ವಿಜ್ಞಾನದಿಂದ ಸೃಜನಶೀಲತೆ ಹೆಚ್ಚಾಗುವ ಜತೆಗೆ ಕಲಿಕೆಯ ಗುಣಮಟ್ಟದಲ್ಲಿ ಸುಧಾರಣೆ ಸಾಧ್ಯ : ಬಡಿಗೇರ್ ಜಿಲಾನ್

Science can increase creativity and improve the quality of learning: Badiger Jilan

ವಿಜ್ಞಾನದಿಂದ ಸೃಜನಶೀಲತೆ ಹೆಚ್ಚಾಗುವ ಜತೆಗೆ ಕಲಿಕೆಯ ಗುಣಮಟ್ಟದಲ್ಲಿ ಸುಧಾರಣೆ ಸಾಧ್ಯ : ಬಡಿಗೇರ್ ಜಿಲಾನ್ 

ಕಂಪ್ಲಿ 10: ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಾಗುವ ಜತೆಗೆ ಕಲಿಕೆಯ ಗುಣಮಟ್ಟದಲ್ಲಿ ಸುಧಾರಣೆ ಕಾಣಲು ಸಾಧ್ಯ ಎಂದು ಮುಖ್ಯಗುರು ಬಡಿಗೇರ್ ಜಿಲಾನಸಾಬ್ ಅಭಿಪ್ರಾಯ ವ್ಯಕ್ತಪಡಿಸಿದರು.  ಪಟ್ಟಣದ ಕಂಪ್ಲಿ-ಕೋಟೆಯಲ್ಲಿರುವ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾತನಾಡಿ, ವಿಜ್ಞಾನ ಕೇವಲ ವಸ್ತು ಪ್ರದರ್ಶನವಲ್ಲ ಬದಲಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ, ಸೃಜನಶೀಲತೆ ಬೆಳೆಸುವ ಒಂದು ಮಾರ್ಗ. ವಿಜ್ಞಾನದ ಹೊರೆತು ಯಾವುದು ಇಲ್ಲ. ವಿಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ವೈಜ್ಞಾನಿಕ ಚಿಂತನೆ ಹೊಂದುವುದರ ಮೂಲಕ ಮೂಢನಂಬಿಕೆ ಹೊಗಲಾಡಿಸಬೇಕು ಎಂದರು.  ಶಾಲೆಯ ಕಾರ್ಯದರ್ಶಿ ಮಾಳಿಗೆ ಸಂತೋಷ ಕುಮಾರ ಮಾತನಾಡಿ, ‘ಮಕ್ಕಳ ಜ್ಞಾನ ವೃದ್ಧಿಗೆ ಪ್ರದರ್ಶನಗಳು ಪೂರಕವಾಗಿವೆ. ಅವರಲ್ಲಿ ತಂತ್ರಜ್ಞಾನ, ಪರಿಸರ ಕಾಳಜಿ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಅವರಲ್ಲಿರುವ ಸೃಜನಶೀಲತೆಗೆ ಉತ್ತೇಜನ ಸಿಗುತ್ತದೆ’ ಎಂದರು. ನಂತರ ತಂತ್ರಜ್ಞಾನ, ವಿಜ್ಞಾನದ ಆವಿಷ್ಕಾರಗಳು, ಭಾಗವಹಿಸಿದ್ದ ಮಕ್ಕಳು ತಾವು ತಯಾರಿಸಿದ ಮನುಷ್ಯನ ದೇಹದ ಭಾಗಗಳು ಕಾಡುಪ್ರಾಣಿಗಳು ಹೂಗಳ ಹೆಸರು ತರಕಾರಿಗಳ ಹೆಸರು ಹಣ್ಣುಗಳ ಹೆಸರು ಉತ್ತಮ ಆಹಾರ ಪದ್ಧತಿ ಎಲೆಗಳ ವಿಧಗಳು ಚಿಟ್ಟೆಯ ಜೀವನಚಕ್ರ ಪರಿಸರ ಸ್ನೇಹಿ ಮನೆ ದ್ವಿತೀಯ ಸಂಶ್ಲೇಷಣೆ ಮಳೆ ನೀರು ಕೊಯ್ಲು ಪದ್ಧತಿ  ಪ್ರಾಕೃತಿಕ ಸಂಪತ್ತು ರಕ್ಷಣೆ, ಬಣ್ಣಗಳ ವರ್ಗೀಕರಣ, ಬೆಳಕಿನ ಶಕ್ತಿ ಬಳಕೆ, ಗಾಳಿ, ನೀರಿನ ಮಿತ ಬಳಕೆ, ಪ್ರಾಣಿ ಪಕ್ಷಿ ಸಂರಕ್ಷಣೆ, ಹಸಿರು ಯೋಜನೆ , ಆಹಾರ ಪದ್ದತಿ, ಆಧುನಿಕ ಮನುಷ್ಯರ ಜೀವನ ಶೈಲಿ, ಯಂತ್ರಗಳ ಬಳಕೆ ಸೇರಿದಂತೆ ಇತ್ಯಾದಿ ವಿಜ್ಞಾನದ ಸುಮಾರು 50 ಕ್ಕೂ ಅಧಿಕ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಮಾದರಿಗಳು ಗಮನ ಸೆಳೆದವು. ಈ ವಸ್ತು ಪ್ರದರ್ಶನ ಕಣ್ತುಂಬಿಕೊಂಡ ಪೋಷಕರು ಹಾಗೂ ಸಾರ್ವಜನಿಕರು ಮಕ್ಕಳ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.