ಹಣರಹಿತ ಆರ್ಥಿಕತೆಯಿಂದ ಸುಭದ್ರ ವ್ಯವಹಾರ: ತಾಳಿಕೋಟಿಯಲ್ಲಿ ಎನ್.ಎಸ್.ಎಸ್ .ಶಿಬಿರ
Secure business through cashless economy: NSS camp in Talikoti
ತಾಳಿಕೋಟಿ 08: ಇಲ್ಲಿನ ಎಸ್.ಕೆ. ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಆಶ್ರಯ ಕಾಲೋನಿಯಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸೇವಾ ಯೋಜನೆ (ಓಖಖ) ವಿಶೇಷ ಶಿಬಿರವು 2ನೇ ದಿನ ಮಂಗಳವಾರ ಸಂಭ್ರಮದಿಂದ ಆರಂಭಗೊಂಡಿತು.ಶಿಬಿರದ ಅಂಗವಾಗಿ ಮುಂಜಾನೆ ಎನ್.ಎಸ್.ಎಸ್ ಗೀತೆಯ ಗಾಯನ ಹಾಗೂ ಯೋಗಾಭ್ಯಾಸ ನಡೆಸಲಾಯಿತು. ಬಳಿಕ ವಿದ್ಯಾರ್ಥಿಗಳು ಆಶ್ರಯ ಕಾಲೋನಿಯ ಹನುಮಾನ್ ದೇವಾಲಯ ಮತ್ತು ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನದಲ್ಲಿ ತೊಡಗಿಸಿಕೊಂಡರು.ಶಿಬಿರದ ಮೊದಲ ದಿನ “ಹಣರಹಿತ ಅರ್ಥವ್ಯವಸ್ಥೆ” ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮುಖ್ಯ ಉಪನ್ಯಾಸಕರಾದ ಎಸ್.ಎಸ್. ನೆಲ್ಲಗಿ ಅವರು ಮಾತನಾಡಿ, ಹಣರಹಿತ ವ್ಯವಹಾರಗಳಿಂದ ಆರ್ಥಿಕ ಸ್ಥಿರತೆ ಸಾಧಿಸಬಹುದು ಹಾಗೂ ಡಿಜಿಟಲ್ ಪಾವತಿಗಳಿಂದ ಪಾರದರ್ಶಕತೆ ಹೆಚ್ಚುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಹಣದ ಮೌಲ್ಯ ಅರಿತು ವಂಚನೆಗಳಿಂದ ದೂರವಿದ್ದು, ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಎಮ್.ಆರ್. ಕತ್ತಿ ಅವರು ಮಾತನಾಡಿ, ಹಣರಹಿತ ವ್ಯವಸ್ಥೆಯಿಂದ ಭಾರತ ಜಾಗತಿಕ ಆರ್ಥಿಕತೆಯಲ್ಲಿ ಮುಂಚೂಣಿಗೆ ಬರಲಿದೆ. ಎನ್.ಎಸ್.ಎಸ್ ಶಿಬಿರಗಳು ವಿದ್ಯಾರ್ಥಿಗಳ ಸಾಮಾಜಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದರು.
ಉಪನ್ಯಾಸಕರಾದ ಯು.ಎನ್. ಮಂಗೊಂಡ ಅವರು, ಡಿಜಿಟಲ್ ವ್ಯವಹಾರಗಳಿಂದ ನಿತ್ಯ ಜೀವನದಲ್ಲಿ ಭದ್ರತೆ ಮತ್ತು ಗೌಪ್ಯತೆ ಕಾಪಾಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಆರ್.ಎಂ. ಬಂಟನೂರ ಅವರು ಮಾತನಾಡಿ, ಬಸ್ ಪ್ರಯಾಣದಿಂದ ಹಿಡಿದು ದೊಡ್ಡ ಉದ್ಯಮಗಳವರೆಗೆ ಹಣರಹಿತ ವ್ಯವಹಾರ ವ್ಯಾಪಕವಾಗಿದ್ದು ಇದರ ಸುರಕ್ಷತೆ ಕುರಿತು ವಿದ್ಯಾರ್ಥಿಗಳು ಅಗತ್ಯ ಜ್ಞಾನ ಹೊಂದಬೇಕು ಎಂದು ಹೇಳಿದರು. ಪ್ರಶಿಕ್ಷಣಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಜ್ಯೋತಿ ಮತ್ತು ತಂಡ ಪ್ರಾರ್ಥನೆ ನೆರವೇರಿಸಿದರು.
ಪಾರ್ವತಿ ಮತ್ತು ತಂಡ ಎನ್.ಎಸ್.ಎಸ್ ಗೀತೆಯನ್ನು ಹಾಡಿದರು. ಉಮಾಶ್ರೀ ಸ್ವಾಗತಿಸಿ ಪರಿಚಯಿಸಿದರು. ಸಂತೋಷ ಬಿರಾದಾರ್ ಪುಷ್ಾರೆ್ಪಣ ನೆರವೇರಿಸಿದರು. ಅನೀಶಾ ವಂದನಾರೆ್ಣ ಸಲ್ಲಿಸಿದರು. ಮಹಾಲಿಂಗ ಕಾರ್ಯಕ್ರಮ ನಿರ್ವಹಿಸಿದರು.ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿಗಳಾದ ಎ.ಎ. ಗಂಗನಗೌಡ ಕಾರ್ಯದರ್ಶಿ ಗಳಾದ ರೇಷ್ಮಾ ಚಲವಾದಿ ಹಾಗೂ ಎನ್ ಎಸ್ ಎಸ್ ಶಿಬಿರಾರ್ಥಿಗಳು, ಮಹಾವಿದ್ಯಾಲಯದ ಸರ್ವಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 