ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆ

ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆ Selection for the divisional-level cricket tournament

ಲೋಕದರ್ಶನ ವರದಿ 

ಸನ್ಮತಿ ವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ..! 

ಕಾಗವಾಡ : ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರ ಸಮಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ದಿ. 31 ರಂದು ಸನ್ಮತಿ ವಿದ್ಯಾಲಯದ ಮೈದಾನದಲ್ಲಿ ಸನ್ 2026-27 ನೇ ಸಾಲಿನ ತಾಲೂಕಾ ಪ್ರೌಢಶಾಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳು ಹಮ್ಮಿಕೊಳ್ಳಲಾಗಿದ್ದು, ಸನ್ಮತಿ ಪ್ರೌಢಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು, ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕಯಾಗಿದ್ದಾರೆ.  ತಾಲೂಕಿನ ಎಲ್ಲ ಪ್ರೌಢಶಾಲೆಯ ತಂಡಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಪಂದ್ಯಾವಳಿಗಳ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ದೈಹಿಕ ಶಿಕ್ಷಣ ಪರೀವೀಕ್ಷಕರಾಗಿ ಅಧಿಕಾರ ವಹಿಸಿಕೊಂಡ ಎಸ್‌.ಆರ್‌. ನೂರಜೆ ಅವರನ್ನು ಸನ್ಮಯಿ ವಿದ್ಯಾಲಯದ ವತಿಯಿಂದ ಸನ್ಮಾನಿಸಿಲಾಯಿತು. 

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎಂ.ವೈ. ಪೂಜೇರಿ, ಭರತ ಭಿಲವಡೆ, ಜಯಪಾಲ ದೇಸಾಯಿ, ಸನ್ಮತಿ ವಿದ್ಯಾಲಯದ ಮುಖ್ಯೋದ್ಯಾಪಕಿ ಎಂ.ಎನ್‌. ಕಾಳೇನಟ್ಟಿ, ಶಿಕ್ಷಕರಾದ ಎಂ.ಕೆ. ಕಾಂಬಳೆ, ಎಸ್‌.ಬಿ. ಇರಾಜ, ಎ.ಕೆ. ಪಾಟೀಲ, ಎಂ.ಎಸ್‌. ಸಪ್ತಸಾಗರೆ, ಎಂ.ಎಂ. ಕಾಂಬಳೆ, ಎಸ್‌.ಎಸ್‌. ಅಂಕಲಕೊಪ್ಪೆ, ಎಚ್‌.ಪಿ. ನಾಯಿಕ, ಎಸ್‌.ಡಿ. ಮುತಾಲಿಕ, ಜಿ.ಎನ್, ಹೆಬ್ಬಾಳೆ, ಎಸ್‌.ಎಸ್‌. ಭಂಡಾರೆ, ಎಂ.ಎಸ್‌. ಮುತವಲ್ಲಿ, ಎ.ಎಸ್‌. ಕುರಾಡೆ, ಎಸ್‌.ಪಿ ಅಸೋದೆ, ಆರ್‌.ಜಿ. ಮಾಂಗೂರೆ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.