ಎರಡನೆ ದಿನದ ಪಂಚಕಲ್ಯಾಣ ಪ್ರತಿಷ್ಠಾಪಣಾ ಮಹೋತ್ಸವ ಸಮಾರಂಭ

Second Day Panchkalyana Pratishapana Mahotsava Ceremony

ಎರಡನೆ ದಿನದ ಪಂಚಕಲ್ಯಾಣ ಪ್ರತಿಷ್ಠಾಪಣಾ ಮಹೋತ್ಸವ ಸಮಾರಂಭ 

ಯಮಕನಮರಡಿ 4: ಸಮೀಪದ ಉ ಖಾನಾಪುರ ಗ್ರಾಮದಲ್ಲಿ ಪ್ರಾರಂಬವಾದ ಮಂಗಳವಾರ ದಿ 4 ರಂದು ಮಾಘ ಶುಕ್ಲ ಸಪ್ತಮಿಮಂಗಳವಾರದಂದು ಗರ್ಬ ಕಲ್ಯಾಣ ಉತ್ತರಾರ್ಧ ನವಗ್ರಹ ಶಾಂತಿ ವಿಧಾನ ಸಮಾರಂಭಕ್ಕೆ ಮಂಗಳವಾಧ್ಯ ಮೇಳದೊಂದಿಗೆ. ಇನ್ನಿತರ ಸೌಧರ್ಮ ಇಂದ್ರ ಇಂದ್ರಾಯಿಣಿ ಆನೆಯ ಮೇಲಿಂದ ಭವ್ಯ ಮೇರವಣಿಗೆ ಸಹಿತ ಪೂಜಾ ಮಂಟಪಕ್ಕೆ ಕರೆತಂದು ಕುಮಾರಿಯರ ಸಹಿತ ಭವ್ಯ ಮಂಗಳ ಕುಂಭ ತಂದು ಜೀನೆಂದ್ರ ಭಗವಂತರ ಪಂಚಾಮೃತ ಅಭಿಷೇಕ ಮಹಾಶಾಂತಿ ಧಾರಾ ಮಂತ್ರಪಠಣ ಯಾಗಮಂಡಲ ವಿಧಾನ ಲಘು ಶಾಂತಿಕ ನವಗ್ರಹ ಶಾಂತಿ ವಿಧಾನ ಗರ್ಭಕಲ್ಯಾಣ, ಅರ್ಘ್ಯಪ್ರಧಾನ, ಶ್ರೀ ಬಯಲಿಕ ನೃತ್ಯ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಉ ಖಾನಾಪುರ ಗ್ರಾಮದ ಷ ಬ್ರ ಸಿದ್ದಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಆಗಮಿಸಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ ಭಕ್ತರೊಂದಿಗೆ ಕುಣಿದು ಕುಪ್ಪಳಿಸಿದರು. ಕಾರ್ಯಕ್ರಮದಲ್ಲಿ ಪಂಚಕಲ್ಯಾಣ ಕಮೀಟಿಯ ಸರ್ವಸಧಸ್ಯರು ಇಂದ್ರ ಇಂದ್ರಾಯಿಣಿಗಳು ಸಕಲ ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು.