ ದಿ. 12 ಬುಧವಾರ ಮುಂಜಾನೆ  ನಿಧನರಾದರು.  

     ಸಿ.ಎಂ. ಕುಲಕರ್ಣಿ ವಕೀಲರು 1956 ರಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿ ಸುಮಾರು 64 ವರ್ಷಗಳ ಸುದೀರ್ಘ ನ್ಯಾಯವಾದಿಗಳಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೂ ಅನೇಕ ಸಂಘ ಸಂಸ್ಥೆಗಳ ಹಾಗೂ ಅನೇಕ ಬ್ಯಾಂಕುಗಳಿಗೆ ಕಾನೂನು ಸಲೆಹೆಗಾರರಾಗಿ ಮತ್ತು ಸಮಾಜದ ಎಲ್ಲಾ ವರ್ಗದವರೊಂದಿಗೆ ಸಾಂದರ್ಭಿಕವಾಗಿ ಸಲಹೆ ಸೂಚನೆ ಕೊಡುತ್ತಾ ಯಶಸ್ವಿ ಜೀವನ ನಡೆಸಿದ  ಅವರು ಹಾವೇರಿ ನಗರದ ಪುರಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.   

    ಮೃತರು ನಾಲ್ವರು ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.